ಹಸಿರು ವಲಯಗಳಲ್ಲಿ ಚಿನ್ನ ಮಾರಾಟಕ್ಕೆ ಗ್ರೀನ್‌ ಸಿಗ್ನಲ್…

ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಶದ ಚಿನ್ನಾಭರಣ ಸೇರಿದಂತೆ ಎಲ್ಲ ವ್ಯಾಪಾರ ವ್ಯವಹಾರಗಳು ಸ್ಥಗಿತಗೊಂಡಿದ್ದವು.

ಲಾಕ್‌ ಡೌನ್‌ ಇದ್ದರೂ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಗೆ ಗ್ರಾಹಕರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಚಿನ್ನದ ಮಳಿಗೆಗಳು ಆನ್ಲೈನ್ ಮುಖಾಂತರ ಮಾರಾಟ ಮಾಡಿದ್ದವು.

ಇದೀಗ ಮದುವೆ ಸಮಾರಂಭಕ್ಕೆ ಬೇಕಾದ ಆಭರಣ ಖರೀದಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹಸಿರು ವಲಯದಲ್ಲಿರುವ ಜಿಲ್ಲೆಯಲ್ಲಿ ವಾಣಿಜ್ಯ ಚಟುವಟಿಕೆ ಶುರುವಾಗಿದ್ದು, ಚಿನ್ನಾಭರಣ ವರ್ತಕರು ಸ್ಥಳೀಯ ಆಡಳಿತದಿಂದ ಅನುಮತಿ ಪಡೆದು ಕಳೆದ ಒಂದು ವಾರದಿಂದ ವ್ಯಾಪಾರ-ವಹಿವಾಟು ನಡೆಸಲು ಆರಂಭಿಸಿದ್ದಾರೆ ಎಂದು ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭನ್‌ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here