ಹಾಲಿವುಡ್ ಸಿನಿಮಾ ನೆನಪಿಸುತ್ತಿದೆ ಕರೋನಾ ಸಾವುಗಳು..

2011ರಲ್ಲಿ ವಾರ್ನರ್ ಬ್ರದರ್ಸ್ ನಿರ್ಮಿಸಿದ ಹಾಲಿವುಡ್ ಸಿನಿಮಾ ಕಂಟೆಜಿಯನ್ ದೃಶ್ಯಗಳು ಈಗ ರಿಯಲ್ ಆಗಿ ಕಂಡುಬರುತ್ತಿವೆ. ಮ್ಯಾಟ್ ಡಾಮನ್ ಮತ್ತು ಕೇಟ್ ವಿನ್‍ಸ್ಲೇಟ್ ನಟಿಸಿದ ಈ ಸಿನಿಮಾವನ್ನು ನೆನಪಿಸಿಕೊಳ್ಳಲು ಕಾರಣವಿದೆ. ಈ ಸಿನಿಮಾದಲ್ಲಿ ವೈರಸ್ ಸೋಕಿ ಜನ ಸತ್ತ ರೀತಿಯೇ ಇಂದು ಚೀನಾದಲ್ಲಿ ಕರೋನಾ ವೈರಸ್ ಸೋಕಿ ಎಲ್ಲೆಂದರಲ್ಲಿ ಬಿದ್ದು ಹೋಗುತ್ತಿದ್ದಾರೆ.

ಎಲ್ಲಿ ನಿಂತವರು ಅಲ್ಲಿಯೇ ಕುಸಿದುಬೀಳುತ್ತಿದ್ದಾರೆ. ರಸ್ತೆಗಳ ಮೇಲೆ, ಬಸ್ ಸ್ಟಾಪ್‍ನಲ್ಲಿ ಜನ ಬಿದ್ದು ನರಳಾಡುತ್ತಿದ್ದಾರೆ… ಸಾವನ್ನಪ್ಪುತ್ತಿದ್ದಾರೆ. ಇದುವರೆಗೂ 26 ಮಂದಿ ಬಲಿಯಾಗಿದ್ದಾರೆ. 880ಕ್ಕೂ ಹೆಚ್ಚು ಮಂದಿ ಸೋಂಕಿಗೆ ತುತ್ತಾಗಿದ್ದಾರೆ. ಇದನ್ನೆಲ್ಲಾ ಕಂಡು ಜನ ಸಣ್ಣ ತಲೆ ನೋವು ಕಂಡುಬಂದರೂ, ಆಸ್ಪತ್ರೆಗಳಿಗೆ ಓಡುತ್ತಿದ್ದಾರೆ. ಎಲ್ಲಾ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ವೈದ್ಯರಿಗೆ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ.

ಕಂಟೆಜಿಯನ್ ಸಿನಿಮಾದಲ್ಲಿ ಆದಂತೆ, ಇಲ್ಲಿಯೂ ಬಾವಲಿಯಿಂದ ಸೋಂಕು ಹರಡಿರಬಹುದು. ಈ ಸಂಬಂಧ ಸಂಶೋಧನೆಗಳನ್ನು ನಡೆಸಿ ಎಂದು ಕಂಟೆಜಿಯನ್ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿನ ಹೆಸರು ನೋಡಿಯೇ ಮಾರಕ ವೈರಸ್‍ಗೆ ಕರೋನಾ ಎಂದು ಹೆಸರಿಟ್ಟಿರಬಹುದು ಎಂದು ಹಲವರು ಹೇಳುತ್ತಿದ್ದಾರೆ.

ಚೀನಾದಲ್ಲಿ ಬಾವಲಿಯ ಹಿಕ್ಕೆಯನ್ನು ಗೊಬ್ಬರದಂತೆ ಬಳಸಲಾಗುತ್ತದೆ. ಬಾವಲಿ ಕೊಬ್ಬಿನಿಂದ ಸಾಬೂನುಗಳನ್ನು ತಯಾರಿ ಮಾಡಲಾಗುತ್ತದೆ. ಇದರಿಂದಲೂ ವೈರಸ್ ಹಬ್ಬಿರಬಹುದು ಎನ್ನುವ ವಾದ ಕೇಳಿಬರುತ್ತಿದೆ.

ಕಂಟೆಜಿಯನ್ ಸಿನಿಮಾದ ನಾಯಕ ಪೇಷೆಂಟ್ ಜೀರೋಗೆ ಭಯಾನಕ ವೈರಸ್ ಒಂದು ಸೋಕುತ್ತದೆ. ಈ ವೈರಸ್ ವಿರುದ್ಧ ಹೋರಾಡಿ ತನ್ನನ್ನು ತಾನು ರಕ್ಷಿಸಿಕೊಳ್ಳುವ ಮೂಲಕ ಪೇಷೆಂಟ್ ಜೀರೋ ಹೀರು ಆಗುತ್ತಾನೆ. ಈ ಪಾತ್ರವನ್ನು ಮ್ಯಾಟ್ ಡಾಮನ್ ಅದ್ಭುತವಾಗಿ ನಿರ್ವಹಿಸಿದ್ದರು. ಕಂಟೆಜಿಯನ್ ಚಿತ್ರವನ್ನು ಸಾರ್ಸ್ ವೈರಸ್, ಅದರಿಂದಾದ ಸಾವುಗಳಿಂದ ಪ್ರೇರಣೆ ಹೊಂದಿ ನಿರ್ಮಿಸಲಾಗಿತ್ತು ಎಂದು ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here