24 ಆ್ಯಸಿಡ್ ಬಾಟಲ್ ಖರೀದಿಸಿದ ಖ್ಯಾತ ಹೀರೋಯಿನ್.. ಏಕೆ ಗೊತ್ತಾ..?

ಆ್ಯಸಿಡ್ ಮಾರುವ ವ್ಯಕ್ತಿ.. ಖರೀದಿಸುವ ವ್ಯಕ್ತಿಯ ಗುರುತಿನ ಚೀಟಿ ಪರಿಶೀಲಿಸಬೇಕು. ಅಡ್ರೆಸ್ ಪ್ರೂಫ್ ತೆಗೆದುಕೊಳ್ಳಬೇಕು. ನಂತರ ಇಂತಹ ವ್ಯಕ್ತಿ ಆ್ಯಸಿಡ್ ಖರೀದಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು. ಆದರೆ, ಇದ್ಯಾವುದು ನಡೆಯುತ್ತಿಲ್ಲ ಎನ್ನುತ್ತಾರೆ ಕನ್ನಡತಿ, ಖ್ಯಾತ ಬಾಲಿವುಡ್ ತಾರೆ ದೀಪಿಕಾ ಪಡುಕೊಣೆ.

ಚಿಲ್ಲರೆ ಅಂಗಡಿಗಳಲ್ಲಿಯೂ ಬೇಕಾಬಿಟ್ಟಿಯಾಗಿ ಆ್ಯಸಿಡ್ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಒಂದು ರೀತಿ ನೀತಿ ಇಲ್ಲವಾಗಿದೆ. ನಮ್ಮ ದೇಶದಲ್ಲಿ ಆ್ಯಸಿಡ್ ಖರೀದಿಸುವುದು ಸುಲಭವಾಗಿದೆ. ಬೇಕಿದ್ದರೆ ನೋಡಿ ನನ್ನ ಸಿಬ್ಬಂದಿ ಮೂಲಕ 24 ಆ್ಯಸಿಡ್ ಬಾಟಲ್ ಖರೀದಿಸಿದ್ದೇನೆ ಎಂದು ನೋವು, ಆಶ್ಚರ್ಯ ವ್ಯಕ್ತಪಡಿಸುತ್ತಾರೆ ನಟಿ ದೀಪಿಕಾ ಪಡುಕೋಣೆ. ಆ್ಯಸಿಡ್ ಎಲ್ಲಿ ಸಿಗುತ್ತದೆ..? ಹೇಗೆ ಸಿಗುತ್ತದೆ ಎಂಬುದನ್ನು ತಿಳಿಯಲು ದೀಪಿಕಾ ಪಡುಕೋಣೆ ಮುಂಬೈನ ಹಲವೆಡೆ ತಮ್ಮ ಸಿಬ್ಬಂದಿ ಮೂಲಕ ರಹಸ್ಯ ಕಾರ್ಯಾಚರಣೆ ನಡೆಸಿದಾಗ ಈ ವಾಸ್ತವಾಂಶ ಬಯಲಾಗಿದೆ.

ದೀಪಿಕಾ ಪಡುಕೋಣೆ ಪ್ರಧಾನ ಭೂಮಿಕೆಯಲ್ಲಿರುವ ಸಿನಿಮಾ ಛಪಾಕ್. ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಜೀವನಾಧಾರಿತ ಈ ಸಿನಿಮಾದಲ್ಲಿ ದೀಪಿಕಾ ಲಕ್ಷ್ಮಿ ಪಾತ್ರ ನಿಭಾಯಿಸಿದ್ದಾರೆ. ಜನವರಿ 10ರಂದು ಬಿಡುಗಡೆಯಾದ ಈ ಸಿನಿಮಾಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತದೆ. ಅದರಲ್ಲೂ ದೀಪಿಕಾ ಸಹಜ ನಟನೆಗೆ ನೂರು ಅಂಕ ಬಿದ್ದಿವೆ. ಛಪಾಕ್ ಸಿನಿಮಾ ಹಿನ್ನೆಲೆಯಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರನ್ನು ಸಮಾಜ ಹೇಗೆ ನೋಡುತ್ತದೆ ಎಂಬ ಬಗ್ಗೆ ದೀಪಿಕಾ ಪಡುಕೋಣೆ ವಿಡಿಯೋ ಒಂದನ್ನು ರಿಲೀಸ್ ಮಾಡಿದ್ದರು. ಇದೀಗ ಆ್ಯಸಿಡ್ ಬೇಕಾಬಿಟ್ಟಿ ಲಭ್ಯತೆ ಕುರಿತ ರಹಸ್ಯ ಕಾರ್ಯಾಚರಣೆಯ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ವ್ಯಾಪಾರಿ, ವಿದ್ಯಾರ್ಥಿ, ಪ್ಲಂಬರ್.. ಹೀಗೆ ನಾನಾ ವೇಷಗಳಲ್ಲಿ ಅಂಗಡಿಗಳಿಗೆ ಹೋದ ದೀಪಿಕಾ ಸಿಬ್ಬಂದಿ ಆ್ಯಸಿಡ್ ಖರೀದಿ ಮಾಡಿದರು. ಇದನ್ನೆಲ್ಲಾ ದೀಪಿಕಾ ಪಡುಕೋಣೆ ಕಾರ್‍ನಲ್ಲಿ ಕುಳಿತು ವೀಕ್ಷಣೆ ಮಾಡಿದರು. ಬಹುತೇಕ ಅಂಗಡಿಗಳಲ್ಲಿ ಏನನ್ನೂ ಕೇಳದೇ ಆ್ಯಸಿಡ್ ಮಾರಾಟ ಮಾಡಿದರು. ಕೆಲವರು ಮಾತ್ರ ಪ್ರೂಫ್ ಕೇಳಿ ವಾಪಸ್ ಕೇಳಿದರು. ಆ್ಯಸಿಡ್ ಮಾರಾಟಕ್ಕೆ ಸುಪ್ರೀಂಕೋರ್ಟ್ ಹಲವು ನಿಯಮ ರೂಪಿಸಿದ್ದರೂ, ಒಂದೇ ದಿನದಲ್ಲಿ 24 ಬಾಟಲ್ ಆ್ಯಸಿಡ್ ಖರೀದಿ ಮಾಡಿದ್ದೇವೆ ಅಂದ್ರೆ ನಂಬಲು ಆಗುತ್ತಿಲ್ಲ ಎಂದು ದೀಪಿಕಾ ಪಡುಕೋಣೆ ಆಶ್ಚರ್ಯ ವ್ಯಕ್ತಪಡಿಸಿದರು. ಆ್ಯಸಿಡ್ ಮಾರಾಟ, ಖರೀದಿ ಎರಡನ್ನೂ ನಿಲ್ಲಿಸಬೇಕೆಂದು ಮನವಿ ಮಾಡಿದರು.

LEAVE A REPLY

Please enter your comment!
Please enter your name here