235 ಮಂದಿ ಬಿಎಸ್‌ಎಫ್‌ ಸೈನಿಕರಿಗೆ ಕೊರೋನಾ ಸೋಂಕು

ಮಹಾಮಾರಿ ಕೊರೋನಾ ವೈರಸ್‌ ಭಾರತೀಯ ಸೇನೆಗೂ ಹಬ್ಬಿದೆ. ಅರೆಸೇನಾ ಪಡೆ ಆಗಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌)ನ 30 ಯೋಧರಿಗೆ ಕೊರೋನಾ ಸೋಂಕು ತಗುಲಿದೆ.

ಇದರೊಂದಿಗೆ ಕೊರೋನಾ ಸೋಂಕಿತರಾದ ಬಿಎಸ್‌ಎಫ್‌ ಯೋಧರ ಸಂಖ್ಯೆ ೨೩೫ಕ್ಕೆ ಏರಿಕೆ ಆಗಿದೆ. ಕೊರೋನಾ ವೈರಸ್‌ಗೆ ನಿನ್ನೆ ಬಿಎಸ್‌ಎಫ್‌ನ ಇಬ್ಬರು ಯೋಧರು ಪ್ರಾಣ ಕಳೆದುಕೊಂಡಿದ್ದರು.

ಹೊಸದಾಗಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿರುವ 30 ಬಿಎಸ್‌ಎಫ್‌ ಯೋಧರಲ್ಲಿ 24 ಸೈನಿಕರು ತ್ರಿಪುರದಲ್ಲೂ 6 ಮಂದಿ ದೆಹಲಿಯಲ್ಲೂ ನಿಯೋಜನೆಗೊಂಡಿದ್ದರು.

ಮುಂಬೈ ಏರ್‌ಪೋರ್ಟ್‌ನಲ್ಲಿ ನಿಯೋಜನೆಗೊಂಡಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಓರ್ವ ಯೋಧ ಕೊರೋನಾ ಸೋಂಕಿಗೆ ಬಲಿ ಅಗಿದ್ದರು.

ಕೇಂದ್ರೀಯ ಅರೆಸೇನಾ ಪಡೆಯಲ್ಲಿ ಕೊರೋನಾ ಸೋಂಕಿಗೆ ಒಳಗಾದ ಯೋಧರ ಸಂಖ್ಯೆ  500ರ ಗಡಿ ದಾಟಿದೆ.

LEAVE A REPLY

Please enter your comment!
Please enter your name here