ದಶಮಾನದ ನಿರ್ಣಯ – ಭಾರತದ ಬಗ್ಗೆ ಆರ್‌ಬಿಐ ಮಾಜಿ ಮುಖ್ಯಸ್ಥ ರಘುರಾಮ್‌ ರಾಜನ್‌ ಲೇಖನ ಓದಿ

ಆರ್‌ಬಿಐ ಮುಖ್ಯಸ್ಥರಾಗಿದ್ದ, ಪ್ರಧಾನಮಂತ್ರಿಗಳ ಆರ್ಥಿಕ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದ ಸದ್ಯ ಅಮೆರಿಕದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರೂ ಆಗಿರುವ ರಘುರಾಮ್‌ ರಾಜನ್‌ ಭಾರತದ ಸದ್ಯದ ಸ್ಥಿತಿಗತಿಯ ಬಗ್ಗೆ ಸಾಮಾಜಿಕ ಜಾಲತಾಣ ದಲ್ಲಿ ಬರೆದುಕೊಂಡಿರುವ ಲೇಖನದ ಕನ್ನಡ ಭಾಷಾಂತರ.

ಇತ್ತೀಚಿನ ದಿನಗಳಲ್ಲಿ ಭಾರತದಿಂದ ಬರುತ್ತಿರುವ ಸುದ್ದಿಗಳು ಚಿಂತಾದಾಯಕವಾಗಿವೆ. ಮುಸುಕುಧಾರಿ ದಾಳಿಕೋರರ ಗ್ಯಾಂಗ್‌ವೊಂದು ಭಾರತದ ಪ್ರತಿಷ್ಠಿತ ವಿಶ್ವವಿದ್ಯಾಲಯವಾಗಿರುವ ಜವಾಹರ್‌ಲಾಲ್‌ ವಿವಿಗೆ ನುಗ್ಗಿ ದಾಳಿ ಮಾಡಿದೆ. ಗಂಟೆಗಳಿಗೂ ಹೆಚ್ಚು ಹೊತ್ತು ದಾಂಧಲೆ ನಡೆಸಿದ್ದಾರೆ, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಮೇಲೆ ದಾಳಿ ನಡೆಸಿದ್ದಾರೆ, ಇವರಿಗೆ ಪೊಲೀಸರ್ಯಾರೂ ಅಡ್ಡಿಪಡಿಸಲೇ ಇಲ್ಲ. ದಾಳಿಕೋರರ ಗುರುತಿನ ಬಗ್ಗೆ ಅಸ್ಪಷ್ಟತೆ ಇದ್ದರೂ ದಾಳಿಗೊಳಗಾದವರರಲ್ಲಿ ಹಲವರು ಕಾರ್ಯಕತರು ಎಂಬುದು ಸ್ಪಷ್ಟ, ಸರ್ಕಾರವೇ ನೇಮಿಸಿದ ಆಡಳಿತವಾಗಲೀ, ಪೊಲೀಸರಾಗಲೀ ಮಧ್ಯಪ್ರವೇಶ ಮಾಡಲೇ ಇಲ್ಲ. ಅಲ್ಲದೇ ಇದು ರಾಜಧಾನಿ ಇಲ್ಲಿ ಎಲ್ಲರೂ ಸಹಜವಾಗಿಯೇ ಕಟ್ಟೆಚ್ಚರದಲ್ಲಿಯೇ ಇರುತ್ತಾರೆ. ಪ್ರತಿಷ್ಠಿತ ವಿಶ್ವವಿದ್ಯಾಲಯವೇ ಅಕ್ಷರಶಃ ರಣಾಂಗಣವಾದಾಗ, ಪ್ರತಿರೋಧಿಗಳನ್ನು ಸರ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳಿಗೆ ಅದರ ನಿರ್ಲಕ್ಷ್ಯಗಳೇ ವಿಶ್ವಾಸಹಾರ್ತೆಯನ್ನ ತಂದುಕೊಟ್ಟಿವೆ.

