ಉಪ ಚುನಾವಣೆ ಫಲಿತಾಂಶ ಬಂದು ಎರಡು ತಿಂಗಳಾಗುತ್ತಾ ಬಂದರೂ ಆದಷ್ಟು ಬೇಗ ಮಂತ್ರಿಗಳಾಗುವ ಗೆದ್ದ ಹೊಸ ಶಾಸಕರ ಆಸೆ ಈಡೇರುವುದು ವಿಳಂಬವಾಗುತ್ತಲೇ ಇದೆ. ಈ ವಿಳಂಬದ ನಡುವೆಯೇ ಸಾಮೂಹಿಕವಾಗಿ ರಾಜೀನಾಮೆ ಕೊಟ್ಟು ಬಿಜೆಪಿಗೆ ಹೋದ ಗುಂಪಲ್ಲೇ ಈಗ ಭಿನ್ನಮತದ ಕಿಡಿ ಹೊತ್ತಿಕೊಂಡಿದೆ.

ಮೈಸೂರಲ್ಲಿ ಮಾತಾಡಿದ ಯಶವಂತಪುರದ ಶಾಸಕ ಎಸ್‌ ಟಿ ಸೋಮಶೇಖರ್‌, ಸೋತವರಿಗೆ ಸಚಿವ ಸ್ಥಾನ ಕೇಳಲು ಹೇಗೆ ಸಾಧ್ಯ ಎಂದು ನೇರವಾಗಿಯೇ ಹುಣಸೂರಲ್ಲಿ ಸೋತಿದ್ದ ಮಾಜಿ ಶಾಸಕ ಎಚ್‌ ವಿಶ್ವನಾಥ್‌ ವಿರುದ್ಧ ಕಿಡಿಕಾರಿದರು. ಅಷ್ಟೇ ಅಲ್ಲ ಅವತ್ತಿನ ಸ್ಥಿತಿಯೇ ಬೇರೆ ಇತ್ತು. ಇವತ್ತಿನ ಸ್ಥಿತಿಯೇ ಬೇರೆ ಇದೆ ಎಂದು ಹೇಳುವ ಮೂಲಕದ ಫಲಿತಾಂಶದ ಬಳಿಕ ತಮ್ಮದೇ ಗುಂಪಲ್ಲಿ ಆಗುತ್ತಿರುವ ಬದಲಾವಣೆಗಳ ಸುಳಿವು ಕೊಟ್ಟಿದ್ದಾರೆ.

ʻಉಪ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ವಿಶ್ವನಾಥ್‌ ಮತ್ತು ಶಂಕರ್‌ಗೆ ಯಡಿಯೂರಪ್ಪ ಹೇಳಿದ್ದರು. ನಿಮ್ಮ ಕ್ಷೇತ್ರಗಳಲ್ಲಿ ರಿಪೋರ್ಟ್‌ ನಿಮ್ಮ ಪರವಾಗಿಲ್ಲ. ಚುನಾವಣೆಗೆ ಸ್ಪರ್ಧಿಸುವುದು ಬೇಡ, ವಿಧಾನಪರಿಷತ್‌ಗೆ ಆಯ್ಕೆ ಮಾಡಿಸುವುದಾಗಿ ಹೇಳಿದ್ದರು. ಶಂಕರ್‌ ಯಡಿಯೂರಪ್ಪ ಮಾತು ಕೇಳಿದರು. ಆದರೆ ವಿಶ್ವನಾಥ್‌ ತಮ್ಮ ಕ್ಷೇತ್ರದಲ್ಲಿ ತಾವು ಗೆದ್ದೇ ಗೆಲ್ಲುವುದಾಗಿ ಹೇಳಿ ಬಿ ಫಾರಂ ಪಡೆದುಕೊಂಡರು. ಅವರು ಸೋತಿರುವಾಗ ಅವರಿಗೆ ಸಚಿವ ಸ್ಥಾನ ಕೇಳಲು ಹೇಗೆ ಸಾಧ್ಯ. ಹಿಂದೆ ನಾವೆಲ್ಲ ಒಟ್ಟಾಗಿ ಸಭೆ ಮಾಡುತ್ತಿದ್ದೆವು. ಆದರೆ ಈಗ ಸ್ಥಿತಿ ಬದಲಾಗಿದೆ. ಆ ಸ್ಥಿತಿಯೇ ಬೇರೆ, ಈ ಸ್ಥಿತಿಯೇ ಬೇರೆ ಎಂದು ಎಸ್‌ಟಿ ಸೋಮಶೇಖರ್‌ ಹೇಳಿದ್ದಾರೆ.

ಸರ್ಕಾರ ಬೀಳಿಸಿದ ಗುಂಪಲ್ಲಿದ್ದ ಗೆಳೆಯನ ಮಾತಿಗೆ ಹಳ್ಳಿ ಹಕ್ಕಿ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರವನ್ನು ಬೀಳಿಸಿ ಬಿಜೆಪಿಗೆ ಸೇರುವ ಮೂಲಕ ನಾನು ಕಳಂಕವನ್ನು ಹೊತ್ತಿಕೊಂಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡದಂತೆ ನನಗೆ ಯಡಿಯೂರಪ್ಪ ಹೇಳಿದ್ದು ನಿಜ. ಆದರೆ ನನಗೆ ನಾನು ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಸೋತರೆ ಸಚಿವ ಸ್ಥಾನ ಕೊಡಲ್ಲ ಎಂದು ಯಡಿಯೂರಪ್ಪ ಹೇಳಿಲ್ಲ. ನಾನೇನು ಡಿಸಿಎಂ ಸ್ಥಾನವನ್ನು ಕೇಳುತ್ತಿಲ್ಲ. ಸೋತಿರುವ ಲಕ್ಷ್ಮಣ ಸವದಿಯನ್ನೇ ಡಿಸಿಎಂ ಮಾಡಿದ್ದಾರೆ. ನಾನೇನು ಡಿಸಿಎಂ ಸ್ಥಾನ ಕೇಳುತ್ತಿಲ್ಲ. ಅರುಣ್‌ ಜೇಟ್ಲಿ ಲೋಕಸಭಾ ಚುನಾವಣೆಯಲ್ಲಿ ಸೋತರೂ ಅವರನ್ನು ರಾಜ್ಯಸಭೆಗೆ ಕಳುಹಿಸಿ ಹಣಕಾಸು ಸಚಿವರನ್ನಾಗಿ ಮಾಡಿ ಅವರ ಅನುಭವವನ್ನು ಬಳಸಿಕೊಂಡರು. ನನ್ನ ಅನುಭವವನ್ನೂ ಬಳಸಿಕೊಳ್ಳಲಿ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಇನ್ನು ರಾಯಚೂರಲ್ಲಿ ಮಾತಾಡಿದ ಇನ್ನೂ ಅನರ್ಹ ಶಾಸಕರಾಗಿಯೇ ಉಳಿದುಕೊಂಡಿರುವ ಪ್ರಪಾತ್‌ ಗೌ

LEAVE A REPLY

Please enter your comment!
Please enter your name here