ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸಿಎಂ ಯಡಿಯೂರಪ್ಪ ಪ್ಯಾಕೇಜ್‌ ಘೋಷಣೆ – ಯಾವ ಹಣ್ಣಿಗೆ, ಯಾವ ತರಕಾರಿಗೆ ಎಷ್ಟು ಪರಿಹಾರ..?

ಸಿಎಂ ಯಡಿಯೂರಪ್ಪ ಸರ್ಕಾರದ ಎರಡನೇ ಹಂತದ ವಿಶೇಷ ಪ್ಯಾಕೇಜ್‌ನ್ನು ಘೋಷಿಸಿದೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂಪಾಯಿಯಂತೆ ಹಣಕಾಸು ನೆರವು ಘೋಷಿಸಿದೆ.

50,083 ಹೆಕ್ಟೇರ್‌ಗಳಲ್ಲಿ ತರಕಾರಿ ಬೆಳೆದಿರುವ ರೈತರು ಮತ್ತು 41,054 ಹೆಕ್ಟೇರ್‌ಗಳಲ್ಲಿ ಹಣ್ಣು ಹಂಪಲುಗಳನ್ನು ಬೆಳೆದಿರುವ ಬೆಳೆಗಾರರಿಗೆ ಒಟ್ಟು 137 ಕೋಟಿ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.

ತರಕಾರಿ:

ಟೊಮೆಟೋ, ಹಸಿಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದುಗುಂಬಳ, ಕ್ಯಾರೆಟ್‌, ದಪ್ಪ ಮೆಣಸಿನಕಾಯಿ, ಸೊಪ್ಪ, ಹೀರೆಕಾಯಿ, ತೊಂಡೆಕಾಯಿ.

ಹಣ್ಣುಗಳು:

ಬಾಳೆ, ಪಪ್ಪಾಯ, ಟೇಬಲ್‌ ದ್ರಾಕ್ಷಿ (ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬೆಳೆದ ದ್ರಾಕ್ಷಿ), ಅಂಜೂರ, ಅನಾನಸು, ಕಲ್ಲಂಗಡಿ, ಖರ್ಬೂಜ, ಬೋರೆ ಮತ್ತು ಬೆಣ್ಣೆ ಹಣ್ಣು

ವಿದ್ಯುತ್‌ ಚಾಲಿತ ಕೈಮಗ್ಗ  ಘಟಕಗಳ ನೇಕಾರರಿಗೆ 2 ಸಾವಿರ ರೂಪಾಯಿಯನ್ನು ಘೋಷಿಸಲಾಗಿದೆ. ಇದಕ್ಕಾಗಿ 25 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.

LEAVE A REPLY

Please enter your comment!
Please enter your name here