ಹೆಲಿಕಾಪ್ಟರ್‌ ದುರಂತ : ಬಾಸ್ಕೆಟ್‌ ಬಾಲ್‌ ದಂತಕಥೆ ಕೋಬಿ ಬ್ರಯಾಂಟ್‌ ನಿಧನ

ಅಮೇರಿಕಾದ ಬಾಸ್ಕೆಟ್ ಬಾಲ್‌ ಆಟಗಾರ ಕೋಬಿ ಬ್ರಯಾಂಟ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಲಾಸ್‌ ಏಂಜಲೀಸ್ ನ ಪಶ್ಚಿಮಕ್ಕಿರುವ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ.

ಈ ದುರಂತದಲ್ಲಿ ಅವರ 13ರ ಹರೆಯದ ಮಗಳು ಜಿಯನ್ನಾ ಸೇರಿದಂತೆ ಒಟ್ಟು7 ಮಂದಿ ಸಾವನ್ನಪ್ಪಿದ್ದಾರೆ. ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಬೆಟ್ಟಕ್ಕೆ ಹೆಲಿಕಾಪ್ಟರ್ ಅಪ್ಪಳಿಸಿದ ಪರಿಣಾಮ ಅವಘಡ ಸಂಭವಿಸಿದೆ ಎಂಬುದು ಪ್ರಾಥಮಿಕ ತನಿಖೆ ವೇಳೆಯಲ್ಲಿ ಪತ್ತೆಯಾಗಿದೆ.

ಬಾಸ್ಕೆಟ್‌ಬಾಲ್ ಟೂರ್ನಿಯೊಂದರಲ್ಲಿ ಭಾಗವಹಿಸಲು ಮಗಳೊಂದಿಗೆ 41ರ ಹರೆಯದ ಬ್ರ್ಯಾಂಟ್ ತೆರಳುತ್ತಿದ್ದರು ಎನ್ನಲಾಗಿದೆ.ಪ್ರಾಥಮಿಕ ತನಿಖೆ ವರದಿಯ ಪ್ರಕಾರ ಹವಾಮಾನ ವೈಪರೀತ್ಯವು ಬಹುಶಃ ಅವಘಡಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ. ದಟ್ವವಾದ ಮಂಜಿನಿಂದ ಆವೃತ್ತವಾಗಿರುವ ಹಿನ್ನೆಲೆಯಲ್ಲಿ ಬೆಟ್ಟ ಢಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಬ್ರಯಾಂಟ್‌ ನಿಧನಕ್ಕೆ ವಿಶ್ವದ ಹಲವು ದೇಶಗಳ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

LEAVE A REPLY

Please enter your comment!
Please enter your name here