ಸ್ವಂತ ಕಾರು ಖರೀದಿಸಲಾಗದವ ಪಕ್ಕದ ಮನೆಯವನ ಕಾರಿನ ಬಣ್ಣ ಚೆನ್ನಾಗಿಲ್ಲವೆಂದಂತೆ

ಗುರುವಾರ ದೆಹಲಿಯ ರಾಷ್ಟ್ರಪತಿಭವನಕ್ಕೆ ಜೆಎನ್ ಯು ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದರು, ಈ ಸಂಧರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕನ್ಹಯ್ಯ ಕುಮಾರ್ ದೊಡ್ಡ ವ್ಯಕ್ತಿಗಳು ಬಂದು ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂದರು.

ಜೆಎನ್‌ಯು ಗೆ ಭೇಟಿ ನೀಡುವ ಮೊದಲು ನರೇಂದ್ರ ಮೋದಿಯವರ ಪರವಾಗಿ ಪ್ರಚಾರ ಮಾಡುವಾಗ ದೀಪಿಕಾ ಪಡುಕೋಣೆ ದೇಶಪ್ರೇಮಿಯಾಗಿದ್ದಳು. ಜೆಎನ್‌ಯುಗೆ ಭೇಟಿ ನೀಡಿದ ತಕ್ಷಣವೇ ಆಕೆ ದೇಶದ್ರೋಹಿ ಆಗಿಬಿಟ್ಟಳು.

ಜೆಎನ್‌ಯುಗೆ ಬಂದ ದೀಪಿಕಾ ಯಾವುದೇ ಪಕ್ಷದ ಹೆಸರು ಹೇಳಿಲ್ಲ, ಘೋಷಣೆ ಕೂಗಿಲ್ಲ, ಯಾರೊಬ್ಬರ ಹೆಸರನ್ನೂ ಹೇಳಲಿಲ್ಲ. ಆಕೆ ಮೌನವಾಗಿದ್ದಳು, ಜೆಎನ್ ಯು ದಾಂಧಲೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿಯಾಗಿ ಹೋದಳು. 

ಹೀಗಿರುವಾಗ ಅದನ್ನೇ ನೆಪವಾಗಿಟ್ಟುಗೊಂಡ ಬಿಜೆಪಿ ಬೆಂಬಲಿಗರು ಆಕೆಯ ಸಿನೆಮಾವನ್ನು ಬಹಿಷ್ಕಾರ ಮಾಡಿದ್ದಾರೆ ಯಾಕೆ? ಹಾಗಾದರೆ ಜೆಎನ್ ಯು ದಾಂಧಲೆಯಲ್ಲಿ ಸರ್ಕಾರದ ಬೆಂಬಲಿಗರು ಭಾಗಿಯಾಗಿದ್ದಾರೆ ಎಂಬ ಅರ್ಥ ಅಲ್ಲವೇ? ಎಂದು ಕನ್ಹಯ್ಯ ಕುಮಾರ್‌ ಹೇಳಿದರು.

ಜೆಎನ್‌ಯುನ ಕುಲಪತಿ ಎಂ.ಜಗದೇಶ್‌ ಕುಮಾರ್‌ ವಿರುದ್ಧ ಕಿಡಿಕಾರಿದ ಕನ್ಹಯ್ಯ ಕುಮಾರ್‌ ದೀಪಿಕಾ ಪಡುಕೋಣೆಯನ್ನು ನೀವು ಟೀಕಿಸಲು ಆಕೆ ಜೆಎನ್‌ಯು ನ ಉಪಕುಲಪತಿಯಲ್ಲ, ಉಪಕುಲಪತಿಯಾದ ನೀವು ದಾಂಧಲೆಯಿಂದ ಗಾಯಗೊಂಡ ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ಭೇಟಿಯಾಗಬೇಕಿತ್ತು.

ಅದನ್ನು ಬಿಟ್ಟು ನಿಮಗೆ ಸ್ವಂತ ಕಾರು ಖರೀದಿಸಲು ಸಾಧ್ಯವಾಗದೇ ಇರುವಾಗ ಪಕ್ಕದ ಮನೆಯವರು ಖರೀದಿಸಿದ ಕಾರಿನ ಬಣ್ಣ ಚೆನ್ನಾಗಿಲ್ಲ ಎಂದು ದೂರುವ ಹಾಗಿದೆ ಎಂದು ದೀಪಿಕಾ ಪಡುಕೋಣೆಯನ್ನು ಟೀಕಿಸಿದ ಕುಲಪತಿ ಎಂ.ಜಗದೇಶ್‌ ಕುಮಾರ್‌ ವಿರುದ್ಧ ಕನ್ಹಯ್ಯ ಕುಮಾರ್‌ ಗುಡುಗಿದ್ದಾರೆ.

LEAVE A REPLY

Please enter your comment!
Please enter your name here