119 ಗಣ್ಯರಿಗೆ ಪದ್ಮ ಪ್ರಶಸ್ತಿ -ಕರ್ನಾಟಕದ ಐವರಿಗೆ ಗೌರವ

ವಿವಿಧ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆಗಳಿಗಾಗಿ ಕೊಡಮಾಡಲಾಗುವ ಪದ್ಮ ಪ್ರಶಸ್ತಿ ಘೋಷಣೆ ಆಗಿದ್ದು, ಈ ಬಾರಿ 119 ಮಂದಿ ಗಣ್ಯರಿಗೆ ಪದ್ಮ ಪ್ರಶಸ್ತಿಯನ್ನು ಕೊಡಮಾಡಲಾಗಿದೆ. ಪದ್ಮ ಪ್ರಶಸ್ತಿಗಳಲ್ಲಿ 7 ಮಂದಿಗೆ ಪದ್ಮ ವಿಭೂಷಣ, 10 ಮಂದಿ ಗಣ್ಯರಿಗೆ ಪದ್ಮಭೂಷಣ ಮತ್ತು 102 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಸಿಕ್ಕಿದೆ.

119 ಮಂದಿಯಲ್ಲಿ 29 ಮಂದಿ ಮಹಿಳೆಯರು, 10 ಮಂದಿ ವಿದೇಶಿಯರು/ಅನಿವಾಸಿ ಭಾರತೀಯರಿಗೆ ಮತ್ತು 16 ಮಂದಿಗೆ ಮರಣೋತ್ತರವಾಗಿ ಮತ್ತು ಒಬ್ಬರು ತೃತೀಯ ಲಿಂಗಿಯವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.

ಕರ್ನಾಟಕದಿಂದ ಖ್ಯಾತ ವೈದ್ಯ ಡಾ ಬಿ ಎಂ ಹೆಗ್ಡೆ, ಸಾಹಿತಿ ಚಂದ್ರಶೇಖರ ಕಂಬಾರ, ಮಾತಾ ಬಿ ಮಂಜಮ್ಮ ಜೋಗತಿ, ರಂಗಸಾಮಿ ಲಕ್ಷ್ಮೀ ನಾರಾಯಣ ಕಶ್ಯಪ್​, ಕೆ ವೈ ವೆಂಕಟೇಶ್​ ಅವರಿಗೆ ಪದ್ಮ ಪ್ರಶಸ್ತಿಗಳು ದಕ್ಕಿದೆ.  

 

LEAVE A REPLY

Please enter your comment!
Please enter your name here