ನಮ್ಮ ಹೆಮ್ಮೆಯ ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರಾಗಿ ನಮಗೆ ನಮ್ಮದೇ ಜವಾಬ್ದಾರಿಗಳಿವೆ. ನಮ್ಮ ನಾಯಕರನ್ನು ಆಯ್ಕೆ ಮಾಡಿ ಅಧಿಕಾರದಲ್ಲಿ ಕೂರಿಸುವವರು ಜನರೇ ಮತ್ತು ಆ ನಾಯಕನ ವಿಭಜನಕಾರಿ ಪ್ರಣಾಳಿಕೆಗಳನ್ನು ಒಪ್ಪಿಕೊಳ್ಳುತ್ತೇವೆ. ಆರ್ಥಿಕ ಗುರಿಗಳ ಮೇಲೆ ಅವರು ಗಮನಹರಿಸುತ್ತೇವೆ ಎಂದು ನಮ್ಮಲ್ಲಿ ಕೆಲವರು ಆಶಾವಾದ ಇಟ್ಟುಕೊಂಡಿದ್ದೆವು. ನಮಲ್ಲಿದ್ದ ನಮ್ಮದೇ ಪೂರ್ವಾಗ್ರಹಪೀಡಿತ ಮನಸ್ಥಿತಿಗಳನ್ನು ಮತ್ತೆ ಕೆದಕಿ ಮತ್ತು ಅವುಗಳಿಗೆ ಕಿಡಿಹೊತ್ತಿಸಿದ ಅವರ ಭಾಷಣಗಳನ್ನು ನಮ್ಮಲ್ಲಿ ಕೆಲವರು ಒಪ್ಪಿಕೊಂಡೆವು. ನಮ್ಮಲ್ಲಿ ಕೆಲವರು ವಿಭಿನ್ನರು, ರಾಜಕೀಯ ಎಂದರೆ ಇನ್ಯಾರದ್ದೋ ಸಮಸ್ಯೆ ಎಂಬ ಯೋಚನೆ. ನಾವು ಟೀಕಿಸಲು ಅಂಜಿದೆವು, ಟೀಕಾಕಾರರನ್ನು ನಿರ್ದಾಕ್ಷಿಣ್ಯವಾಗಿ ದಮನ ಮಾಡಲಾಯಿತು.  ಪ್ರಜಾಪ್ರಭುತ್ವ ಕೇವಲ ಹಕ್ಕಲ್ಲ, ಅದು ಜವಾಬ್ದಾರಿ, ನಮ್ಮ ಗಣರಾಜ್ಯದ ಕಾವಲು ಕಾಯುವುದು, ಕೇವಲ ಚುನಾವಣೆ ದಿನ ಮಾತ್ರವಲ್ಲ, ಆದರೆ ಪ್ರತಿ ದಿನವೂ.

