ಸೋಮವಾರದಿಂದ ಬಸ್‌, ಆಟೋ, ಕ್ಯಾಬ್ ಓಡಾಟಕ್ಕೆ ಅವಕಾಶ ನಿರೀಕ್ಷೆ – 4ನೇ ಲಾಕ್‌ಡೌನ್‌ನಲ್ಲಿ ಬಿಗ್‌ ರಿಲೀಫ್‌ ಸಾಧ್ಯತೆ

ಮೂರನೇ ಹಂತದ ಲಾಕ್‌ಡೌನ್‌ ಮುಗಿಯಲು ಮೂರೇ ದಿನ ಬಾಕಿ ಇರುವಂತೆ ಮೇ೧೮ರಿಂದ ಅಂದರೆ ಸೋಮವಾರದಿಂದ ನಾಲ್ಕನೇ ಹಂತದ ಲಾಕ್‌ಡೌನ್‌ ಜಾರಿ ಆಗುವುದು ಖಚಿತವಾಗಿದೆ. ಈ ನಡುವೆ ನಾಲ್ಕನೇ ಹಂತದ ಲಾಕ್‌ಡೌನ್‌ನಲ್ಲಿ ಬಹುತೇಕ ದೊಡ್ಡ ರಿಲೀಫ್‌ ನೀಡುವ ನಿರೀಕ್ಷೆ ಇದೆ.

ಸೋಮವಾರದಿಂದ ಖಾಸಗಿ, ಸರ್ಕಾರಿ ಬಸ್‌ಗಳ ಓಡಾಟಕ್ಕೆ ಅನುಮತಿ ಸಿಗುವ ನಿರೀಕ್ಷೆ ಇದೆ. ಇದರ ಜೊತೆಗೆ ಆಟೋ, ಟ್ಯಾಕ್ಸಿಗಳ ಸಂಚಾರಕ್ಕೂ ಅನುಮತಿ ಸಿಗಬಹುದು.

ಸೋಮವಾರದಿಂದ ದೇಶೀಯ ವಿಮಾನಗಳು ಅಂದರೆ ಭಾರತದ ನಗರದೊಳಗೆ ಹಾರಾಟ ನಡೆಸುವ ವಿಮಾನಗಳಿಗಷ್ಟೇ ಅನುಮತಿ ನೀಡುವ ಸಾಧ್ಯತೆ ಇದೆ.

ರೆಡ್‌ ಝೋನ್‌ ಜಿಲ್ಲೆಗಳಲ್ಲಿಯೂ ಸಲೂನ್‌,ಬ್ಯೂಟಿಪಾರ್ಲರ್‌, ಸ್ಪಾ ತೆರೆಯಲು ಅನುಮತಿ ನೀಡಬಹುದು.

ಹಾಟ್‌ಸ್ಪಾಟ್‌ಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಈ ಬಾರಿ ಪೂರ್ಣವಾಗಿ ರಾಜ್ಯಗಳಿಗೆ ನೀಡುವ ನಿರೀಕ್ಷೆ ಇದೆ.

ಕಂಟೈನ್‌ಮೆಂಟ್‌ಝೋನ್‌ ಹೊರತುಪಡಿಸಿ ಉಳಿದೆಲ್ಲ ಕಡೆಗಳಲ್ಲಿ ಜನಜೀವನ ಬಹುತೇಕ ಸಹಜ ಸ್ಥಿತಿಗೆ ಬರುವ ಸಾಧ್ಯತೆ ಇದೆ.

ಮಂಗಳವಾರ ರಾಷ್ಟ್ರೀಯ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ನಾಲ್ಕನೇ ಹಂತದ ಲಾಕ್‌ಡೌನ್‌ ಸಂಪೂರ್ಣವಾಗಿ ಭಿನ್ನವಾಗಿರಲಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಜೊತೆಗಿನ ಸಿಎಂಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಕಂಟೈನ್‌ಮೆಂಟ್‌ಝೋನ್‌ಗಷ್ಟೇ ಲಾಕ್‌ಡೌನ್‌ ಇರಲಿ, ಬೇರೆ ಕಡೆಗಳಲ್ಲಿ ರಿಲೀಫ್‌ ನೀಡುವ ಸಲಹೆ ನೀಡಿದ್ದಾರೆ.

ಮೂಲಗಳ ಪ್ರಕಾರ ಕರ್ನಾಟಕದಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳ ಓಡಾಟ, ಆಟೋ, ಟ್ಯಾಕ್ಸಿ, ಕ್ಯಾಬ್‌ಗಳ ಓಡಾಟ, ಜಿಲ್ಲೆಗಳ ನಡುವೆ ಬಸ್‌ಗಳ ಓಡಾಟಕ್ಕೆ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ.

ಜಿಮ್‌, ಪ್ರವಾಸೋದ್ಯಮ ಸ್ಥಗಳಲ್ಲಿರುವ ಹೋಟೆಲ್‌ಗಳು, ಗಾಲ್ಫ್‌ ಕ್ಲಬ್‌ಗಳನ್ನು ತೆರೆಯುವ ಬಗ್ಗೆ ಈಗಾಗಲೇ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ಸುಳಿವು ನೀಡಿದ್ದಾರೆ.

ಇವತ್ತು ಅಥವಾ ನಾಳೆ ಕೇಂದ್ರ ಸರ್ಕಾರದಿಂದ ನಾಲ್ಕನೇ ಲಾಕ್‌ಡೌನ್‌ನ ಮಾರ್ಗಸೂಚಿ ಹೊರಬೀಳುವ ನಿರೀಕ್ಷೆ ಇದೆ.

ಸಂಜೆ 7ಗಂಟೆಯಿಂದ ಬೆಳಗ್ಗೆ 7ಗಂಟೆವರೆಗಿನ ಸಂಚಾರ ನಿಷೇಧವನ್ನು ತೆಗೆದು ಹಾಕಬೇಕು, ಮಾಲ್‌ಗಳನ್ನು ಸಮ-ಬೆಸ ಸಂಖ್ಯೆ ರೂಪದಲ್ಲಿ ತೆರೆಯಲು ಅನುಮತಿ ನೀಡಬೇಕು, ಮೆಟ್ರೋ ಮತ್ತು ಬಸ್‌ಗಳ ಓಡಾಟಕ್ಕೆ ಅವಕಾಶ ನೀಡುವಂತೆ ನಿನ್ನೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿತ್ತು.

LEAVE A REPLY

Please enter your comment!
Please enter your name here