ತೋಳ ಚಂದ್ರಗ್ರಹಣ ಹೇಗೆ, ಏನು,ಎಲ್ಲಿ , ಯಾವಾಗ? ಒಂದೇ ಒಂದು ಕ್ಲಿಕ್ ನಲ್ಲಿ ಸಂಪೂರ್ಣ ಮಾಹಿತಿ.

ಈ ದಶಮಾನ ಮತ್ತು ಈ ವರ್ಷದ ಎರಡನೇ ಗ್ರಹಣ ಮತ್ತು ಮೊದಲ ಚಂದ್ರಗ್ರಹಣ ಇವತ್ತು ಗೋಚರ ಆಗಲಿದೆ. ವಿಶೇಷ ಎಂದರೆ ಚಂದ್ರನ ಕೆಳಭಾಗದಲ್ಲಾಗುವ ಗ್ರಹಣವಷ್ಟೇ ಗೋಚರವಾಗಲಿದೆ. ಕರ್ನಾಟಕದಲ್ಲಿ ಗ್ರಹಣ ನೋಡಬೇಕಾದರೆ ಮಧ್ಯರಾತ್ರಿ 12 ಗಂಟೆ 40 ನಿಮಿಷದವರೆಗೂ ಕಾಯಬೇಕು.

ರಾತ್ರಿ 10 ಗಂಟೆ 37 ನಿಮಿಷಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಮಧ್ಯರಾತ್ರಿ 12.40 ನಿಮಿಷಕ್ಕೆ ಅತ್ಯಧಿಕ ಗ್ರಹಣ ಗೋಚರವಾಗಲಿದೆ. ಮಧ್ಯರಾತ್ರಿ 2 ಗಂಟೆ 42 ನಿಮಿಷಕ್ಕೆ ಗ್ರಹಣ ಮೋಕ್ಷವಾಗಲಿದೆ.

ಅಂದರೆ ಜನವರಿ 10 ರಂದು ರಾತ್ರಿ ಆರಂಭವಾಗಲಿರುವ ಗ್ರಹಣ 4 ಗಂಟೆ 5 ನಿಮಿಷದಷ್ಟು ಹೊತ್ತು ಸುದೀರ್ಘವಾಗಿರಲಿದೆ.

ಇವತ್ತು ಘಟಿಸುವ ಚಂದ್ರಗ್ರಹಣಕ್ಕೆ ತೋಳ ಚಂದ್ರಗ್ರಹಣ ಎಂದು ಹೆಸರು. ಈ ಚಂದ್ರಗ್ರಹಣ ಪೂರ್ಣ ಚಂದ್ರಗ್ರಹಣವೂ ಅಲ್ಲ, ಭಾಗಶಃ ಚಂದಗ್ರಹಣವೂ ಅಲ್ಲ. ಹೀಗಾಗಿ ಚಂದ್ರ ಕಪ್ಪಗೆ ಕಾಣಿಸಲಿದೆ.

ತೋಳ ಚಂದ್ರಗ್ರಹಣ ಎಂದು ಯಾಕೆ ಹೆಸರು..?

ಇವತ್ತು ಘಟಿಸುವ ಚಂದ್ರಗ್ರಹಣಕ್ಕೆ ತೋಳ ಚಂದ್ರಗ್ರಹಣ ಎಂದು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಹೆಸರಿಟ್ಟಿದೆ. ಹಾಗಾದರೆ ಏನಿದು ತೋಳ ಚಂದ್ರಗ್ರಹಣ..?

ಅಮೆರಿಕದ ಉತ್ತರ ಮತ್ತು ಪೂರ್ವಭಾದಲ್ಲಿ ನೆಲೆಸಿರುವ ಅಲ್ಗೋನ್‌ಕ್ವಿನ್‌ ಬುಡಕಟ್ಟು ಸಮುದಾಯ ವರ್ಷದ ಮೊದಲ ಹುಣ್ಣಿಮೆಯನ್ನು ತೋಳ ಹುಣ್ಣಿಮೆ ಎಂದು ಕರೆಯುತ್ತಾರೆ. ಅವರ ನಂಬಿಕೆಯ ಪ್ರಕಾರ ಚಳಿಗಾಲದ ಮೊದಲ ಹುಣ್ಣಿಮೆ ಇದಾಗಿದ್ದು, ಹುಣ್ಣಿಮೆಯಂದು ಮೈಕೊರೆಯುವ ಚಳಿ ಮತ್ತು ಹಿಮಪಾತದ ನಡುವೆಯೇ ತೋಳಗಳ ಹಿಂಡು ಊರ ಹೊರಗೆ ಹಸಿವಿನಿಂದ ಅರಚುತ್ತವೆಯಂತೆ. ಹೀಗಾಗಿ ಈ ಹುಣ್ಣಿಮೆಯಂದು ಘಟಿಸುವ ಗ್ರಹಣಕ್ಕೆ ತೋಳ ಗ್ರಹಣವೆಂದು ಹೆಸರು ಬಂದಿದೆ.

ಚಳಿಗಾಲದಲ್ಲಿ ಈ ಚಂದಗ್ರಹಣ ಘಟಿಸುವ ಹಿನ್ನೆಲೆಯಲ್ಲಿ ಮಂಜು ಗ್ರಹಣವೆಂದೂ ಕರೆಯಲಾಗುತ್ತದೆ.

