ಅಮೂಲ್ಯಾ ಲಿಯೋನಾ ನರ್ಹೊನಾ ಹೇಳಲು ಪ್ರಯತ್ನಿಸಿದ್ದೇನು..?

ಗುರುವಾರ ಬೆಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ 19ರ ವಯಸ್ಸಿನ ತರುಣಿ ಅಮೂಲ್ಯಾ ಲಿಯೋನಾ ನರ್ಹೋನಾ, ಪಾಕಿಸ್ತಾನ್ ಜಿಂದಾಬಾದ್.. ಪಾಕಿಸ್ತಾನ್ ಜಿಂದಾಬಾದ್ ಎಂದು ಮೂರು ಬಾರಿ ಘೋಷಣೆ ಕೂಗಿದರು.

ಈ ಬೆನ್ನಲ್ಲೇ ಸಂಸದ ಅಸಾದುದ್ದೀನ್ ಓವೈಸಿ, ಕಾರ್ಪೋರೇಟರ್ ಇಮ್ರಾನ್ ಪಾಶಾ, ಪೊಲೀಸರು ಸೇರಿದಂತೆ ಹಲವರು ಬಂದು ಅಮೂಲ್ಯಾರನ್ನು ತಡೆಯಲು ಯತ್ನಿಸಿದರು. ಆಗ ಅಮೂಲ್ಯಾ ಲಿಯೋನಾ ನರ್ಹೋನಾ, ಹಿಂದೂಸ್ತಾನ್ ಜಿಂದಾಬಾದ್.. ಹಿಂದೂಸ್ತಾನ್ ಜಿಂದಾಬಾದ್.. ಹಿಂದೂಸ್ತಾನ್ ಜಿಂದಾಬಾದ್.. ಹಿಂದೂಸ್ತಾನ್ ಜಿಂದಾಬಾದ್.. ಎಂದು ನಾಲ್ಕು ಬಾರಿ ಘೋಷಣೆ ಕೂಗಿದರು..

ಅಷ್ಟರಲ್ಲಿ ಪ್ರತಿಭಟನಾ ಸಭೆಯ ಆಯೋಜಕರು ಬಂದು ಮೈಕ್ ಕಿತ್ತುಕೊಂಡರು. ಆದರೂ, ಮಾತು ಮುಂದುವರೆಸಿದ ಅಮೂಲ್ಯಾ ಲಿಯೋನಾ ನರ್ಹೋನಾ, ದ ಡಿಫರೆನ್ಸ್ ಬಿಟ್ವೀನ್ ಪಾಕಿಸ್ತಾನ್ ಜಿಂದಾಬಾದ್ ಅಂಡ್ ಹಿಂದೂಸ್ತಾನ್ ಜಿಂದಾಬಾದ್… ಅಂತಾ ಮುಂದೆ ಏನೋ ಹೇಳಲು ಪ್ರಯತ್ನಿಸಿದರು. ಆದರೆ, ಪೊಲೀಸರು ಅಮೂಲ್ಯಾ ಲಿಯೋನಾ ನರ್ಹೋನಾರನ್ನು ಬಿಡದೇ ಬಲವಂತವಾಗಿ ಎಳೆದೊಯ್ದರು.

ಮುಂದೆ ಅಮೂಲ್ಯಾ ಲಿಯೋನಾ ನರ್ಹೋನಾ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ ಪೊಲೀಸರು, ಕೋರ್ಟ್ ಮುಂದೆ ಹಾಜರುಪಡಿಸಿದರು. ಕೋರ್ಟ್ ಅಮೂಲ್ಯಾರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ಕಳೆದ ಎರಡು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಮೂಲ್ಯಾ ಇದ್ದಾರೆ.

ಚಿಕ್ಕಮಗಳೂರಿನ ಕೊಪ್ಪ ಮೂಲಕ ಅಮೂಲ್ಯಾ ಲಿಯೋನಾ ನರ್ಹೋನಾ ಪತ್ರಿಕೋದ್ಯಮ ವಿದ್ಯಾರ್ಥಿನಿ. 50ಕ್ಕೂ ಹೆಚ್ಚು ಸಿಎಎ ವಿರುದ್ಧ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಮಾತನಾಡುವ ಮೂಲಕ ಸದ್ದು ಮಾಡಿದ್ದರು. ಜನವರಿ 31ರಂದು ಮಂಗಳೂರು ಏರ್‍ಪೋರ್ಟ್‍ನಲ್ಲಿ ಪೋಸ್ಟ್ ಕಾರ್ಡ್ ಸಂಪಾದಕ ಮಹೇಶ್ ವಿಕ್ರಮ್ ಹೆಗ್ಡೆಗೆ ವಂದೇ ಮಾತರಂ ಹೇಳುವಂತೆ ಪಟ್ಟು ಹಿಡಿದು ವೀಡಿಯೋ ಮಾಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

ದೇಶಭಕ್ತ ಮಹೇಶ್‌ ವಿಕ್ರಮ್‌ ಹೆಗ್ಡೆಗೆ ವಂದೇ ಮಾತರಂ ಬರೋದೇ ಇಲ್ವಾ..?

ಫೆಬ್ರವರಿ 16ರಂದು ಟ್ವೀಟ್ ಮಾಡಿದ್ದ ಅಮೂಲ್ಯಾ ಲಿಯೋನಾ ನರ್ಹೋನಾ, ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್, ಬಾಂಗ್ಲಾದೇಶ್ ಜಿಂದಾಬಾದ್, ಶ್ರೀಲಂಕಾ ಜಿಂದಾಬಾದ್, ನೇಪಾಳ ಜಿಂದಾಬಾದ್, ಚೀನಾ ಜಿಂದಾಬಾದ್.. ದೇಶ ಯಾವುದೇ ಆಗಿರಲಿ.. ಎಲ್ಲಾ ದೇಶಗಳಿಗೂ ಜಿಂದಾಬಾದ್ ಎಂದು ಬರೆದುಕೊಂಡಿದ್ದರು.

2016ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವ ಸಾಂಸ್ಕøತಿಕ ಸಮ್ಮೇಳನದಲ್ಲಿ ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ರವಿಶಂಕರ್ ಮಾತನಾಡಿ, ಪಾಕಿಸ್ತಾನ, ಹಿಂದೂಸ್ತಾನದ ಸ್ನೇಹ ಮುಂದುವರೆಯಬೇಕು. ಜೈಹಿಂದ್ ಮತ್ತು ಪಾಕಿಸ್ತಾನ ಜಿಂದಾಬಾದ್ ಜೊತೆ ಜೊತೆಯಲ್ಲಿ ಸಾಗಬೇಕು ಎಂದಿದ್ದರು.

LEAVE A REPLY

Please enter your comment!
Please enter your name here