ಇತ್ತೀಚೆಗೆ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ,ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಮೂರುಪಟ್ಟು ಹೆಚ್ಚು ಪ್ರಕರಣಗಳು ದಾಖಲು. ಸೈಬರ್‌ ಕ್ರೈಂಗಳನ್ನು ಸಂಬಂಧಿಸಿದ ದೂರುಗಳನ್ನು ಆನ್‌ಲೈನ್‌ ಮೂಲಕ ಸಲ್ಲಿಸುವಂತಹ ವ್ಯವಸ್ಥೆ ಕಲ್ಪಿಸಿದ್ದರೂ ಸಹ ವಂಚಕರ ಸಂಖ್ಯೆ ಕಡಿಮೆಯಾಗುತ್ತಿಲ್ಲ.

ಆನ್‌ ಲೈನ್‌ ಫ್ರಾಡ್ ಕೇಸ್ ಗಳು ಪತ್ತೆಯಾಗೋದು ಬಹಳ ಕಡಿಮೆ, ಹೀಗಾಗಿ ವಂಚಕರೆಲ್ಲರೂ ಆನ್ ಲೈನ್ ಫ್ರಾಡ್ ನ ದುರಾಸೆಗೆ ಬಿದ್ದಿದ್ದಾರೆ. ಕೂತಲ್ಲೆ ಕೆಲವೇ ನಿಮಿಷಗಳಲ್ಲೇ ಲಕ್ಷಾಂತರ ರೂಪಾಯಿ ವಂಚನೆ ನಡೆಸುತ್ತಿರುವ ಕ್ರಿಮಿನಲ್ ಗಳು ಇಂತಹ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.

ಆನ್ ಲೈನ್ ಸೈಬರ್‌ ಅಪರಾಧ ಪ್ರಕರಣಗಳನ್ನು ನಿರ್ವಹಿಸುವ ಠಾಣೆಗಳೂ ಸಹ ಕಡಿಮೆ ಇವೆ. ಸಾವಿರಾರು ಕೇಸ್ ಗಳಿಗೆ ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಾಗಿರುವುದರಿಂದ ಇಲ್ಲಿ ಸಿಬ್ಬಂದಿಗಳ ಕೊರತೆಯ ಹಿನ್ನಲೆಯಲ್ಲಿ ಕೇಸ್ ಗಳ ಕಡೆ ಹೆಚ್ಚಾಗಿ ಗಮನ ನೀಡದ ಪೊಲೀಸರು ಸಾಮಾನ್ಯ ಪೋಲೀಸ್‌ ಠಾಣೆಗಳಲ್ಲಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳುತ್ತಿರುವುದರಿಂದ ಸೈಬರ್‌ ಕ್ರೈಂಗಳಿಗೆ ಕಡಿವಾಣ ಹಾಕಲಾಗುತ್ತಿಲ್ಲ.

ಕೆಲವೊಂದು ಮಾಹಿತಿಗಳ ಪ್ರಕಾರ ಮೊಬೈಲ್ ಬಳಕೆ ಹೆಚ್ಚಿದಂತೆ ಸೈಬರ್ ಕ್ರೈಂಗಳೂ ಹೆಚ್ಚಳವಾಗುತ್ತಿವೆ ಎಂದು ತಿಳಿದುಬರುತ್ತಿದೆ. 2017-2018-2019 ರಲ್ಲಿನ ಸೈಬರ್ ಕ್ರೈಂ ಪ್ರಕರಣಗಳ ಅಂಕಿ ಅಂಶ

                                      ಡೆಬಿಟ್ ಕ್ರೆಡಿಟ್ ಕಾರ್ಡ್
2017-880
2018-2446
2019- 3745                                          ಉದ್ಯೋಗ ವಂಚನೆ ಪ್ರಕರಣ
2017-172
2018-382
2019-482

                                            ಎಟಿಎಂ ದುರ್ಬಳಕೆ ಪ್ರಕರಣ
2017-395
2018-663
2019-2414

                                              ಮ್ಯಾಟ್ರಿಮೋನಿ ವಂಚನೆ

2017-20
2018-45
2019-80

                                                    ಬ್ಯುಸಿನೆಸ್ ವಂಚನೆ
2017-60
2018-68
2019-142

ಒಎಲ್ಎಕ್ಸ್‌  ವಂಚನೆ
2017-290
2018-945
2019-2052

                                                             ಲಾಟರಿ ಫ್ರಾಡ್
2017-53
2018-53
2019-87

LEAVE A REPLY

Please enter your comment!
Please enter your name here