ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆ. ಈ ಹೊತ್ತಲ್ಲಿ ವಯಸ್ಸು, ಅನಾರೋಗ್ಯ ಮತ್ತು ಇತರೆ ಕಾರಣಗಳಿಂದಾಗಿ ಬಿಜೆಪಿಯ ಹಾಲಿ 25 ಸಂಸದರ ಪೈಕಿ ಕನಿಷ್ಠ 13 ಸಂಸದರಿಗೆ ಟಿಕೆಟ್ ಸಿಗುವುದು ಅನುಮಾನವಾಗಿದೆ. ಕೆಲವರು ಈಗಾಗಲೇ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುವ ಸುಳಿವು ನೀಡಿದ್ದರೇ, ಇನ್ನೂ ಕೆಲವರು ಮರ್ಯಾದೆಗೆ ಅಂಜಿ ಕಣದಿಂದ ಹಿಂದೆ ಸರಿಯುವ ಸಂಭವ ಇದೆ.
ಯಾರಿಗೆಲ್ಲಾ ಬಿಜೆಪಿ ಟಿಕೆಟ್ ಅನುಮಾನ?
* ತುಮಕೂರು ಸಂಸದ ಬಸವರಾಜ್ – ವಯಸ್ಸಿನ ಕಾರಣ ಈಗಾಗಲೇ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.. ಕೆಲವೊಮ್ಮೆ ಸ್ಪರ್ಧಿಸುವ ಬಯಕೆಯವನ್ನು ವ್ಯಕ್ತಪಡಿಸಿದ್ದಾರೆ. ಗೊಂದಲ ಇದೆ.
* ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ – ಅನಾರೋಗ್ಯ ಕಾರಣ ಚುನಾವಣೆ ಸ್ಪರ್ಧಿಸಲ್ಲ ಎಂದು ಘೋಷಣೆ ಮಾಡಿದ್ದಾರೆ
* ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ – ಮೂರು ವರ್ಷದಿಂದ ಕ್ರಿಯಾಶೀಲರಾಗಿಲ್ಲ.. ಹೀಗಾಗಿ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ನೀಡುವುದು ಬಹುತೇಕ ಅನುಮಾನ
* ಬೆಂಗಳೂರು ಉತ್ತರ ಸಂಸದ ಸದಾನಂದ ಗೌಡ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು
* ವಿಜಯಪುರ ಸಂಸದ ರಮೇಶ್ ಜಿಗಜಿಣಗಿ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು
* ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ – ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಪುತ್ರನ ಗೆಲುವಿಗೆ ಸಾಕಷ್ಟು ಶ್ರಮ ಹಾಕಿದ್ದರು.. ಹೀಗಾಗಿ ಟಿಕೆಟ್ ಕೊಡಲ್ಲ
* ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ – ಟಿಕೆಟ್ ಕೊಡುವುದು ಅನುಮಾನ – ಸ್ವಯಂ ನಿವೃತ್ತಿ ಘೋಷಣೆ ಸಾಧ್ಯತೆ
* ಬಾಗಲಕೋಟೆ ಸಂಸದ ಪಿಸಿ ಗದ್ದೀಗೌಡರ್ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು
* ಕೊಪ್ಪಳ ಸಂಸದ ಸಂಗಣ್ಣ ಕರಡಿ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು. ಟಿಕೆಟ್ ಕೊಡದಿದ್ದರೇ ಚುನಾವಣಾ ರಾಜಕೀಯಕ್ಕೆ ಗುಡ್ಬೈ ಹೇಳುವುದಾಗಿ ಘೋಷಣೆ ಮಾಡಿದ್ದಾರೆ.
* ಬಳ್ಳಾರಿ ಸಂಸದ ವೈ ದೇವೇಂದ್ರಪ್ಪ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು
* ಬೆಳಗಾವಿ ಸಂಸದ ಮಂಗಳಾ ಅಂಗಡಿ – ಟಿಕೆಟ್ ಕೊಡುವುದು ಅನುಮಾನ.. ಸ್ವಇಚ್ಛೆಯಿಂದ ಹಿಂದೆ ಸರಿಯುವಂತೆ ಸೂಚನೆ ನೀಡಬಹುದು
* ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ – ಟಿಕೆಟ್ ನೀಡುವುದು ಅನುಮಾನ.. ಕಟೀಲ್ಗೆ ಟಿಕೆಟ್ ನೀಡಿದಲ್ಲಿ ತಾವು ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಅರುಣ್ ಕುಮಾರ್ ಪುತ್ತಿಲ ಘೋಷಣೆ ಮಾಡಿದ್ದಾರೆ. ಪುತ್ತಿಲ ಸ್ಪರ್ಧೆ ಮಾಡಿದಲ್ಲಿ ಹಿಂದುತ್ವದ ಮತದಗಳು ವಿಭಜನೆ ಆಗಬಹುದು ಎಂಬ ಭಯ. ಪುತ್ತೂರಿನಲ್ಲಿ ಪುತ್ತಿಲ ಅವರು ಬಂಡಾಯ ಅಭ್ಯಥಿರ್ಯಾಗಿ ಕಣಕ್ಕಿಳಿದು ಅತೀ ಕಡಿಮೆ ಅಂತರದಿಂದ ಸೋಲು ಕಂಡಿದ್ದರು.
* ಹಾವೇರಿ ಸಂಸದ ಶಿವಕುಮಾರ್ ಉದಾಸಿ – ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