ಭಾರತೀಯ ಶ್ರೀಮಂತರ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸತತವಾಗಿ 3 ವರ್ಷಗಳಿಂದಲೂ ಮೊದಲನೇ ಸ್ಥಾನ ಉಳಿಸಿಕೊಂಡು ಬಂದಿದ್ದ ಸಲ್ಮಾನ್‌ ಖಾನ್‌ ಈ ಬಾರಿಯ 2019 ರ ಫೋರ್ಬ್ಸ್‌ ಪಟ್ಟಿಯಲ್ಲಿ 3 ನೇ ಸ್ಥಾನಕ್ಕೆ ಇಳಿದಿದ್ದಾರೆ. ಅಂದ ಹಾಗೆ ಮೊದಲನೇ ಸ್ಥಾನ ಯಾರು ಪಡೆದಿರಬಹುದೆಂಬ ಕುತೂಹಲವಿದೆಯೇ? 

ಭಾರತದ 100 ತಾರೆಯರ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ  ಮಾಡಿದ್ದು ಭಾರತದ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೋಹ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಕೋಹ್ಲಿ ಈಗಾಗಲೇ ಕ್ರಿಕೆಟ್‌ ಮ್ಯಾಚ್‌ನಲ್ಲಷ್ಟೇ ಅಲ್ಲದೇ, ಊಬರ್‌, ಮಾನ್ಯವರ್‌, ಆಡಿ ಕಾರ್, ಟಿಸೋಟ್‌ ಬ್ರ್ಯಾಂಡ್‌ ಗಳಿಗೆ ರಾಯಭಾರಿಯಾಗಿದ್ದಾರೆ.ಕಳೆದ ಬಾರಿ 2 ನೇ ಸ್ಥಾನ ಪಡೆದಿದ್ದ ಕೋಹ್ಲಿ, ಈ ಬಾರಿ ಮೊದಲನೇ ಸ್ಥಾನ ಪಡೆದಿದ್ದು, ಇವರ ವಾರ್ಷಿಕ 252.72 ಕೋಟಿ.

ಕಳೆದ ಬಾರಿಯ ಪಟ್ಟಿಯಲ್ಲಿ 3 ನೇ ಸ್ಥಾನದಲ್ಲಿದ್ದ ನಟ ಅಕ್ಷಯ್‌ ಕುಮಾರ್‌ 2 ನೇ ಸ್ಥಾನ ಪಡೆದಿದ್ದು, ಇವರ ವಾರ್ಷಿಕ ಆದಾಯ 293.25  ಕೋಟಿ ಆಗಿರುತ್ತದೆ.

3 ನೇ ಸ್ಥಾನವನ್ನು ನಟ ಸಲ್ಮಾನ್‌ ಖಾನ್‌ ಪಡೆದಿದ್ದಾರೆ, ಈ ಬಾರಿ ಅವರು ನಟಿಸಿದ ಒಂದು ಸಿನಿಮಾವಷ್ಟೇ ತೆರೆಕಂಡಿದ್ದು ಅವರ ವಾರ್ಷಿಕ ಆದಾಯ 229.25 ಕೋಟಿ. 

ಬಾಲಿವುಡ್‌ ಬಿಗ್‌ ಬಿ ಅಮಿತಾಭ್‌ ಬಚ್ಚನ್‌ 4 ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ತೆರೆಕಂಡ ಅವರ ಸಿನಿಮಾಗಳು ಅಷ್ಟೊಂದು ಗಮನ ಸೆಳೆಯದಿದ್ದರೂ ತಮ್ಮ ದೀರ್ಘಕಾಲದ ಕೌನ್‌ ಬನೇಗಾ ಕರೋಡ್‌ಪತಿ ಸೀಸನ್ ನ ಮೂಲಕ  ಹಲವಾರು ಬ್ರ್ಯಾಂಡ್‌ ಗಳನ್ನು ಆಕರ್ಷಿಸುತ್ತಿದ್ದಾರೆ, ಇವರ ವಾರ್ಷಿಕ ಆದಾಯ 239.25 ಕೋಟಿ.

ಮಹೇಂದ್ರ ಸಿಂಗ್‌ ಧೋನಿ ಕ್ರಮವಾಗಿ 5 ನೇ ಸ್ಥಾನ ಪಡೆದಿದ್ದಾರೆ, ಮಾಜಿ ಕ್ರಿಕೆಟ್‌ ತಂಡದ ನಾಯಕ ಧೋನಿ ಮುಂದಿನ ದಿನಗಳಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಆಡದಿದ್ದರೂ ಸಚಿನ್‌ ತೆಂಡೂಲ್ಕರ್‌ ಅವರಂತೆಯೇ ಅಪಾರ ಜನಪ್ರಿಯತೆಯನ್ನು ಹೊಂದಿದ್ದಾರೆ, ಇದರ ಪರಿಣಾಮವಾಗಿ ಅನೇಕ ಬ್ರ್ಯಾಂಡ್‌ಗಳು ಅವರ ಜೊತೆ ಸಂಬಂಧ ಹೊಂದಲು ಉತ್ಸುಕರಾಗಿದ್ದಾರೆ. ಇವರ ವಾರ್ಷಿಕ ಆದಾಯ 135.93  ಕೋಟಿ.

