ಸ್ವಂತ ಹಣದಲ್ಲೇ ನಿತ್ಯ 2000 ಲೀ ಆಕ್ಸಿಜನ್ ನೀಡುತ್ತಿರುವ ಸಂಸದೆ ಸುಮಲತಾ

ಮಂಡ್ಯ ಜಿಲ್ಲೆಯಲ್ಲಿ ಉಂಟಾಗಿರುವ ಆಕ್ಸಿಜನ್ ಅಭಾವ ತಪ್ಪಿಸಲು ಸಂಸದೆ ಸುಮಲತಾ ಅಂಬರೀಶ  ಜಿಲ್ಲೆಯ ಆಸ್ಪತ್ರೆಗಳಿಗೆ ಪ್ರತಿನಿತ್ಯ 2000 ಲೀ ಆಕ್ಸಿಜನ್  ನೀಡುವ ಮೂಲಕ ನೆರವಾಗಿದ್ದಾರೆ.

ಇಂದು ಸಂಸದೆ ಸುಮಲತಾ ಅಂಬರೀಶ್ ಜಿಲ್ಲೆಯ ಮದ್ದೂರಿನ ಗುರುಶಾಂತಪ್ಪ ಆಸ್ಪತ್ರೆಗೆ 2000 ಲೀ ಸಾಮರ್ಥ್ಯದ 20 ಜುಂಬೋ ಸಿಲಿಂಡರ್ ಕಳುಹಿಸಿಕೊಟ್ಟಿದ್ದಾರೆ.

ಇತ್ತೀಚೆಗೆ ಕೋವಿಡ್ ನಿರ್ವಾಹಣಾ ಸಂಬಂಧ ನಡೆದ ಸಭೆಯಲ್ಲಿ ಸಂಸದರ ನಿಧಿಯಲ್ಲಿ ಹಣ ಇಲ್ಲದ ಕಾರಣ ತಮ್ಮ ಸ್ವಂತ ಹಣದಲ್ಲೇ ಪ್ರತಿನಿತ್ಯ 2000 ಲೀ ಆಕ್ಸಿಜನ್ ಕೊಡುವುದಾಗಿ ವಾಗ್ದಾನ ಮಾಡಿದ್ದರು.

ಸಂಸದೆ ಸುಮಲತಾ ಅಂಬರೀಶ್ ಕೊಟ್ಟ ಮಾತಿನಂತೆಯೇ ಇಂದು 2000 ಲೀ ಸಾಮರ್ಥ್ಯದ 20 ಜುಂಬೋ ಸಿಲಿಂಡರ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಸಂಸದೆಯ ಈ ಕಾರ್ಯಕ್ಕೆ ಸಾರ್ವಜನಿಕರಿಮದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here