ಅದೃಷ್ಟವಶಾತ್‌, ಭಾರತದಿಂದ ಬರುತ್ತಿರುವ ಸುದ್ದಿಯೂ ಸಮಾಧಾನಕಾರಿಯಾಗಿದೆ. ವಿಭಿನ್ನ ನಂಬಿಕೆಗಳ ಯುವಕರು ಒಟ್ಟಾಗಿ ಸಾಗಿದಾಗ, ಹಿಂದೂ ಮತ್ತು ಮುಸ್ಲಿಮರು ನಮ್ಮ ರಾಷ್ಟ್ರಧ್ವಜದ ಹಿಂದೆ ಕೈ ಜೋಡಿಸಿದಾಗ, ರಾಜಕೀಯ ನಾಯಕರು ನಮ್ಮ ಸ್ವಂತ ಲಾಭಕ್ಕಾಗಿ ಹೊತ್ತಿಸಿದ ಕೃತಕ ವಿಭಜನೆಯನ್ನ ತಿರಸ್ಕರಿಸಿದಾಗ, ನಮ್ಮ ಸಂವಿಧಾನದ ಸ್ಫೂರ್ತಿಯ ಜ್ವಾಲೆ ಇನ್ನೂ ಪ್ರಜ್ವಲಿಸುತ್ತಿದೆ ಎಂದು ತೋರಿಸಿದಾಗ. ಸದುದ್ದೇಶದಿಂದ ಸೇವೆ ಸಲ್ಲಿಸಲು ಅಸಾಧ್ಯ ಎಂದು ಭಾವಿಸಿ ಯಾವಾಗ ಆಡಳಿತಾತ್ಮಕ ಸೇವೆಗಳ ಅಧಿಕಾರಿಗಳು ತಮ್ಮ ಕನಸಿನ ನೌಕರಿಗೆ ರಾಜೀನಾಮೆ ಕೊಟ್ಟಾಗ, ನಮಗೆ ಸ್ವಾತಂತ್ರ್ಯ ತಂದುಕೊಡಲು ತಲೆಮಾರುಗಳಲ್ಲಿ ಮಾಡಲಾದ ಬಲಿದಾನಗಳೂ ಇನ್ನೂ ನಮ್ಮನ್ನು ಪ್ರೇರೆಪಿಸುತ್ತವೆ ಎನ್ನುವುದರ ಜೀವಂತ ಉದಾಹರಣೆಗಳಾಗಿದ್ದಾರೆ. ತನ್ನ ಕುಟುಂಬಕ್ಕೆ ಕಿರುಕುಳ ಕೊಟ್ಟರೂ ಚುನಾವಣಾ ಆಯಕ್ತರೊಬ್ಬರು ತಮ್ಮ ಕರ್ತವ್ಯವನ್ನೂ ನಿಷ್ಪಪಕ್ಷಾಪಾತವಾಗಿ ನಿರ್ವಹಿಸಿದಾಗ, ಪ್ರಾಮಾಣಿಕತೆಯನ್ನು ಹತ್ತಿಕ್ಕಲಾಗದು ಎಂದು ಅವರು ಪ್ರತಿಪಾದಿಸಿದಾಗ. ತಮ್ಮ ಉಳಿದ ಮಾಧ್ಯಮದ ಸಹೋದ್ಯೋಗಿಗಳು ಸರ್ಕಾರದ ಒತ್ತಡಕ್ಕೆ ಮಣಿದರೂ ಕೆಲ ಮಾಧ್ಯಮವರು ಸತ್ಯವನ್ನು ಹೊರಹಾಕಲು ಪ್ರಯತ್ನಿಸುತ್ತಿರುವಾಗ, ಗಣರಾಜ್ಯದ ಜವಾಬ್ದಾರಿಯುತ ನಾಗರಿಕ ಎಂದರೆ ಏನು ಎಂದು ತೋರಿಸುತ್ತಿರುವಾಗ. ಮತ್ತು ಯಾವಾಗ ಬಾಲಿವುಡ್‌ ನಟಿಯೊಬ್ಬಳು ಜೆಎನ್‌ಯುನಲ್ಲಿ ದಾಳಿಗೊಳದಾಕೆಯನ್ನು ಭೇಟಿ ಆಗಿ ತನ್ನ ಮೌನ ಪ್ರತಿಭಟನೆಯನ್ನು ದಾಖಲಿಸಿದಾಗ, ತನ್ನ ಇತ್ತೀಚಿನ ಸಿನಿಮಾವನ್ನು ಅಪಾಯಕ್ಕೆ ಒಡ್ಡಿಯೂ ಆಕೆ ನಿಜಕ್ಕೂ ಆಗುತ್ತಿರುವುದು ಏನು ಎಂಬುದನ್ನು ಅರಿತುಕೊಳ್ಳಲು ನಮಗೆ ಪ್ರೇರೆಪಿಸುತ್ತಾಳೆ.

ಸತ್ಯ, ಸ್ವಾತಂತ್ರ್ಯ ಮತ್ತು ನ್ಯಾಯ ಇವೆಲ್ಲವೂ ಬರೀ ದೊಡ್ಡ ದೊಡ್ಡ ಮಾತುಗಳಲ್ಲ, ಆದರೆ ಇವೆಲ್ಲವೂ ಬಲಿದಾನಕ್ಕೆ ಯೋಗ್ಯವಾದ ತತ್ವಗಳು ಎನ್ನುವುದನ್ನು ಆ ವ್ಯಕ್ತಿಗಳು ತಮ್ಮ ನಡವಳಿಕೆಗಳ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರೇ ಇವತ್ತು, ಮಹಾತ್ಮ ಗಾಂಧಿ ತಮ್ಮ ಜೀವವನ್ನೇ ಕೊಟ್ಟ ಆ ಭಾರತಕ್ಕಾಗಿ  ಹೋರಾಟ ಮಾಡುತ್ತಿದ್ದಾರೆ. ಸ್ವಾತಂತ್ರ್ಯ ಗಳಿಸಲು ಎಂದೂ ಹೋರಾಡದೇ ಇರಬಹುದು, ಆದರೆ ಅವರೇ ಇವತ್ತು ಆ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು, ಯಾರು ನಮಗೆ, ʼಸ್ವಾತಂತ್ರ್ಯದ ಸ್ವರ್ಗದ ಕಡೆಗೆ, ನನ್ನ ತಂದೆಯೇ, ನನ್ನ ದೇಶವನ್ನು ಬಡಿದೆಬ್ಬಿಸುʼ ಎಂಬ ರವೀಂದ್ರನಾಥ ಟಾಗೋರರ ಕನಸಿನ ಬಗ್ಗೆ ಆಶಾವಾದವನ್ನು ಮೂಡಿಸುತ್ತಿದ್ದಾರೆ.

