24 ವಿಚಾರಣಾಧೀನ ಕೈದಿಗಳಿಗೆ ಕೊರೋನಾ

ಯಾದಗಿರಿ ಜಿಲ್ಲೆಯ ಸುರಪುರ ಜೈಲಿನ 24 ವಿಚಾರಣಾಧೀನ ಕೈದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಕೈದಿಗಳನ್ನು ಪ್ರತ್ಯೇಕ ಸೆಲ್ ಗಳಲ್ಲಿ ಇಟ್ಟರೂ ಕೊರೋನಾ ಪಾಸಿಟಿವ್ ಬಂದಿರುವುದಕ್ಕೆ, ಜೈಲಿನ ಅಧಿಕಾರಿಗಳು ನಿಬ್ಬೆರಗಾಗಿದ್ದಾರೆ. ಈ ಎಲ್ಲಾ ಕೈದಿಗಳೊಂದಿಗೆ ಸಂಪರ್ಕಕ್ಕೆ ಬಂದಿರುವ ಊಟದ ಸಿಬ್ಬಂದಿ ಹಾಗೂ ಜೈಲು ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಒಟ್ಟು ಜೈಲಿನ 13 ಜನ ಸಿಬ್ಬಂದಿ ಹಅಗೂ ಇಬ್ಬ ಊಟ ನೀಡುವ ಸಿಬ್ಬಂದಿಗೆ ಕೊರೋನಾ ಟೆಸ್ಟ್ ಮಾಡಿಸಲು ಸೂಚಿಸಲಾಗಿದೆ.

ಕೈದಿಗಳನ್ನು ಕೋವಿಡ್ ಸೆಂಟರ್ ಗೆ ರವಾನೆ ಮಾಡದೇ ಜೈಲಿನಲ್ಲಿಯೇ ಕ್ವಾರಂಟೈನ್ ಮಾಡಲಾಗಿದೆ. ಎಲ್ಲಾ ಕೊರೋನಾ ಸೋಂಕಿತ ಕೈದಿಗಳನ್ನು ಚಿಕಿತ್ಸೆ ನೀಡುವ ಕಾರಣದಿಂದ ಒಂದೇ ಸೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಒಂದೇ ದಿನಕ್ಕೆ 190 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇವು ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ.

LEAVE A REPLY

Please enter your comment!
Please enter your name here