ಹೊಸ ಮಂತ್ರಿಗಳಿಗೆ ಖಾತೆ ಹಂಚಿಕೆ.. ಇದೇ ನೋಡಿ ಲಿಸ್ಟ್

ಕೊನೆಗೂ ಅಂದುಕೊಂಡಿದ್ದನ್ನು ಪಟ್ಟು ಹಿಡಿದು ಸಾಧಿಸಿದ್ದಾರೆ. ಸಚಿವ ರಮೇಶ್ ಜಾರಕಿಹೊಳಿಗೆ ಅವರು ಬಯಸಿದಂತೆ ಜಲಸಂಪನ್ಮೂಲ ಖಾತೆಯೇ ದಕ್ಕಿದೆ. ಈ ಹಿಂದೆ ಡಿಕೆ ಶಿವಕುಮಾರ್ ಅವರು ನಿಭಾಯಿಸಿದ್ದ ಜಲಸಂಪನ್ಮೂಲ ಖಾತೆಗೆ ರಮೇಸ್ ಜಾರಕಿಹೊಳಿ ಪಟ್ಟು ಹಿಡಿದಿದ್ದರು. ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ, ಸಚಿವ ರಮೇಶ್ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಿದ್ದಾರೆ.

ಸಚಿವ ಎಸ್‍ಟಿ ಸೋಮಶೇಖರ್ ಮತ್ತು ಬೈರತಿ ಬಸವರಾಜು ನಡುವೆ ನಗರಾಬಿವೃದ್ಧಿ (ಬೆಂಗಳೂರು ನಗರಾಭಿವೃದ್ಧಿ ಖಾತೆ ಅಲ್ಲ) ಖಾತೆಗಾಗಿ ನಡುವೆ ಫೈಟ್‍ನಲ್ಲಿ ಬೈರತಿ ಬಸವರಾಜು ಕೈ ಮೇಲಾಗಿದೆ. ಬೈರತಿ ಬಸವರಾಜುಗೆ ನಗರಾಭಿವೃದ್ಧಿ ಖಾತೆ ಸಿಕ್ಕಿದೆ. ಸಚಿವ ಎಸ್‍ಟಿ ಸೋಮಶೇಖರ್‍ಗೆ ಸಹಕಾರ ಖಾತೆ ಲಭ್ಯವಾಗಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಬಳಿಯೇ ಇಂಧನ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಉಳಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಕಳಿಸಿಕೊಟ್ಟ ಖಾತೆ ಹಂಚಿಕೆ ಪಟ್ಟಿಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ

> ರಮೇಶ್ ಜಾರಕಿಹೊಳಿ – ಜಲಸಂಪನ್ಮೂಲ ಸಚಿವ

> ಬೈರತಿ ಬಸವರಾಜು – ನಗರಾಭಿವೃದ್ಧಿ ಸಚಿವ

> ಎಸ್‍ಟಿ ಸೋಮಶೇಖರ್ – ಸಹಕಾರ ಸಚಿವ

> ಬಿಸಿ ಪಾಟೀಲ್ – ಅರಣ್ಯ ಸಚಿವ

> ಡಾ.ಸುಧಾಕರ್ – ವೈದ್ಯಕೀಯ ಶಿಕ್ಷಣ ಸಚಿವ

> ಆನಂದ್ ಸಿಂಗ್ – ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ

> ನಾರಾಯಣಗೌಡ -ಪೌರಾಡಳಿತ ಮತ್ತು ತೋಟಗಾರಿಕೆ ಸಚಿವ

> ಶ್ರೀಮಂತ ಪಾಟೀಲ್ – ಜವಳಿ ಸಚಿವ

> ಗೋಪಾಲಯ್ಯ – ಸಣ್ಣ ಕೈಗಾರಿಕೆ ಸಚಿವ

> ಶಿವರಾಮ್ ಹೆಬ್ಬಾರ್ – ಕಾರ್ಮಿಕ ಸಚಿವ

LEAVE A REPLY

Please enter your comment!
Please enter your name here