20 ಲಕ್ಷ ಕೋಟಿಯಲ್ಲಿ ಯಾರಿಗೆಷ್ಟು..? ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?

ಕೊರೋನಾ ಲಾಕ್‍ಡೌನ್‍ನಿಂದಾಗಿ ತೀವ್ರ ಸಂಕಷ್ಟಕ್ಕೆ ತುತ್ತಾದ ಅತೀ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ 3 ಲಕ್ಷ ಕೋಟಿ ರೂಪಾಯಿ ಸಾಲ ನೀಡಲಾಗುವುದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. 12 ತಿಂಗಳ ಮಾರಿಟೋರಿಯಂ ಸಹಿತ ಈ 3 ಲಕ್ಷ ಕೋಟಿ ಸಾಲ ಮಂಜೂರು ಮಾಡಲಾಗುತ್ತದೆ.ಎಂಎಸ್‍ಎಂಇಗಳಿಗೆ ಆರು ಅಂಶಗಳ ಮೂಲಕ ನೆರವು ನೀಡಲಾಗುವುದು. ಆರ್ಥಿಕ ಪ್ಯಾಕೇಜ್‍ಗೆ ಸಂಬಂಧಿಸಿದಂತೆ ಇಂದಿನಿಂದ ಒಂದೊಂದೆ ವಿವರಗಳನ್ನು ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

# ಉತ್ಪಾದನೆ ಹೆಚ್ಚಿಸಲು 10 ಕೋಟಿ ರೂ.ಗಳ ನಿಧಿ ಸ್ಥಾಪನೆ
# ತೀವ್ರ ಸಾಲದ ಒತ್ತಡದಲ್ಲಿರುವ ಎಂಎಸ್‍ಎಂಇಗಳಿಗೆ 20 ಸಾವಿರ ಕೋಟಿ
# ಎಂಎಸ್‍ಎಂಇಗಳಲ್ಲಿ ಈಕ್ವಿಟಿ ಹೂಡಿಕೆಗಾಗಿ 50 ಸಾವಿರ ಕೋಟಿ ಪ್ಯಾಕೇಜ್
# ಈ ಪ್ಯಾಕೇಜ್‍ನಿಂದ 2 ಲಕ್ಷ ಸಣ್ಣ, ಅತೀ ಸಣ್ಣ ಉದ್ದಿಮೆಗಳಿಗೆ ಅನುಕೂಲ
# 200 ಕೋಟಿವರೆಗಿನ ಖರೀದಿಗೆ ಗ್ಲೋಬಲ್ ಟೆಂಡರ್ ಅಗತ್ಯವಿಲ್ಲ
# ಸೂಕ್ಷ್ಮ ಘಟಕಗಳ ಮೇಲಿನ ಹುಡಿಕೆ 50 ಲಕ್ಷದಿಂದ 1 ಕೋಟಿಗೆ ಹೆಚ್ಚಳ
# 5 ಕೋಟಿ ವ್ಯವಹಾರ ಮಾಡುವ ಘಟಕಗಳು ಸಣ್ಣ ಕೈಗಾರಿಕೆ ವ್ಯಾಪ್ತಿಗೆ
# 3 ತಿಂಗಳ ಇಪಿಎಫ್ ಹಣ ಭರಿಸಲು ಕೇಂದ್ರದ ತೀರ್ಮಾನ
# ಇಪಿಎಫ್‍ಗಾಗಿ 3500 ಕೋಟಿ ಹಣ ಮೀಸಲು
# ಇದರಿಂದ 72.22 ಲಕ್ಷ ಉದ್ಯೋಗಿಗಳಿಗೆ ಲಾಭ

ನೇರ ತೆರಿಗೆದಾರರಿಗೆ ಬಿಗ್ ರಿಲೀಫ್
# ಈಗ ಪಾವತಿ ಮಾಡುತ್ತಿರುವ ಟಿಡಿಎಸ್,ಟಿಸಿಎಸ್‍ನಿಂದ ಶೇಕಡಾ 25ರಷ್ಟು ವಿನಾಯಿತಿ
# ನಾಳೆಯಿಂದ 2021ರ ಮಾರ್ಚ್ 31ರವರೆಗೆ ಇದು ಅನ್ವಯವಾಗಲಿದೆ
# ಇದರಿಂದ ನೇರ ತೆರಿಗೆದಾರರಿಗೆ 50 ಸಾವಿರ ಕೋಟಿ ರೂ.ಗಳಷ್ಟು ಲಾಭ
# 5 ಲಕ್ಷದವರೆಗಿನ ಆದಾಯ ತೆರಿಗೆ ರೀಫಂಡ್ ಮಾಡಲಾಗಿದೆ.
# ಇದುವರೆಗೆ 18 ಸಾವಿರ ಕೋಟಿ ಪಾವತಿ ಮಾಡಲಾಗಿದೆ.
# ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನವೆಂಬರ್ 30ರವರೆಗೆ ಗಡುವು

ಹಣಕಾಸು ಸಂಸ್ಥೆಗಳಿಗೆ ಏನೇನು..?
# ಎನ್‍ಬಿಎಫ್ಸಿಗಳಿಗೆ 30 ಸಾವಿರ ಕೋಟಿ ನಗದು ಲಭ್ಯತೆ
# 45 ಸಾವಿರ ಕೋಟಿ ಕ್ರೆಡಿಟ್ ಗ್ಯಾರಂಟಿ
# ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ 30 ಸಾವಿರ ಕೋಟಿ
# ಮೈಕ್ರೋ ಫೈನಾನ್ಸ್, ಗೃಹ ಸಾಲ ಕಂಪನಿಗಳಿಗೆ ಲಾಭ

ವಿದ್ಯುತ್ ವಲಯಕ್ಕೆ ಏನೇನು..?
# ವಿದ್ಯುತ್ ಸರಬರಾಜು ಕಂಪನಿಗಳಿಗೆ ನೆರವು
# 90 ಸಾವಿರ ಕೋಟಿ ರೂ. ನೆರವು

ರಿಯಲ್ ಎಸ್ಟೇಟ್‍ನವರಿಗೆ ಏನೇನು..?
# ರೇರಾ ಅಡಿ ಬರುವ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಆರು ತಿಂಗಳ ರಿಲೀಫ್
# ಕೇಂದ್ರ ಸರ್ಕಾರಗಳ ಏಜೆನ್ಸಿಗಳ ಗುತ್ತಿಗೆ ಕೆಲಸಗಳನ್ನು ಪೂರ್ಣಗೊಳಿಸಲು 6 ತಿಂಗಳು ಅವಕಾಶ
# ಕೇಂದ್ರ ಸರ್ಕಾರಗಳ ಏಜೆನ್ಸಿಗಳು ಹಂತ ಹಂತವಾಗಿ ಗುತ್ತಿಗೆದಾರರ ಬ್ಯಾಂಕ್ ಗ್ಯಾರಂಟಿ ರಿಲೀಸ್ ಮಾಡಬಹುದು

LEAVE A REPLY

Please enter your comment!
Please enter your name here