ಹೊಸ ಬೆಂಗಳೂರು ನಿರ್ಮಾಣಕ್ಕಾಗಿ ಮನೆಮನೆಗೂ ಅಭಿಯಾನ- ಆಪ್‌ (ಎಎಪಿ)

ಹೊಸ ಬೆಂಗಳೂರು ಚಲನಚಿತ್ರದ ಮೂಲಕ ಮನೆ-ಮನೆಗೂ ಆಮ್ ಆದ್ಮಿ ಪಕ್ಷದ ಜನ ಸಂವಾದ ಅಭಿಯಾನ.

2020ರಲ್ಲಿ ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಪ್ರಚಾರ ಮತ್ತು ದೆಹಲಿಯಲ್ಲಿ ಎಎಪಿ ಸಾಧನೆಗಳನ್ನು ಮನೆ-ಮನೆಗೆ ತಲುಪಿಸುವ ಉದ್ದೇಶದಿಂದ “ಹೊಸ ಬೆಂಗಳೂರು” ಎಂಬ 41 ನಿಮಿಷದ ಸಿನಿಮಾವನ್ನು ಆಮ್ ಆದ್ಮಿ ಪಕ್ಷವು ನಿರ್ಮಾಣ ಮಾಡಿದೆ. ಮಲ್ಲೇಶ್ವರದ ರೇಣುಕಾಂಬ ಸ್ಟೂಡಿಯೋದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಿತು.

2015ರಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಜನಪರ ಯೋಜನೆಗಳನ್ನು ಬೆಂಗಳೂರಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಚಿತ್ರವನ್ನು ನಿರ್ಮಾಣ ಮಾಡಿದೆ. ಬಿಬಿಎಂಪಿಯ 198 ವಾರ್ಡ್ಗಳ 8,000ಕ್ಕೂ ಹೆಚ್ಚು ಬೂತ್ಗಳಲ್ಲಿ ಕಿರುಚಿತ್ರ ಪ್ರದರ್ಶನ ಮಾಡಲು ಪಕ್ಷವು ನಿರ್ಧರಿಸಿದೆ.

ಅರಿವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿಯ ಎಎಪಿ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 70 ಭರವಸೆಗಳನ್ನು ಈಗಾಗಲೇ ಈಡೇರಿಸಿದೆ. ದೆಹಲಿ ಜನರಿಗೆ 20 ಸಾವಿರ ಲೀಟರ್ ನೀರು ಮತ್ತು 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಉತ್ತಮ ಆರೋಗ್ಯ ಮತ್ತು ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಸೇವೆ, ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಮತ್ತು ಬಸ್ ಮಾರ್ಷಲ್ ನೇಮಕ, ಕಲೆ ಮತ್ತು ಕೌಶಲ್ಯವೃದ್ಧಿಗೆ ಪ್ರೋತ್ಸಾಹ ಸೇರಿದಂತೆ ಭ್ರಷ್ಟಾಚಾರ ರಹಿತ ಸೇವೆ ನೀಡಿದೆ. ನಗರದಲ್ಲಿಯೂ ದೆಹಲಿ ಮಾದರಿಯ ಆಡಳಿತ ತರಲು ಬಿಬಿಎಂಪಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಎಂಬ ನಿರೂಪಣೆಯನ್ನು ಕಿರುಚಿತ್ರ ಹೊಂದಿದೆ. ‘ಹೊಸ ಬೆಂಗಳೂರು’ ಸಿನಿಮಾವನ್ನು ಹನುಮೇಶ್ ನಿರ್ದೇಶನದಲ್ಲಿ ನಿರ್ಮಾಣ ಮಾಡಲಾಗಿದೆ.

ಜನಸಂಪರ್ಕ ಕಾರ್ಯಕ್ರಮದ ಭಾಗವಾಗಿ ಪ್ರತಿ ಬೂತ್ನಲ್ಲಿಯೂ ಮನೆ ಮನೆಗೂ ಆಮ್ ಆದ್ಮಿ ಅಭಿಯಾನ, ಜನ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಮತದಾರರಿಗೆ ಆಮ್ ಆದ್ಮಿ ಪಕ್ಷದ ಸಾಧನೆಗಳು ಮತ್ತು ಬದ್ಧತೆಯ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ. ಕಿರುಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ, ಬೆಂಗಳೂರು ನಗರ ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್, ಪಕ್ಷದ ಮುಖಂಡರಾದ ಸಂತೋಷ್ ನರಗುಂದ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here