11 ವರ್ಷಗಳ ಬಳಿಕ ಪಾತಾಳಕ್ಕೆ ಆರ್ಥಿಕತೆ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ಅಂದಾಜು

ದೇಶದ ಆರ್ಥಿಕ ಬೆಳವಣಿಗೆ ಪಾತಾಳಕ್ಕೆ ಕುಸಿದಿದ್ದು 2019- 20ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆ ಶೇಕಡಾ 5ಕ್ಕೆ ಕುಸಿಯಲಿದೆ ಎಂದು ಸ್ವತಃ ಕೇಂದ್ರ ಸರ್ಕಾರದ ಸಂಸ್ಥೆಯೇ ಅಂದಾಜಿಸಿದೆ.

ಕಳೆದ ವರ್ಷ ಜಿಡಿಪಿ ದರ ಶೇಕಡಾ 6.8ರಷ್ಟಿತ್ತು. 11 ವರ್ಷಗಳ ಬಳಿಕ ದೇಶದ ಆರ್ಥಿಕ ಅಭಿವೃದ್ಧಿ ಧಾರಾಶಾಹಿ ಆಗಲಿದೆ. ಜಿಡಿಪಿ ಕುಸಿತಕ್ಕೆ ಮುಖ್ಯ ಕಾರಣಗಳ ಅಂದಾಜು ಹೀಗಿದೆ: (2018ರ ಬೆಳವಣಿಗೆ ಹೋಲಿಸಿದ್ರೆ)

ಉತ್ಪಾದಕ ವಲಯದ ಬೆಳವಣಿಗೆ ಶೇಕಡಾ 6.9 ರಿಂದ ಶೇಕಡಾ 2ಕ್ಕೆ ಕುಸಿತ

ಕಟ್ಟಡ ನಿರ್ಮಾಣ ವಲಯದ ಬೆಳವಣಿಗೆ ಶೇಕಡಾ 8.7 ರಿಂದ ಶೇಕಡಾ 3.2ಕ್ಕೆ ಇಳಿಕೆ

ಕೈಗಾರಿಕಾ ವಲಯದ ಬೆಳವಣಿಗೆ – ಶೇಕಡಾ 6.9ರಿಂದ ಶೇಕಡಾ 2.5ಕ್ಕೆ

ಸೇವಾ ವಲಯ – ಶೇಕಡಾ 7.5 ರಿಂದ ಶೇಕಡಾ 6.9 ಕ್ಕೆ ಕುಸಿತ

ರಿಯಲ್‌ ಎಸ್ಟೇಟ್‌, ಹಣಕಾಸು ಸೇವೆಗಳ ಬೆಳವಣಿಗೆ ಶೇಕಡಾ 7.4 ರಿಂದ ಶೇಕಡಾ 6.4 ಕ್ಕೆ

ಕೃಷಿ ಕ್ಷೇತ್ರದ ಬೆಳವಣಿಗೆ ಶೇಕಡಾ 2.9 ರಿಂದ ಶೇಕಡಾ 2.8

ಗಣಿಗಾರಿಕೆ ವಲಯದ ಬೆಳವಣಿಗೆ ಶೇಕಡಾ 1.3 ರಿಂದ ಶೇಕಡಾ 1.5

2018ರ ಜಿಡಿಪಿಗೆ ಹೋಲಿಸಿದರೆ ಉತ್ಪಾದಕ ವಲಯ, ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕಾ ವಲಯದಲ್ಲಿ ಆರ್ಥಿಕ ತಲ್ಲಣವೇ ಉಂಟಾಗಿದೆ. ಅಮೇರಿಕಾದಲ್ಲಾಗಿದ್ದ ಆರ್ಥಿಕ ಬಿಕ್ಕಟ್ಟಿನ ಬಳಿಕ ಭಾರತ  ವ್ಯವಹರಿಸುತ್ತಿರುವ ಭಾರತದ ಮೊದಲ  ಭಾರೀ ಆರ್ಥಿಕ ಹಿನ್ನಡೆ ಇದಾಗಿದೆ.

LEAVE A REPLY

Please enter your comment!
Please enter your name here