ಸ್ವದೇಶಿ ಉತ್ನನ್ನಗಳ ಬಳಕೆ.. ಸ್ವಾವಲಂಬನೆಯ ಮೊದಲ ಹೆಜ್ಜೆ..

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಸ್ವದೇಶಿ ಉತ್ಪನ್ನಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆಚ್ಚು ಪ್ರಾಧಾನ್ಯತೆ ನೀಡಬೇಕೆಂದು ಕರೆ ನೀಡಿದ್ದರು. ಈ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ.

ಸ್ವದೇಶಿ ಉತ್ಪನ್ನಗಳ ಬಳಕೆ ಪ್ರೋತ್ಸಾಹಿಸಿ ಸ್ವಾವಲಂಬನೆ ಹೆಚ್ಚಿಸಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಎಲ್ಲಾ ಕ್ಯಾಂಟೀನ್‍ಗಳಲ್ಲಿ ದೇಶಿಯವಾಗಿ ತಯಾರು ಮಾಡಿದ ವಸ್ತುಗಳನ್ನೇ ಬಿಕರಿ ಮಾಡಲು ಆದೇಶ ನೀಡಲಾಗಿದೆ. ಈ ಆದೇಶ ಜೂನ್ 1ರಿಂದ ಜಾರಿಗೆ ಬರಲಿದೆ.

ಕೇಂದ್ರ ಪಡೆಗಳ 50 ಲಕ್ಷ ಮಂದಿ ಕುಟುಂಬ ಸದಸ್ಯರು, 10 ಲಕ್ಷ ಮಂದಿ ಯೋಧರು ಇನ್ನು ಮೇಲೆ ಸ್ವದೇಶಿ ಉತ್ಪನ್ನಗಳನ್ನೇ ಬಳಸಲಿದ್ದಾರೆ.

ಸಿಎಪಿಎಫ್ ವ್ಯಾಪ್ತಿಗೆ ಬರುವ ಸಿಆರ್‍ಪಿಎಫ್, ಬಿಎಸ್‍ಎಫ್, ಸಿಐಎಸ್‍ಎಫ್, ಐಟಿಬಿಪಿ, ಎಸ್‍ಎಸ್‍ಬಿ, ಎನ್‍ಎಸ್‍ಜಿ, ಅಸ್ಸಾಂ ರೈಫಲ್ಸ್‍ಗೆ ಸೇರಿದ ಕ್ಯಾಂಟೀನ್‍ಗಳಲ್ಲಿ ವಾರ್ಷಿಕವಾಗಿ ಅಂದಾಜು 2800 ಕೋಟಿ ಮೌಲ್ಯದ ಸ್ವದೇಶಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.

LEAVE A REPLY

Please enter your comment!
Please enter your name here