ಸೋಮವಾರ ಮೋದಿ ಅನ್ ಲಾಕ್ 3 ಮೀಟಿಂಗ್..

ಕೊರೋನಾ ವೈರಸ್ ಬಾಧಿತರ ಸಂಖ್ಯೆ ದಿನೆ ದಿನೇ ದೇಶದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ಮತ್ತೊಮ್ಮೆ ವೀಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ಸಬೆ ಜುಲೈ 27ರಂದು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯದ ಸ್ಥಿತಿಗತಿ ಜೊತೆಗೆ ಕೊರೋನಾ ಅನ್ ಲಾಕ್ 3ರ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ. ಆಗಸ್ಟ್ ಒಂದರಿಂದ ಯಾವುದಕ್ಕೆ ರಿಲೀಫ್ ನೀಡಬೇಕು..? ನೀಡಬಾರದು ಎಂಬ ಬಗ್ಗೆ ಚರ್ಚೆ ನಡೆಸಲಿದ್ದಾರೆ.

ಕೊರೋನಾ ಶುರುವಾದ ಹೊಸತರಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿ ಪ್ರಧಾನಿ ಮೋದಿ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದರು. ಇತ್ತೀಚಿಗೆ ಅಂದರೆ ಜೂನ್ 16, 17ರಂದು ಎರಡು ದಿನಗಳ ಕಾಲ ಎಲ್ಲಾ ಸಿಎಂಗಳ ಜೊತೆ ಮೀಟಿಂಗ್ ಮಾಡಿದ್ದರು.

LEAVE A REPLY

Please enter your comment!
Please enter your name here