ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿನ ಭೀಕರ ಪ್ರವಾಹಕ್ಕೆ 16 ಜನ ಸಾವನ್ನಪ್ಪಿದ್ದಾರೆ. ಈ ರಾಜ್ಯಗಳಲ್ಲಿ ಇನ್ನೂ ನದಿಗಳ ಹರಿವು ಹೆಚ್ಚುತ್ತಲೇ ಇದೆ. ಅಲ್ಲಲ್ಲಿ ಭೂಕುಸಿತಗಳು ನಡೆಯುತ್ತಿವೆ.
ಗಂಗಾ ಮತ್ತು ಬ್ರಹ್ಮಪುತ್ರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 25 ಜಿಲ್ಲೆಗಳಲ್ಲಿನ ಸುಮಾರು 11 ಲಕ್ಷ ಜನ ಪ್ರವಾಹದ ಪರಿಣಾಮ ಅನುಭವಿಸುತ್ತಿದ್ದಾರೆ. ನೂತನವಾಗಿ ಆರಂಭವಾದ ಭಜಲಿ ಜಿಲ್ಲೆಯಲ್ಲಿ ಪ್ರವಾಹದ ಭೀಕರ ಪರಿಸ್ಥಿತಿ ಇದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿನ 19782.80 ಹೆಕ್ಟೇರ್ ಬೆಳೆ ಪ್ರದೇಶ ಪ್ರವಾಹದಿಂದ ಮುಳುಗಡೆಯಾಗಿದೆ. 72 ಕಂದಾಯ ವೃತ್ತಗಳ 1,510 ಗ್ರಾಮಗಳಲ್ಲಿ ಸಂಪೂರ್ಣ ನೀರು ತುಂಬಿಕೊಂಡಿದೆ. ಆರೋಗ್ಯ ತುರ್ತು ಹೊರತಾಗಿ ಯಾರೂ ಮನೆಯಿಂದ ಹೊರ ಬಾರದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ರಾಜಧಾನಿ ಗುಹಾವಟಿ ಪ್ರದೇಶದಲ್ಲಿ ಭೂಕುಸಿತವಾಗುತ್ತಿದೆ. ನೂನಮಟ್ಟಿ ಏರಿಯಾದ ಅಜಂತಾನಗರದಲ್ಲಿನ ಭೂಕುಸಿತಕ್ಕೆ 3 ಜನ ಗಾಯಗೊಂಡಿದ್ದಾರೆ.ದಿಹಿಂಗಾ ನದಿಯ ನೀರಿನ ಪ್ರಮಾಣ ಏಕಾಏಕಿ ಹೆಚ್ಚಾಗಿ ಬಂಕಾ ಜಿಲ್ಲೆಯ ಸುಬಂಕಟ್ಟ ಏರಿಯಾದ ಸೇತುವೆ ಕೊಚ್ಚಿಕೊಂಡು ಹೋಗಿದೆ.
ಅಸ್ಸಾಂ ರಾಜ್ಯದ ರಂಗಿಯ ಡಿವಿಜನ್ನ ನಲ್ಬರಿ ಮತ್ತು ಗೋಗ್ರಾಪರ್ ನಡುವಿನ ರೈಲು ಹಳಿಗಳ ಮೇಲೆ ನೀರು ಹರಿಯುತ್ತಿರುವುದರಿಂದ 10 ರೈಲುಗಳ ಸಂಚಾರ ನಿರ್ಬಂಧಿಸಲಾಗಿದೆ.
ಮೇಘಾಲಯ ರಾಜ್ಯದಲ್ಲಿನ ಪ್ರವಾಹಕ್ಕೆ ಬಾಲಿವುಡ್ ನಟ ಅರ್ಜುನ್ ಕಪೂರ್ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ವೈಯಕ್ತಿಕವಾಗಿ ಸಿಎಂ ಪರಿಹಾರ ನಿಧಿಗೆ 5 ಲಕ್ಷ ಘೋಷಣೆ ಮಾಡಿದ್ದಾರೆ.
ಎಡೆಬಿಡದೇ ಸುರಿಯುತ್ತಿರುವ ಮಳೆಗೆ ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಪ್ರವಾಹಕ್ಕೆ ಮೇಘಾಲಯದಲ್ಲಿ 13 ಜನ ಹಾಗೂ ಅಸ್ಸಾಂನಲ್ಲಿ ಭೂಕುಸಿತಕ್ಕೆ 3 ಜನ ಸಾವನ್ನಪ್ಪಿದ್ದಾರೆ.
ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ಗುರುವಾರ 272 ಮಿ.ಮೀಟರ್ ಮಳೆಯಾಗಿದೆ. ಇನ್ನೂ ಮಳೆಯಾಗುವ ಸಂಭವವಿರುವುದರಿಂದ ರೆಡ್ ಅಲರ್ಟ್ ಘೊಷಣೆ ಮಾಡಲಾಗಿದೆ.