ಹೆಚ್‍ಡಿಕೆ ಪುತ್ರ ನಿಖಿಲ್‍ಗೆ ಮದುವೆ ಫಿಕ್ಸ್.. ಹುಡುಗಿ ಯಾರು ಗೊತ್ತಾ..?

ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿ ಅವರ ಮೊಮ್ಮಗ, ನಟ ನಿಖಿಲ್ ಕುಮಾರಸ್ವಾಗೆ ಕೊನೆಗೂ ಮದುವೆ ಫಿಕ್ಸ್ ಆಗಿದೆ.

30 ವರ್ಷದ ನಿಖಿಲ್ ಕುಮಾರಸ್ವಾಮಿ ಮದುವೆ ಆಗುವ ಹುಡುಗಿ ವಿಜಯನಗರ ಕಾಂಗ್ರೆಸ್ ಶಾಸಕ ಮಾಜಿ ಮಂತ್ರಿ ಎಂ ಕೃಷ್ಣಪ್ಪ ಅವರ ಸಹೋದರ ರಿಯಲ್ ಎಸ್ಟೇಟ್ ಉದ್ಯಮಿ ಮಂಜು ಮತ್ತು ಶ್ರೀದೇವಿಯವರ ಮುದ್ದಿನ ಮಗಳು ರೇವತಿ ಆಲಿಯಾಸ್ ರುತು. ಈಕೆ ಎಂಬಿಎ ಪದವಿಧರೆ. ಇಂಟಿರಿಯರ್ ಡಿಸೈನರ್ ಆಗಿ ರೇವತಿ ಕೆಲಸ ಮಾಡುತ್ತಿದ್ದಾರೆ.

ಇಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ದಂಪತಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿ, ಮಲ್ಲತ್ತಹಳ್ಳಿಯಲ್ಲಿರುವ ಎಂ ಕೃಷ್ಣಪ್ಪನ ಸಹೋದರ ಮಂಜು ಮನೆಗೆ ಹೋಗಿ ಮದುವೆ ಮಾತುಕತೆ ಮುಗಿಸಿ ಬಂದಿದ್ದಾರೆ.

ಮೂಲಗಳ ಪ್ರಕಾರ ಶೀಘ್ರವೇ ಜಾಗ್ವಾರ್ ನಿಖಿಲ್ ಕುಮಾರ್ – ರೇವತಿ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ.

LEAVE A REPLY

Please enter your comment!
Please enter your name here