ವಜ್ರಕಾಯ,ಭಜರಂಗಿ,ಭಜರಂಗಿ 2 ನಲ್ಲಿ ಜೊತೆಯಾಗಿದ್ದ ಶಿವಣ್ಣ- ಹರ್ಷ ಜೋಡಿ ಇದೀಗ ನಾಲ್ಕನೇ ಬಾರಿ ಒಂದಾಗಲಿದ್ದಾರೆ. ಇನ್ನೂ ಹೆಸರಿಡದ ಚಿತ್ರವನ್ನು
ರಮೇಶ್ ಕುಮಾರ್, ಸುಧೀಂದ್ರ ಹಾಗೂ ಅಶೋಕ್ ಕುಮಾರ್ ನಿರ್ಮಿಸಲಿದ್ದಾರೆ.
ಈಗಾಗಲೇ ಶಿವಣ್ಣನ ಜನ್ಮದಿನದಂದು ಹೆದರಬೇಡ,ಕ್ಷಮಿಸಬೇಡ ,ಬೇಟೆ ಆರಂಭ ಎಂಬ ಕಪ್ಪು ಬಿಳುಪು ಪೋಸ್ಟರ್ ರಿವೀಲ್ ಆಗಿತ್ತು. ಹೆಚ್ಚಿನ ಮಾಹಿತಿಯನ್ನು ವರಮಹಾಲಕ್ಷ್ಮಿ ಹಬ್ಬದ ದಿನದಂದು ತಿಳಿಸುವುದಾಗಿ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವಣ್ಣನ ಹಲವು ಸಿನೆಮಾಗಳು ಅಂತಿಮ ಹಂತದಲ್ಲಿದ್ದು, ಜಯಣ್ಣ ಫಿಲ್ಮ್ಸ್ ಅಡಿಯಲ್ಲಿ ತಯಾರಾದ ಭಜರಂಗಿ 2 ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.