ಅಮಾವಾಸ್ಯೆಯಂದೇ ಶನಿ ಮನೆ ಬದಲಾವಣೆ – ಯಾವ ರಾಶಿಗೆಲ್ಲ ಸಾಡೇಸಾತಿ ಪರಿಣಾಮ..?

30 ವರ್ಷಗಳ ಮಕರ ರಾಶಿಗೆ ಶನಿ ಪ್ರವೇಶ ಮಾಡುತ್ತಿದ್ದಾನೆ. ಹೀಗಾಗಿ ಶನಿ ಶುಕ್ರವಾರ ಮಾಡುವ ಸ್ಥಾನಪಲ್ಲಟ ಹಿಂದೂ ಪಂಚಾಂಗದ ಪ್ರಕಾರ ಸಾಕಷ್ಟು ಮಹತ್ವ ಪಡೆದಿದೆ. ಅಂದಹಾಗೆ ಸಾಡೇ ಸಾತಿ ಶನಿಗೂ ಎರಡೂವರೆ ವರ್ಷಗಳ ಶನಿ ದೋಷಕ್ಕೂ ವ್ಯತ್ಯಾಸವಿದೆ.

ಪ್ರತಿ ಎರಡೂವರೆ ವರ್ಷ ಶನಿ ಒಂದೊಂದು ರಾಶಿಯಲ್ಲಿ ಮನೆ ಮಾಡಿರುತ್ತಾನೆ. ಹೀಗೆ ಮನೆ ಬದಲಾವಣೆಯ ಬಳಿಕ 30 ವರ್ಷಗಳ ಬಳಿಕ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾರೆ. ಆದರೆ ಕಾಶಿ ವಿಶ್ವವಿದ್ಯಾಲಯದ ಪಂಡಿತರ ಪ್ರಕಾರ ಬರೋಬ್ಬರೀ 382 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಮೌನಿ ಅಮಾವಾಸ್ಯೆಯಂದೇ ಶನಿ ಮಕರ ರಾಶಿಗೆ ಪ್ರವೇಶಿಸುತ್ತಿದ್ದಾನೆ. ಇದಕ್ಕೂ ಮೊದಲು ಫೆಬ್ರವರಿ 26, 1678ರಂದು ಶನಿ ಮೌನಿ ಅಮಾವಾಸ್ಯೆಯಂದೇ ಮಕರ ರಾಶಿಗೆ ಕಾಲಿಟ್ಟಿದ್ದ.

ಇದಲ್ಲದೇ ನಂಬಿಕೆಗಳ ಪ್ರಕಾರ ಶನಿ ದೇವರ ಜನನ ಆಗಿದ್ದು ಅಮಾವಾಸ್ಯೆಯಂದೇ. ಜೇಷ್ಠ ಮಾಸ ಅಂದರೆ ಮೇ ತಿಂಗಳಲ್ಲಿ ಬರುವ ಅಮಾವಾಸ್ಯೆಯಂದು ಕರ್ಮ ದೇವ ಎಂದು ಕರೆಸಿಕೊಳ್ಳುವ ಶನಿ ಹುಟ್ಟಿದ್ದ. ಇವತ್ತು ಶುಕ್ರವಾರವೇ ಅಮಾವಾಸ್ಯೆ ಬರುತ್ತಿದ್ದು ಜನ್ಮ ತಿಥಿಯಂದೇ ಶನಿ ತನ್ನ ಮನೆಯನ್ನು ಬದಲಾಯಿಸುತ್ತಿರುವುದು ಸಾಕಷ್ಟು ಮಹತ್ವ  ಪಡೆದಿದೆ.

ಈ ರಾಶಿಯಲ್ಲೂ ಶನಿ ಇರುವುದು ಎರಡೂವರೆ ವರ್ಷ ಮಾತ್ರ. ಏಪ್ರಿಲ್‌ 29, 2022ರವರೆಗೆ ಮಕರ ರಾಶಿಯಲ್ಲೇ ಇರುವ ಶನಿ ಬಳಿಕ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.

ಮೌನಿ ಅಮಾವಾಸ್ಯೆಯಂದು ಭೂಮಿ, ಚಂದಿರ ಮತ್ತು ಶನಿ ಬಹು ಸಮೀಪದಲ್ಲೇ ಇರಲಿವೆ. ಶನಿ ಮತ್ತು ಚಂದ್ರ ಹತ್ತಿರಕ್ಕೆ ಬರುವುದು ಸಾಮಾನ್ಯ ಘಟನೆ ಆಗಿದ್ದರೂ ಮೌನಿ ಅಮಾವಾಸ್ಯೆಯಂದು ಘಟಿಸುತ್ತಿರುವುದರಿಂದ ಪ್ರಭಾವ ಹೆಚ್ಚಿದೆ ಎನ್ನುವುದು ಜ್ಯೋತಿಷಿಗಳ ಮಾತು.

ಮಾಘ ಮಾಸದಲ್ಲಿರುವ ಬರುವ ಈ ಅಮಾವಾಸ್ಯೆಯಂದು ಸಾಧು-ಸಂತರು ಮೌನವ್ರತ ಮಾಡುವುದು ವಾಡಿಕೆ. ಹೀಗಾಗಿ ಈ ಅಮಾವಾಸ್ಯೆಗೆ ಮೌನಿ ಅಮಾವಾಸ್ಯೆ ಎಂಬ ಹೆಸರು ಬಂದಿದೆ. ಪುಣ್ಯನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆಯೂ ಇದೆ.

