ವಿದ್ಯುತ್ ತಂತಿ(Electric wire) ಸ್ಪರ್ಶಿಸಿ ಎರಡು ಕಾಡಾನೆ(Wild elephants)ಗಳು ಸಾವನ್ನಪ್ಪಿರುವ(Death) ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ನೈಲ ಹುದಿಗೇರಿ ಬಳಿ ನಡೆದಿದೆ.
ಕೋಣೇರಿ ಪ್ರಕಾಶ್ ಮಂದಣ್ಣ ಹಾಗೂ ಮಂಡೆಪಂಡ ಸುಮಂತ್ ಚಂಗಪ್ಪ ಎಂಬುವವರ ತೋಟದಲ್ಲಿ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಿಸಿ(Electric wire) ಒಂದು ಗಂಡು, ಒಂದು ಹೆಣ್ಣು ಕಾಡಾನೆ(Wild elephants) ಸಾವನ್ನಪ್ಪಿವೆ(Death).
ತೋಟದಲ್ಲಿ ಹಾದು ಹೋಗಿರುವ 11 ಕೆ.ವಿ ವಿದ್ಯುತ್ ತಂತಿ ಸ್ಪರ್ಶಿಸಿ(Electric wire) ಕಾಡಾನೆಗಳು ಮೃತಪಟ್ಟಿರುವುದಾಗಿ ತಿಳಿದು ಬಂದಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.