169 ಮಂದಿ ಇದ್ದ ವಿಮಾನ ಪತನ ‌..!

ಯುದ್ಧದ ಕಾರ್ಮೋಡ ಆವರಿಸಿರುವ ಸಂದರ್ಭದಲ್ಲಿಯೇ ಇರಾನ್‍ನಲ್ಲಿ ಘನಘೋರ ಅನಾಹುತ ಸಂಭವಿಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಸಮೀಪ ಉಕ್ರೇನ್ ಏರ್‍ಲೈನ್ಸ್‍ಗೆ ಸೇರಿದ ಬೋಯಿಂಗ್ 737 ವಿಮಾನ ಪತನ ಆಗಿದೆ. ಇಂದು ನಸುಕಿನ ಜಾವ ಟೆಹ್ರಾನ್‍ನ ಇಮಾಮ್ ಖೊಮೈನಿ ಏರ್‍ಪೋರ್ಟ್‍ನಿಂದ ಕೀವ್‍ಗೆ ಹೋಗಲು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ವಿಮಾನದಲ್ಲಿದ್ದ 169 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್‍ನ ಸರ್ಕಾರಿ ಟಿವಿ ವರದಿ ಮಾಡಿದೆ.

ಏರ್‍ಪೋರ್ಟ್‍ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಉಕ್ರೇನ್ ಏರ್‍ಲೈನ್ಸ್ ವಿಮಾನ ರಾಡಾರ್ ಸಂಪರ್ಕ ಕಡಿತಗೊಂಡಿತು. ಇದಾದ ಕೆಲವೇ ಸೆಕೆಂಡ್‍ಗಳಲ್ಲಿ ವಿಮಾನ ಪತನವಾಗಿದೆ. ತಾಂತ್ರಿಕ ಲೋಪದಿಂದಲೇ ಈ ಅನಾಹುತ ಸಂಭವಿಸಿದೆ ಎಂದು ಇರಾನ್ ಮಧ್ಯಮಗಳು ವರದಿ ಮಾಡಿವೆ.

ವಿಮಾನ ಪತನವಾಗುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ಗಳಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಳಿಯಲ್ಲಿದ್ದಾಗಲೇ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿರುವುದು ದೃಶ್ಯಗಳಲ್ಲಿ ಕಾಣುತ್ತದೆ. ಘಟನೆಯಲ್ಲಿ ವಿಮಾನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇರಾಕ್‍ನಲ್ಲಿರುವ ಅಮೆರಿಕ ಸೈನಿಕ ಸ್ಥಾವರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ ಸ್ವಲ್ಪ ಹೊತ್ತಿಗೆ ಈ ಪತನ ಆಗಿರುವುದು ಗಮನಾರ್ಹ ವಿಚಾರ. ದಾಳಿಯ ಸಂದರ್ಭದಲ್ಲಿಯೇ ಈ ವಿಮಾನವನ್ನು ಇರಾನ್ ಪಡೆಗಳು ಆಕಸ್ಮಾತ್ ಆಗಿ ಹೊಡೆದು ಉರುಳಿಸಿರುವ ಸಾಧ್ಯತೆಗಳ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಯಾರು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ

LEAVE A REPLY

Please enter your comment!
Please enter your name here