ಶನಿಯಲ್ಲಿ ಸಾಡೇ ಸಾತಿ ಶನಿ ಮತ್ತು ಎರಡೂವರೆ ವರ್ಷಗಳ ಶನಿ ಎಂಬ ಭಿನ್ನ ಭಿನ್ನ ಸ್ಥಿತಿಗಳಿವೆ. ಸಾಡೇಸಾತಿ ಶನಿ ಎಂದರೆ ಎಳೂವರೆ ವರ್ಷಗಳ ಶನಿ. ಶನಿ ಯಾವಾಗ ಒಂದು ರಾಶಿಗೆ ಪ್ರವೇಶ ಮಾಡುತ್ತಾನೋ ಆ ರಾಶಿಯಲ್ಲಿ ಸಾಡೇಸಾತಿ ಶನಿಯ ಪ್ರಭಾವಳಿಯ ಜೊತೆಗೆ ಹಿಂದಿನ ರಾಶಿ ಮತ್ತು ಮುಂದಿನ ರಾಶಿಯ ಮೇಲೂ ಪರಿಣಾಮ ಇರುತ್ತದೆ. ಶನಿ ಯಾವ ರಾಶಿಯನ್ನು ಪ್ರವೇಶ ಮಾಡುತ್ತಾನೋ ಆಗ ಸಾಡೇಸಾತಿ ಶನಿಯ ಮೊದಲ ಚರಣ ಅಂದರೆ ಎರಡೂವರೆ ವರ್ಷ ಮುಕ್ತಾಯವಾಗಿ ಎರಡನೇ ಚರಣ ಆರಂಭವಾಗುತ್ತದೆ.

12ರಲ್ಲಿ 7 ರಾಶಿಗಳ ಮೇಲೆ ಪ್ರಭಾವಳಿ:

ಮಕರ ರಾಶಿಯಲ್ಲಿ ಶನಿ ಪ್ರವೇಶ ಆಗುತ್ತಿರುವುದರಿಂದ ಮಕರ ರಾಶಿ ಬಳಿಕ ಬರುವ ಕುಂಭ ರಾಶಿಯಲ್ಲಿ ಸಾಡೇಸಾತಿ ಆರಂಭವಾಗುತ್ತದೆ. ಈಗಾಗಲೇ ಮಕರ ರಾಶಿಯಲ್ಲಿ ಮೊದಲ ಚರಣ ಅಂದರೆ ಸಾಡೇಸಾತಿಯ ಎರಡೂವರೆ ಮುಕ್ತಾಯವಾಗಿ ಎರಡೂವರೆ ವರ್ಷದ ಎರಡನೇ ಚರಣ ಆರಂಭವಾಗುತ್ತದೆ.

ಧನುರ್‌ ಮತ್ತು ಮಕರ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿರುವುದರಿಂದ ಮಿಥುನ ಮತ್ತು ತುಲಾ ರಾಶಿಯ ಮೇಲೂ ಪರಿಣಾಮ ಇರುತ್ತದೆ. ಮೀನ ಮತ್ತು ಕರ್ಕ ರಾಶಿಯ ಮೇಲೂ ಶನಿ ಪ್ರಭಾವ ಇರಲಿದೆ. ಹೀಗೆ 12 ರಾಶಿಗಳಲ್ಲಿ 7 ರಾಶಿಗಳ ಮೇಲೆ ಶನಿ ದೃಷ್ಟಿ ಇರಲಿದೆ.

ಮೂರು ರಾಶಿಯವರಿಗೆ ಏನು ಫಲ..?

ವೃಶ್ಚಿಕ ರಾಶಿಯವರಿಗೆ ಸಾಡೇಸಾತಿ ಮುಕ್ತಾಯವಾಗಿದೆ. ವೃಷಭ ಮತ್ತು ಕನ್ಯಾ ರಾಶಿಯವರೂ ಎರಡೂವರೆ ವರ್ಷದ ಶನಿ ಪ್ರಭಾವದಿಂದ ಮುಕ್ತರಾಗಲಿದ್ದಾರೆ. ಧನುರ್‌ ರಾಶಿಯವರಿಗೆ ಸಾಡೇಸಾತಿಯ ಕೊನೆಯ ಚರಣ ನಡೆಯುತ್ತಿದ್ದರೂ ಸದ್ಯಕ್ಕೆ ಈ ರಾಶಿಯವರಿಗೆ ಏನೂ ತೊಂದರೆ ಇಲ್ಲ. ಈ ಮೂರು ರಾಶಿಯವರಿಗೂ ಶುಭವಾಗಲಿದೆ.

ಮೇ 11ರಿಂದ ಸೆಪ್ಟೆಂಬರ್‌ ಸೆಪ್ಟೆಂಬರ್‌ 28ರವರೆಗೆ ಸಾಡೇಸಾತಿ ಮತ್ತು ಎರಡೂವರೆ ವರ್ಷದ ಶನಿ ಪ್ರಭಾವಳಿಯಲ್ಲಿರುವ ರಾಶಿಯವರ ಸಂಕಷ್ಟಗಳು ಕಮ್ಮಿ ಆಗಲಿದ್ದು, ಬಯಸಿದ ಕೆಲಸಗಳೆಲ್ಲ ಬೇಗ ಪೂರ್ಣಗೊಳ್ಳಲಿವೆ. ಸಾಡೇಸಾತಿಯ ವೇಳೆ ಏನಾಗುತ್ತದೆ ಎನ್ನುವುದು ಆಯಾಯ ವ್ಯಕ್ತಿಯ ಜನ್ಮ ಕುಂಡಲಿಯ ಮೇಲೆ ಆಧಾರಿತವಾಗಿರುತ್ತದೆ.

LEAVE A REPLY

Please enter your comment!
Please enter your name here