ಹಳ್ಳಿ ಹಕ್ಕಿ ವಿಶ್ವನಾಥ್‌ಗೆ ಕೈ ಕೊಟ್ರಾ ಸಚಿವ ಜಾರಕಿಹೊಳಿ..?

ಮಾಜಿ ಸಚಿವ ವಿಶ್ವನಾಥ್‌ಗೆ MLC ಸ್ಥಾನ ನೀಡುವ ವಿಚಾರದಲ್ಲಿ ಜೊತೆಗಾರರನ್ನು ಕೈ ಬಿಟ್ಟರಾ ಸಚಿವ ರಮೇಶ್ ಜಾರಕಿಹೊಳಿ ಎಂಬ ಪ್ರಶ್ನೆ ಮೂಡಿದೆ.

MLC ಸ್ಥಾನ ನೀಡುವ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಇದರಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರಿಗೆ ಕೊಡಬೇಕು ಅನ್ನುವುದನ್ನು ಅವರೇ ಚರ್ಚೆ ಮಾಡಿ ತೀರ್ಮಾನಿಸುತ್ತಾರೆ ಎಂದು ಮೈಸೂರಿನ ಸುತ್ತೂರು ಮಠದಲ್ಲಿ ಸಚಿವ ಜಾರಕಿಹೊಳಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ. ಪ್ಯಾಕೇಜ್ ವಿಚಾರವಾಗಿ ಮಾತನಾಡಿದ ಅವರು ಕೇಂದ್ರದ ವಿಶೇಷ ಪ್ಯಾಕೇಜ್ ಇನ್ನೂ ಇಲಾಖಾವಾರು ಹಂಚಿಕೆ ಆಗಿಲ್ಲ. ಕೇಂದ್ರ ಸರ್ಕಾರ ಸಂಕಷ್ಟದ ಕಾಲದಲ್ಲಿ ಅತ್ಯುತ್ತಮ ಪ್ಯಾಕೇಜ್ ಘೋಷಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here