ಹೊಸ ವರ್ಷಕ್ಕೆ ಮೆಟ್ರೋದಿಂದ ಡಬಲ್‌ ಧಮಾಕ…!

ಬೆಂಗಳೂರು: ಮೆಟ್ರೋ ರೈಲಿನ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಬಿಎಂಆರ್‌ಸಿಎಲ್‌ ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಜನವರಿ 1 ರಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಲು ನಿರ್ಧರಿಸಿದೆ. ಈ ಮೂಲಕ ಸಾರ್ವಜನಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್‌  ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ. ಈ ಸೌಲಭ್ಯವು ವಾರದ ಎಲ್ಲ ದಿನವೂ ಮುಂದುವರೆಯಲಿದೆ.

ಈ ಬಾರಿ ಹೊಸ ವರ್ಷದ ಆಚರಣೆಯ ಪ್ರಯುಕ್ತ ಡಿ.31 ರಂದು ಮಧ್ಯರಾತ್ರಿ 2 ಗಂಟೆಯವರೆಗೂ ಮೆಟ್ರೋ ರೈಲಿನ ಅವಧಿಯನ್ನು ವಿಸ್ತರಿಸಲಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಬಿಎಂಆರ್‌ಸಿಎಲ್‌ ಡಬಲ್‌ ಧಮಾಕ ನೀಡಿದೆ.

ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಬಿಎಂಟಿಸಿ ಬಸ್‌ಗಳು ತಡರಾತ್ರಿವರೆಗೂ ಸಂಚರಿಸಿದರೂ ಕೆಲವು ಕಡೆಗಳಲ್ಲಿ ಅನಾನುಕೂಲತೆ ಆಗುತ್ತಿದ್ದರಿಂದ ಮೆಟ್ರೋ ನಿಗಮದ ಮೇಲೆ ಒತ್ತಡ ಹೆಚ್ಚಿತ್ತು.

ಡಿ.31ರ ಹೊಸ ವರ್ಷದ ಆಚರಣೆ ವೇಳೆ ಎಂ ಜಿ ರಸ್ತೆ ಮತ್ತು ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಿಂದ ಹೊರಡುವ ಮೆಟ್ರೋ ರೈಲಿನ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿತ್ತು. ಈ ಹೊರತು ಇತರ ದಿನಗಳಲ್ಲಿ ಎಂದಿನಂತೆಯೇ ರಾತ್ರಿ 11 ಕ್ಕೆ ಕೊನೆಯ ಮೆಟ್ರೋ ರೈಲು ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುತ್ತಿತ್ತು.

 

LEAVE A REPLY

Please enter your comment!
Please enter your name here