ಇದೇ ಜನವರಿ ೨೬ರಂದು ತತ್ವ ಮತ್ತು ಉದಾರೀಕರಣಭರಿತ ಸಂವಿಧಾನವನ್ನು ಭಾರತ ತನಗೆ ತಾನು ಸಮರ್ಪಿಸಿಕೊಂಡು ೭೦ ವರ್ಷಗಳಾಗುತ್ತದೆ. ನಮ್ಮ ಸಂವಿಧಾನ ಪರಿಪೂರ್ಣವಾಗಿರಲಿಲ್ಲ, ಆದರೆ ಜ್ಞಾನಿಗಳಾದ ಪುರುಷರು ಮತ್ತು ಮಹಿಳೆಯರು ವಿಭಜನೆಯ ಬೀಭತ್ಸೆಯನ್ನು ಕಣ್ಣಾರೆ ಕಂಡರು ಮತ್ತು ಒಗ್ಗಟ್ಟಿನ ಭವಿಷ್ಯದ ಸೃಷ್ಟಿಗೆ ಬಯಸಿದ್ದರು. ಭಾರತ ಅಗಾಧ ಒಳಿತಿನ ಶಕ್ತಿ ಸಾಮರ್ಥ್ಯ ಹೊಂದಿದೆ ಎಂದು ಅವರಿಗೆ ತಿಳಿದಿತ್ತು, ಇವತ್ತಿನ ನಮ್ಮ ಕೆಲವು ನಾಯಕರಿಗೆ ತಿಳಿದಿರುವಂತೆ, ಸ್ವನಾಶದ ಅಪಾಯಕಾರಿ ಶಕ್ತಿಗಳ ಬಗ್ಗೆಯೂ ಅರಿವಿತ್ತು. ಹೀಗಾಗಿಯೇ ನಮ್ಮಲ್ಲಿ ಸಮಾನ ಉದ್ದೇಶ ಮತ್ತು ಗೌರವವನ್ನು ಹೊಮ್ಮಿಸುವ ದಾಖಲೆಯನ್ನು ಸಿದ್ಧಪಡಿಸಿದರು. ಆ ಸ್ಫೂರ್ತಿ ನಮಲ್ಲಿ ಇನ್ನಷ್ಟು ಪ್ರಜ್ವಲಿಸಲಿ ಎಂದು ಅದಕ್ಕಾಗಿ ನಮ್ಮನ್ನು ಪುನರ್‌ ಅರ್ಪಿಸಿಕೊಳ್ಳುವ ನಿರ್ಣಯಕ್ಕಿಂತ ಒಳ್ಳೆಯ ನಿರ್ಣಯ ಈ ಹೊಸ ದಶಮಾನಕ್ಕೆ ಬೇರೆ ಏನಿದೆ..? ಈ ಸಂಕಷ್ಟದ ಕಾಲದಲ್ಲಿ, ಭಾರತದ ಸಹಿಷ್ಣುತೆ ಮತ್ತು ಗೌರವಕ್ಕೆ ಪ್ರಜ್ವಲಿಸುವ ಉದಾಹರಣೆಯಾಗಲಿ ಎಂದು ನಮ್ಮ ಪೂರ್ವಜರು ಯೋಚಿಸಿದ್ದರೋ, ಸಂಕಷ್ಟದಲ್ಲಿರುವ ವಿಶ್ವದ ಮತ್ತೊಮ್ಮೆ ಆಶಾಕಿರಣವಾಗಲಿ, ಅದರತ್ತ ನಾವೆಲ್ಲ ಒಂದಾಗಿ ಕೆಲಸ ಮಾಡೋಣ. ಇದೇ ಹೊಸ ದಶಮಾನದ ನಮ್ಮ ಕೃತಿ ಆಗಲಿ.

LEAVE A REPLY

Please enter your comment!
Please enter your name here