ಟೊಮೆಟೋ ರೇಟ್ ಗಗನಕ್ಕೇರಿದ್ದೇ ತಡ ಟೊಮೆಟೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ.
ಎರಡು ಟನ್ ಟೊಮೆಟೋ ತುಂಬಿದ್ದ ಬೊಲೆಟೋ ಪಿಕಪ್ ವಾಹನವನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಬೆಂಗಳೂರಿನ ಪೀಣ್ಯಾ ಬಳಿ ನಡೆದಿದೆ.
ಹಿರಿಯೂರಿನಿಂದ ಕೋಲಾರದ ಮಾರುಕಟ್ಟೆಗೆ ಟೊಮೆಟೋ ಸಾಗಿಸುತ್ತಿದ್ದ ರೈತರ ವಾಹನವನ್ನು ಕಾರಿನಲ್ಲಿ ಮೂವರು ಹಿಂಬಾಲಿಸಿದ್ದರು.
ಆರ್ಎಂಸಿ ಯಾರ್ಡ್ ಬಳಿ ಬಂದಾಗ ಗಾಡಿ ಟಚ್ ಆಗಿದೆ ಎಂಬಂತೆ ನಾಟಕ ಮಾಡಿ,ರೈತರ ಮೇಲೆ ಹಲ್ಲೆ ಮಾಡಿದ್ದಾರೆ.
ಗಾಡಿ ಡ್ಯಾಮೇಜ್ ಆಗಿದೆ.. ಹಣ ಕೊಡಿ ಎಂದು ಅವಾಜ್ ಹಾಕಿ ರೈತನನ್ನು ಬೊಲೆರೋದಲ್ಲಿಯೇ ಕೂರಿಸಿಕೊಂಡು ಹೋಗಿದ್ದಾರೆ.
ಚಿಕ್ಕಜಾಲ ಬಳಿ ರೈತನನ್ನು ಇಳಿಸಿ 2 ಟನ್ ಟೊಮೆಟೋ ಸಮೇತ ಎಸ್ಕೇಪ್ ಆಗಿದ್ದಾರೆ.
ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.
ADVERTISEMENT
ADVERTISEMENT