ಲಾಕ್ಡೌನ್ನಿಂದ ಕಂಗೆಟ್ಟಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೇಂದ್ರ ಸರ್ಕಾರದ ಗ್ಯಾರಂಟಿಯಲ್ಲಿ ಸಾಲ ಪಡೆಯಬಹುದು ಎಂದು ಕೇಂದ್ರ ಸರ್ಕಾರ ತನ್ನ ೨೦ ಲಕ್ಷ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ನಲ್ಲಿ ಘೋಷಣೆಯಲ್ಲಿ ಹೇಳಿದೆ. ಆದರೆ ಸಾಲ ನೀಡುವುದಕ್ಕೆ ಬ್ಯಾಂಕುಗಳು ಉದ್ಯಮಿಗಳಿಗೆ ಆಘಾತಕಾರಿ ಷರತ್ತುಗಳನ್ನು ವಿಧಿಸುತ್ತಿವೆ ಎಂದು ವರದಿ ಆಗಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಮಾಲೀಕರಿಗೆ ಬ್ಯಾಂಕುಗಳು ಹೊಸ ಸಾಲ ನೀಡುವುದಕ್ಕೆ ಸಿದ್ಧವಾಗಿವೆ. ಆದರೆ ಹೊಸದಾಗಿ ಪಡೆದ ಸಾಲವನ್ನು ಈ ಹಿಂದೆ ಪಡೆದಿರುವ ಬಾಕಿ ಉಳಿಸಿರುವ ಸಾಲದ ಮರು ಪಾವತಿಗೆ ಬಳಸಬೇಕು ಎಂಬ ಷರತ್ತುಗಳನ್ನು ಬ್ಯಾಂಕುಗಳು ವಿಧಿಸಿವೆ ಎಂದು ವರದಿ ಆಗಿದೆ.
ಉದಾಹರಣೆ ಕೈಗಾರಿಕೆಯ ಮಾಲೀಕ ಬ್ಯಾಂಕ್ ೧ ಕೋಟಿ ಸಾಲ ಪಡೆದು ಬಾಕಿ ಉಳಿಸಿಕೊಂಡಿದ್ದರೆ ಆತನಿಗೆ ಬ್ಯಾಂಕುಗಳು ಹೊಸ ಸಾಲ ನೀಡುತ್ತವೆ. ಆದರೆ ಹೊಸ ಸಾಲ ಪಡೆದ ತಕ್ಷಣವೇ ಈ ಹಿಂದೆ ಪಡೆದ ೧ ಕೋಟಿ ಸಾಲದ ಮರುಪಾವತಿ ಮಾಡುವುದು ಕಡ್ಡಾಯ ಷರತ್ತಗಳನ್ನು ಬ್ಯಾಂಕುಗಳು ವಿಧಿಸುತ್ತಿವೆ. ಇದರಿಂದ ಹೊಸ ಸಾಲ ಪಡೆದು ಮತ್ತೆ ಉದ್ಯಮ ಆರಂಭಿಸುವ ಉದ್ಯಮಿಗಳ ಆಸೆಗೆ ತಣ್ಣಿರೇಚಿದಂತಾಗುತ್ತದೆ.