ಹಿರಿಯರ ಕೊರೋನಾ ಲಸಿಕೆಗೆ ಊಬರ್​ನಿಂದ 25 ಸಾವಿರ ರೈಡ್ಸ್ ಉಚಿತ

ಹಿರಿಯರು ಮತ್ತು ದುರ್ಬಲರು ಕೊರೋನಾ ಲಸಿಕೆ ಪಡೆಯಲು ಊಬರ್ ಸಂಸ್ಥೆ 25 ಸಾವಿರ ಉಚಿತ ರೈಡ್ಸ್ ಒದಗಿಸುವುದಾಗಿ  ಪ್ರಕಟಣೆಯಲ್ಲಿ ತಿಳಿಸಿದೆ.

ರಾಜ್ಯದಲ್ಲಿನ ಬೆಂಗಳೂರು ಮತ್ತು ಮಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ದೈಹಿಕ ದುರ್ಬಲರು ಮತ್ತು ಹಿರಿಯರು ಕೊರೋನಾ ಲಸಿಕೆ ಪಡೆಯಲು ಅವರ ಮನೆಯಿಂದ ಆಸ್ಪತ್ರೆಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ಪ್ರಯಾಣಿಸಲು ಅನುಕೂಲವಾಗಲು ಮುಂದಿನ ದಿನಗಳಲ್ಲಿ 25 ಸಾವಿರ ಉಚಿತ ರೈಡ್ಸ್​ಗಳನ್ನು ಒದಗಿಸುವುದಾಗಿ ಊಬರ್ ಸಾರಿಗೆ ಸಂಸ್ಥೆ ತಿಳಿಸಿದೆ.

ರಾಜ್ಯದ ಬೆಂಗಳೂರು ಮತ್ತು ಮಂಗಳೂರು ನಗರದ ಹಿರಿಯರು ಮತ್ತು ದೈಹಿಕ ದುರ್ಬಲರು ಊಬರ್​ ನ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here