ಸೂಪರ್‌ ಸ್ಟಾರ್‌ ಬಾಲಿವುಡ್ ನ  ನಟ ಶಾರೂಕ್‌ ಖಾನ್‌ ರವರ ಯಾವುದೇ ಸಿನಿಮಾ 2019 ರಲ್ಲಿ ಬಿಡುಗಡೆಗೊಳ್ಳದಿದ್ದರೂ 6 ನೇ ಸ್ಥಾನದಲ್ಲಿದ್ದಾರೆ. 2018 ರಲ್ಲಿ ಇವರು ನಟಿಸಿದ ʼಝೀರೋʼ ಚಿತ್ರ ಪ್ರೇಕ್ಷಕನ ಮನವನ್ನು ಗೆದ್ದಿರಲಿಲ್ಲ. ಆದಾಗ್ಯೂ ಶಾರೂಖ್‌ ಅವರ ಕೈಯಲ್ಲಿ ಇನ್ನು ತೆರೆಕಾಣಲಿರುವ 3 ಚಿತ್ರಗಳಿವೆ. ಇದಲ್ಲದೆ ಅವರು ಐಸಿಐಸಿಐ, ಬೈಜು, ಬಿಗ್ ಬಾಸ್ಕೆಟ್‌ ಮುಂತಾದ 14 ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ. ಇವರ ವಾರ್ಷಿಕ ಆದಾಯ 124.38 ಕೋಟಿ.

ರಣವೀರ್‌ ಸಿಂಗ್‌  7 ನೇ ಸ್ಥಾನದಲ್ಲಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ದಿನೇದಿನೇ ಜನಪ್ರಿಯವಾಗುತ್ತಿರುವ  ನಟ ರಣ್ ವೀರ್ ಸಿಂಗ್‌ “ಗಲ್ಲಿಬಾಯ್‌ʼ ಚಿತ್ರದ ಮೂಲಕ ತನ್ನ ಅಭಿನಯದ ಮೂಲಕ ಜನರ ಮೆಚ್ಚುಗೆ ಪಡೆದರು. ಈ ಚಿತ್ರದ ಮೂಲಕ ಆಸ್ಕರ್ ಪ್ರಶಸ್ತಿಗೆ ಭಾರತ ದೇಶದ ಅಧಿಕೃತ ಪ್ರವೇಶವಾದಂತಿದೆ. ಸುಮಾರು 30 ಬ್ರ್ಯಾಂಡ್‌ಗಳ ಜೊತೆ ಈಗಾಗಲೇ ಕಾಣಿಸಿಕೊಂಡಿದ್ದಾರೆ . ಇವರ ವಾರ್ಷಿಕ ಆದಾಯ 118.2 ಕೋಟಿ.

ಆಲಿಯಾ ಭಟ್‌ 8 ನೇ ಸ್ಥಾನದಲ್ಲಿದ್ದಾರೆ, ಕಳೆದ ವರ್ಷದ ಫೋರ್ಬ್ಸ್‌ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದ ನಟಿ ಆಲಿಯಾ ಈ ಬಾರಿ 8 ನೇ ಸ್ಥಾನದಲ್ಲಿದ್ದಾರೆ. 26 ವರ್ಷದ ಈ ನಟಿಯು ನಟಿಸಿದ 2 ಚಿತ್ರಗಳೂ ಈ ಬಾರಿ ಬಾಕ್ಸ್‌ ಆಫೀಸ್ ನಲ್ಲಿ ಸದ್ದು ಮಾಡಿದ್ದವು. ಅದಲ್ಲದೇ ಲೇಸ್‌, ಫ್ರೂಟಿ, ಊಬರ್‌ ಈಟ್ಸ್‌, ಫ್ಲಿಪ್‌ ಕಾರ್ಟ್‌ ಮುಂತಾದ ಉತ್ಪನ್ನಗಳಲ್ಲಿಯೂ ಮಿಂಚುತ್ತಿದಾರೆ. ಈ ನಟಿಯ ವಾರ್ಷಿಕ ಆದಾಯ 59.21 ಕೋಟಿ.

100 ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಗೆ ಭಾಜನರಾಗಿರುವ ಸಚಿನ್‌ ತೆಂಡೂಲ್ಕರ್‌ರವರ ಆದಾಯದಲ್ಲಿ ಸ್ವಲ್ಪ ಕುಸಿತ ಕಂಡಿದ್ದರೂ 9 ನೇ ಸ್ಥಾನದಲ್ಲಿದ್ದಾರೆ. 

ಪದ್ಮಾವತ್‌ ಚಿತ್ರದ ಯಶಸ್ಸಿನ ನಂತರ ಅತ್ಯಂತ ಬೇಡಿಕೆಯ ನಟಿಯಾದ ದೀಪಿಕಾ ಪಡುಕೋಣೆ ಕಳೆದ ವರ್ಷ ಅಗ್ರ 5 ರಲ್ಲಿ ಸ್ಥಾನ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ವರ್ಷ ಅವರ ಸ್ಥಾನ 10 ಕ್ಕೆ ಕುಸಿದಿದೆ. ದೀಪಿಕಾ ನಟಿಸಿದ ಯಾವುದೇ ಚಿತ್ರ ಈ ವರ್ಷ ಬಿಡುಗಡೆಯಾಗಿರಲಿಲ್ಲ, ಅವರ ಗಳಿಕೆ 112.8 ಕೋಟಿಯಿಂದ 48.8 ಕೋಟಿಗೆ  ಇಳಿದಿದೆ.  ಆಕೆ ತನಿಷ್ಕ್‌, ಟೆಟ್ಲಿ ಗ್ರೀನ್‌ ಟೀ, ಲೋರಿಯಲ್‌ ಪ್ಯಾರಿಸ್‌ ಮುಂತಾದ ಬ್ರ್ಯಾಂಡ್‌ಗಳು ಮತ್ತು ತನ್ನದೇ ಆದ ಫ್ಯಾಷನ್‌ ಬ್ರ್ಯಾಂಡ್‌ ಆಲ್‌ ಅಬೌಟ್‌ ಯೂ ಮೂಲಕ ಕಾಣಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here