ಹೆಲಿಕಾಪ್ಟರ್‌ನಿಂದ ನಾವು ಹಣ ಉದುರಿಸಲ್ಲ – PUBLIC TV ವರದಿ ಸುಳ್ಳು ಸುದ್ದಿ ಎಂದ ಪ್ರಧಾನಿ ಮೋದಿ ಸರ್ಕಾರ

ಕೊರೋನಾ ತಡೆಗಾಗಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ಮನಿ ತಂತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮುಂದಾಗಬಹುದು ಎಂದು ವರದಿ ಆಗಿತ್ತು.

ಅಂದರೆ ಭಾರತದ ಸರ್ವೋಚ್ಛ ಬ್ಯಾಂಕ್‌ ಆಗಿರುವ ಆರ್‌ಬಿಐ ಮೂಲಕ ಪ್ರಧಾನಿ ಮೋದಿ ಸರ್ಕಾರ ಅಪಾರ ಪ್ರಮಾಣದಲ್ಲಿ ನೋಟುಗಳನ್ನು ಮುದ್ರಿಸಿ ಆ ಹಣವನ್ನು ನೇರವಾಗಿ ಜನರಿಗೆ ವಿತರಣೆ ಮಾಡಬಹುದು.

ಈ ಮೂಲಕ ಲಾಕ್‌ಡೌನ್‌ನಿಂದಲೇ ಹಣವಿಲ್ಲದೇ ನಷ್ಟ ಅನುಭವಿಸುತ್ತಿರುವ ಜನರ ಆರ್ಥಿಕ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಆ ಮೂಲಕ ಬೇಡಿಕೆಯನ್ನು ಹೆಚ್ಚಿಸಿ ಆ ಮೂಲಕ ಆರ್ಥಿಕತೆಗೆ ಮತ್ತೆ ಜೀವ ತುಂಬಬಹುದು ಎಂದು ವರದಿ ಆಗಿತ್ತು.

ಆದರೆ ಈಗ ಈ ವರದಿಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಸುಳ್ಳು ಎಂದು ಹೇಳಿದೆ. ಪ್ರತಿ ಊರಲ್ಲೂ ಹೆಲಿಕಾಪ್ಟರ್‌ ಮೂಲಕ ಹಣ ಉದುರಿಸುತ್ತೇವೆ ಎನ್ನುವುದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರದ ಅಧಿಕೃತ ಮಾಹಿತಿ ಇಲಾಖೆ ಆಗಿರುವ ಪಿಐಬಿ ತನ್ನ ಫ್ಯಾಕ್ಟ್‌ ಚೆಕ್‌ನಲ್ಲಿ ಹೇಳಿದೆ.

ಪಬ್ಲಿಕ್‌ ಟಿವಿ ವರದಿಗೆ ಸೋಷಿಯಲ್‌ ಮೀಡಿಯಾಗಳಲ್ಲಿ ಬಂದ ಕೆಲ ಪ್ರತಿಕ್ರಿಯೆಗಳು:

LEAVE A REPLY

Please enter your comment!
Please enter your name here