ಹಿಂದೂಗಳ ನಂಬಿಕೆಯ ಪ್ರಕಾರ ಶಕಾಂಬರಿ ನವರಾತ್ರಿ ಉತ್ಸವದ ಕಡೆಯ ದಿನದಂದು ಹುಣ್ಣಿಮೆ ಕಾಣಿಸುವುದರಿಂದ ಶಕಾಂಬರಿ ಹುಣ್ಣಿಮೆ ಎಂದೂ ಹೆಸರುವಾಸಿ. ಹಿಂದೂ ಪಂಚಾಂಗದ ಪ್ರಕಾರ ಪೌಷ ತಿಂಗಳ ಕಡೆಯ ಹುಣ್ಣಿಮೆಯೂ ಹೌದು.

ಶ್ರೀಲಂಕಾದಲ್ಲಿ ಇವತ್ತಿನ ಹುಣ್ಣಿಮೆಯನ್ನು ದುರುತು ಪೋಯಾ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಗೌತಮ ಬುದ್ಧ ಶ್ರೀಲಂಕಾಕ್ಕೆ ಮೊದಲ ಬಾರಿಗೆ ಭೇಟಿ ಕೊಟ್ಟ ದಿನವೆಂದು ಆಚರಿಸಲಾಗುತ್ತದೆ.

ಚಂದ್ರಗ್ರಹಣ ಎಂದರೇನು..?

ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದು ಆ ಮೂಲಕ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳದಂತೆ ತಡೆದಾಗ ಘಟಿಸುವುದೇ ಚಂದ್ರಗ್ರಹಣ. ಇವತ್ತಿನ ಚಂದ್ರಗ್ರಹಣದಲ್ಲಿ ಚಂದ್ರನ ತುಸು ಭಾಗವನ್ನಷ್ಟೇ ಭೂಮಿಯ ನೆರಳು ಆವರಿಸಿಕೊಳ್ಳುತ್ತದೆ. ಭೂಮಿಯ ನೆರಳಿನ ಹೊರಮೇಲ್ಮೈ ಮೂಲಕ ಚಂದ್ರ ಹಾದುಹೋದಾಗ ಘಟಿಸುವುದೇ ಪೆನುಬ್ರಲ್‌ ಗ್ರಹಣ. ಇದು ಪೂರ್ಣ ಮತ್ತು ಭಾಗಶಃ ಗ್ರಹಣಕ್ಕಿಂತ ಸಂಪೂರ್ಣ ಭಿನ್ನ.

ಎಲ್ಲೆಲ್ಲಿ ಗೋಚರ:

ಇವತ್ತಿನ ಚಂದ್ರಗ್ರಹಣ ಏಷ್ಯಾ, ಯುರೋಪ್‌, ಆಸ್ಟ್ರೇಲಿಯಾ, ಆಫ್ರಿಕಾ, ಉತ್ತರ ಅಮೆರಿಕದ ಕೆಲವು ಪ್ರದೇಶಗಳು, ದಕ್ಷಿಣ ಅಮೆರಿಕಾದ ಪೂರ್ವ ಭಾಗ, ಫೆಸಿಪಿಕ್‌, ಅಟ್ಲಾಂಟಿಕ್‌, ಹಿಂದೂ ಮಹಾಸಾಗರ ಮತ್ತು ಆರ್ಕಟಿಕ್‌ನಲ್ಲಿ ಕಾಣಿಸಿಕೊಳ್ಳಲಿದೆ.

ಗ್ರಹಣವೂ ಏಕಾಂಗಿ ಅಲ್ಲ:

ಗ್ರಹಣವೂ ಏಕಾಂಗಿಯಲ್ಲ. ಪ್ರತಿಬಾರಿಯೂ ಚಂದ್ರಹಣ ಆದಾಗ ಸೂರ್ಯಗ್ರಹಣ ಅಥವಾ ಸೂರ್ಯಗ್ರಹಣ ಆದ ಬಳಿಕ ಚಂದ್ರಗ್ರಹಣ ಘಟಿಸುವುದು ವಾಡಿಕೆ.

ಚಂದ್ರಗ್ರಹಣವನ್ನು ಬರೀಗಣ್ಣಿನಿಂದಲೇ ನೋಡಬಹುದು.

ನಿಮ್ಮ ಊರಲ್ಲೂ ಚಂದ್ರಗ್ರಹಣ ಹೇಗೆ ಗೋಚರಿಸಲಿದೆ. ಅದರ ತ್ರೀಡಿ ಎಫೆಕ್ಟ್‌ ಚಿತ್ರವನ್ನು ನೋಡಲು ಈ ಕೆಳಗಿರುವ ಲಿಂಕ್‌ ಓಪನ್‌ ಮಾಡಿ ನಂತರ ಪಕ್ಕದಲ್ಲಿರುವ ಮ್ಯಾಪ್‌ನ ಮೇಲೆ ಕ್ಲಿಕ್‌ ಮಾಡಿ ನಿಮ್ಮ ಊರಿನ ಹೆಸರನ್ನು ಟೈಪ್‌ ಮಾಡಿ. 

https://www.timeanddate.com/

LEAVE A REPLY

Please enter your comment!
Please enter your name here