ಹಿಂದಿಗೆ ರೀಮೇಕ್ ಆಗಲಿರುವ ದೃಶ್ಯಂ-2 ಚಿತ್ರ

ಮಲಯಾಳಂನ ದೃಶ್ಯಂ-2 ಚಿತ್ರ ಕನ್ನಡ, ತೆಲುಗಿನಲ್ಲಿ ಮಾತ್ರವಲ್ಲದೇ ಹಿಂದಿಯಲ್ಲಿಯೂ ಸಹ ರೀಮೇಕ್ ಆಗಲಿದೆ.

ಕನ್ನಡದಲ್ಲಿ ದೃಶ್ಯಂ ಚಿತ್ರದ ರೀಮೇಕ್ ನಲ್ಲಿ ನಟಿಸಿದ್ದ ರವಿಚಂದ್ರನ್  ಅವರೇ ದೃಶ್ಯಂ-2 ಚಿತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಕನ್ನಡದಲ್ಲಿ ದೃಶ್ಯಂ-2 ಚಿತ್ರ ಸೆಟ್ಟೇರಿತ್ತು.  ತೆಲುಗಿನ ರೀಮೇಕ್​ನಲ್ಲಿ ವೆಂಕಟೇಶ್ ಅವರು ನಟಿಸುತ್ತಿದ್ದಾರೆ. ತೆಲುಗಿನ ಈ ಚಿತ್ರ ಮುಗಿಯುವ ಹಂತಕ್ಕೆ ಬಂದಿದೆ. ಮೂಲ ಮಲಯಾಳಂನ ಈ ಚಿತ್ರದಲ್ಲಿ ಮೋಹನ್ ಲಾಲ್ ಅವರು ನಟಿಸಿದ್ದಾರೆ.

ಇದೀಗ ದೃಶ್ಯಂ-2 ಚಿತ್ರವನ್ನು ಹಿಂದಿ ಭಾಷೆಗೂ ಸಹ ರೀಮೇಕ್ ಮಾಡಲಾಗುತ್ತಿದ್ದು, ಪನೋರಮಾ ಸ್ಟುಡಿಯೋಸ್ ನಿರ್ಮಿಸುತ್ತಿದೆ. ದೃಶ್ಯಂ ಚಿತ್ರವನ್ನೂ ಸಹ ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ಹಿಂದಿಯಲ್ಲಿ ದೃಶ್ಯಂನಲ್ಲಿ ನಟಿಸಿದ್ದ ಅಜಯ್ ದೇವಗನ್ ಅವರೇ ದೃಶ್ಯಂ-2 ನಲ್ಲಿ ನಟಿಸಲಿದ್ದಾರೆ.

ಮಲಯಾಳಂನ ದೃಶ್ಯಂ ಚಿತ್ರ ಕನ್ನಡ, ತೆಲುಗು, ಹಿಂದಿ ಹಾಗು ಇನ್ನಿತೆ ಭಾರತೀಯ ಭಾಷೆಗಳಲ್ಲದೆ ವಿದೇಶಿ ಭಾಷೆಗಳಲ್ಲಿಯೂ ಸಹ ರೀಮೇಕ್ ಆಗಿತ್ತು. ಇದೀಗ ದೃಶ್ಯಂ-2 ಚಿತ್ರವೂ ಸಹ ಬೇರೆ ಬೇರೆ ಭಾಷೆಗಳಲ್ಲಿ ರೀಮೇಕ್ ಆಗುತ್ತಿದೆ.

LEAVE A REPLY

Please enter your comment!
Please enter your name here