ರೈಲು ಇದೆ ಎಂಬ ವದಂತಿ – ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬಂದ ಕಾರ್ಮಿಕರು

ಮಂಗಳೂರಿನ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಇಂದು ಬೆಳಿಗ್ಗೆ ಸುಮಾರು 700 ಮಂದಿ ವಲಸೆ ಕಾರ್ಮಿಕರು ಜಮಾಯಿಸಿದ್ದು, ನಿಯಂತ್ರಿಸಲು ಪೋಲೀಸರು ಹರಸಾಹಸ ಪಡುವಂತಾಗಿದೆ.

ವಲಸೆ ಕಾರ್ಮಿಕರನ್ನು ಉಚಿತವಾಗಿ ರೈಲಿನ ಮೂಲಕ ಕಳಿಸಿಕೊಡಲಾಗುತ್ತದೆ ಎಂಬ ಮೆಸೇಜ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದನ್ನು ನೋಡಿದ ಕಾರ್ಮಿಕರು ರೈಲು ನಿಲ್ದಾಣಕ್ಕೆ ಬಂದಿದ್ದಾರೆ.

ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಬಂದಿರುವ ಈ ವಲಸೆ ಕಾರ್ಮಿಕರು ಮಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದು ಇದೀಗ ಲಾಕ್‌ ಡೌನ್‌ನಿಂದಾಗಿ ಕೆಲಸವೂ ಇಲ್ಲದೇ ಆದಾಯವೂ ಇಲ್ಲದೇ ಪರದಾಡುತ್ತಿದ್ದು ತಮ್ಮನ್ನು ರೈಲಿನಲ್ಲಿ ವಾಪಾಸ್‌ ಊರಿಗೆ ಕಳುಹಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

ಆದರೆ ಕಾರ್ಮಿಕರಿಗೆ ತೆರಳಲು ಯಾವುದೇ ರೈಲು ವ್ಯವಸ್ಥೆಯನ್ನು ಸರ್ಕಾರ ಮಾಡಿಲ್ಲ. ಕಾರ್ಮಿಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ರೈಲು ಸಂಚಾರವನ್ನು ಆರಂಭಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು.

LEAVE A REPLY

Please enter your comment!
Please enter your name here