‌ಬಚ್ಚನ್‌ ಮತ್ತು ಆನಂದ್‌ ಮಹೀಂದ್ರಾರ ವಾಟ್ಸಾಪ್‌ ರದ್ದುಗೊಳಿಸಿ; 1,300 ಕ್ಕಿಂತ ಹೆಚ್ಚಿನ ಜನರಿಂದ ಆನ್‌ ಲೈನ್‌ ಅರ್ಜಿ

ಬಾಲಿವುಡ್ ನ ಮೆಗಾ ಸೂಪರ್‌ ಸ್ಟಾರ್‌ ಖ್ಯಾತಿಯ‌ ಹಿರಿಯ ನಟ ಅಮಿತಾಭ್‌ ಬಚ್ಚನ್‌ ಮತ್ತು ಉದ್ಯಮಿ ಆನಂದ್‌ ಮಹೀಂದ್ರ ವಾಟ್ಸಾಪ್‌ ಡಿಸೇಬಲ್‌ ಮಾಡಬೇಕೆಂದು ಫೇಸ್‌ಬುಕ್‌ ಸಿಇಒ ಮಾರ್ಕ್‌ ಝುಕರ್ ಬರ್ಗ್‌ ಅವರನ್ನು ಕೋರುವ ಅರ್ಜಿ ಆಂದೋಲನ ನಡೆಸಲಾಗುತ್ತಿದ್ದು ಈಗಾಗಲೇ 1,300 ಕ್ಕಿಂತಲೂ ಅಧಿಕ ಜನರು ಬೆಂಬಲ ಪಡೆದಿದ್ದಾರೆ.

ತನ್ನ ನಟನೆ,ವ್ಯಕ್ತಿತ್ವದ ಮೂಲಕ ಗಮನಸೆಳೆದ ಅಮಿತಾಭ್‌ ಬಚ್ಚನ್‌ ಹಾಗೂ ನ್ಯಾಯಯುತ ಕೆಲಸದ ನೀತಿ ಮತ್ತು ವಿವಿಧ ಮತ್ತು ಸಾಮಾಜಿಕ ಕಾರಣಗಳ ಬಗ್ಗೆ  ಔದಾರ್ಯಕ್ಕೆ ಹೆಸರುವಾಸಿಯಾಗಿರುವ ಮಹೀಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಇವರಿಬ್ಬರೂ ಕೆಲವೊಂದು ಸತ್ಯಕ್ಕೆ ದೂರವಾದ ಮತ್ತು ಟ್ವೀಟ್‌ ಮಾಡುವುದರ ಮೂಲಕ ಸುಳ್ಳು ಸುದ್ದಿಯನ್ನು ಪೋಸ್ಟ್‌ ಮಾಡಿದ್ದರು.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂ ಘೋಷಣೆ ಮಾಡಿದಂತಹ ಸಂದರ್ಭದಲ್ಲಿ ಬಚ್ಚನ್‌ ಅಂದು ಅಮವಾಸ್ಯೆಯಾಗಿರುವುದು ಹೀಗೆ ವೈರಸ್‌ ನಾಶವಾಗಲು ಇನ್ನೊಂದು ಕಾರಣ ಎಂದು ಟ್ವೀಟ್‌ ಮಾಡಿದ್ದರು. ಇದೊಂದು ಸುಳ್ಳುಸುದ್ದಿ ಎಂದು ಹಲವರು ಎಚ್ಚರಿಸಿದ ಬಳಿಕ ಅದನ್ನು ಡಿಲೀಟ್‌ ಮಾಡಿದ್ದರು.

ಇತ್ತೀಚೆಗೆ ಉದ್ಯಮಿ ಆನಂದ್ ಮಹೀಂದ್ರಾ  ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಎಲೆಗಳಿಂದ ಮಾಡಿದ ಮಾಸ್ಕ್‌ ಧರಿಸಿದ ಮಹಿಳೆ ಮತ್ತು ಮಗುವಿನ ಫೋಟೋವನ್ನು ಟ್ವಿಟ್ಟರ್‌ ನಲ್ಲಿ ಹಂಚಿಕೊಳ್ಳುವುದರ ಮೂಲಕ  ಈ ನೈಸರ್ಗಿಕ ಮಾಸ್ಕ್‌ ಕೊರೋನಾದಿಂದ ರಕ್ಷಿಸುತ್ತದೆ ಎಂದಿದ್ದರು. ಈ ಟ್ವೀಟ್‌ ಅನ್ನು ತಕ್ಷಣವೇ ಟ್ರೋಲ್‌ ಮಾಡಿದ ನೆಟ್ಟಿಗರು, ಇದು ನಮ್ಮ ಸರ್ಕಾರದ ಮತ್ತು ವ್ಯವಸ್ಥೆಯ ವೈಫಲ್ಯ, ಎಲೆಯಿಂದ ತಯಾರಿಸಿದ ಈ ಮಾಸ್ಕ್‌ ಕೊರೊನಾದಿಂದ ರಕ್ಷಿಸುತ್ತದೆ ಎಂಬ ಮಾಹಿತಿ ಎಲ್ಲಿಯೂ ಲಭ್ಯವಿಲ್ಲ ಎಂದಿದ್ದರು.

ಇವರಿಬ್ಬರೂ ವಾಟ್ಸಾಪ್‌ ಯುನಿವರ್ಸಿಟಿಯಲ್ಲಿ ಬರುವ ನಕಲಿ ಸುದ್ದಿಗಳಿಗೆ ಬಲಿ ಬೀಳುತ್ತಿರುವುದರಿಂದ ಅವರ ಘನತೆಯನ್ನು ಕಾಪಾಡುವ ದೃಷ್ಟಿಯಿಂದ ಅವರಿಬ್ಬರ ವಾಟ್ಸಾಪ್‌ ಅನ್ನು ಡಿಸೇಬಲ್‌ಗೊಳಿಸಲು ಮನವಿ ಮಾಡಲಾಗಿದೆ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here