ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ಗೆ ಏರಿಕೆ ಮಾಡಿಕೊಂಡ ವಾಟ್ಸಪ್

ಸುಮಾರು ಎರಡು ತಿಂಗಳಿಂದ 15 ಸೆಕೆಂಡ್‍ಗೆ ಇಳಿಕೆಯಾಗಿದ್ದ ಸ್ಟೇಟಸ್ ಮಿತಿ ಸದ್ಯ ಏರಿಕೆಯಾಗಿದ್ದು ಜೊತೆಗೆ ಹೊಸ ಆಂಡ್ರಾಯ್ಡ್ ವಾಟ್ಸಪ್ 2.20.166 ಆವೃತ್ತಿ ಅಪ್‍ಡೇಟ್ ಬಿಡುಗಡೆ ಮಾಡುತ್ತಿದ್ದು, ಈಗಾಗಲೇ ಬಳಕೆದಾರರು ಈ ಪರಿಷ್ಕೃತ ಆವೃತ್ತಿಯನ್ನು ಪಡೆದುಕೊಳ್ಳಲಾರಂಭಿಸಿದ್ದಾರೆ.

ವಿಶ್ವದಲ್ಲಿ ಲಾಕ್‍ಡೌನ್ ಘೋಷಣೆಯಾದ ಲಾಕ್ ಡೌನ್ ನಿಂದಾಗಿ ವಾಟ್ಸಪ್ ಬಳಕೆದಾರ ಸಂಖ್ಯೆ ಹೆಚ್ಚಾಗಿದ್ದು, ಬಳಿಕ ಹೆಚ್ಚಿನ ಜನರು ಮನೆಯಲ್ಲೇ ಇರಬೇಕಾಗಿದ್ದರಿಂದ ಇಂಟರ್ನೆಟ್ ಬಳಕೆ ಹೆಚ್ಚಾಗಿತ್ತು.

ಆದರಲ್ಲೂ ವಾಟ್ಸಪ್ ಚಾಟ್ ಮಾಡುವವರ, ಪೋಸ್ಟ್, ವಿಡಿಯೋ ಸ್ಟೇಟಸ್ ಹಾಕುವವರ ಸಂಖ್ಯೆ ಗಣನೀಯ ಪ್ರಮಾಣಲ್ಲಿ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಸರ್ವರ್ ಗೆ ಬೀಳುತ್ತಿರುವ ಟ್ರಾಫಿಕ್ ಒತ್ತಡವನ್ನು ಕಡಿಮೆ ಮಾಡಲು ವಾಟ್ಸಪ್ ಸ್ಟೇಟಸ್ ಮಿತಿಯನ್ನು 30 ಸೆಕೆಂಡ್‍ನಿಂದ 15 ಸೆಕೆಂಡ್‍ಗೆ ಇಳಿಸಿತ್ತು.

ವಾಟ್ಸಪ್‌ ಈ ಆವೃತ್ತಿಯು ಸದ್ಯ ಭಾರತದಲ್ಲಷ್ಟೇ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರ ದೇಶಗಳಲ್ಲಿಯೂ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here