ಸೊಂದಾ ಜೈನ ಮಠದಿಂದ ಆನ್‌ಲೈನ್‌ ಕ್ವಿಜ್‌ ಸ್ಪರ್ಧೆ – ವಿಶೇಷ ಬಹುಮಾನ ಗೆಲ್ಲಿ..!

ಪ್ರಸಿದ್ಧ ಜೈನ ಮಠಗಳಲ್ಲಿ ಒಂದಾಗಿರುವ ಸೊಂದಾದಲ್ಲಿರುವ ಶ್ರೀಕ್ಷೇತ್ರ ಸ್ವಾದಿ ಜೈನ ಮಠ ಲಾಕ್‌ಡೌನ್‌ ಹೊತ್ತಲ್ಲಿ ಜೈನ ಸಮುದಾಯದವರಲ್ಲಿ ಜ್ಞಾನಾರ್ಜನೆಯನ್ನು ಮತ್ತಷ್ಟು ಉದ್ದೀಪನಗೊಳಿಸುವ ಸಲುವಾಗಿ ವಿಶೇಷ ಪ್ರಯತ್ನವೊಂದನ್ನು ಆರಂಭಿಸಿದೆ.

ಪ್ರತೀ ಭಾನುವಾರದಂದು ಜೈನ ಸಮುದಾಯದವರಿಗೆ ʻಆಚಾರ್ಯ ಶ್ರೀ ಅಕಲಂಕಸ್ವಾಮಿʼ ಹೆಸರಲ್ಲಿ ಜೈನ ಧಾರ್ಮಿಕ ಕ್ವಿಜ್‌ನ್ನು ನಡೆಸುತ್ತಿದೆ.

ಆನ್ ಲೈನ್ ಲಿಂಕ್ ಇಲ್ಲಿದೆ.

https://docs.google.com/forms/d/e/1FAIpQLSe-tIONVd4YwsTbfthDpISEmFE9Qm-COQv3FR10ZlqPUheFAQ/viewform

ಈ ಧಾರ್ಮಿಕ ರಸಪ್ರಶ್ನೆ ಆನ್‌ಲೈನ್‌ ಮೂಲಕ ನಡೆಯಲಿದೆ.

ಪ್ರತೀ ಭಾನುವಾರ ಬೆಳಗ್ಗೆ 7:30ರಿಂದ ಸಂಜೆ 7:30ರವರೆಗೆ ಆನ್‌ಲೈನ್‌ ಧಾರ್ಮಿಕ ಕ್ವಿಜ್‌ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಸರಿಯಾದ ಉತ್ತರ ನೀಡುವ ಮೊದಲ 10 ಜನರಿಗೆ ಬಹುಮಾನವಾಗಿ ಜೈನ ಧಾರ್ಮಿಕ ಪುಸ್ತಕಗಳನ್ನು ವಿಜೇತರ ವಿಳಾಸಕ್ಕೆ ಕಳುಹಿಸಲಾಗುವುದು.

ಪ್ರತೀ ಭಾನುವಾರ ಬೆಳಗ್ಗೆ 7:30ಕ್ಕೆ ಆನ್‌ಲೈನ್‌ ಧಾರ್ಮಿಕ ಕ್ವಿಜ್‌ನ ಲಿಂಕ್‌ನ್ನು ಸೊಂದಾ ಮಠ ನೀಡುತ್ತದೆ.

ನಾಳೆ ಅಂದರೆ ಮೇ 31ರಂದು ಭಾನುವಾರದಂದು ಆನ್‌ಲೈನ್‌ ಮೂಲಕ ಕ್ವಿಜ್‌ ಸ್ಪರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here