ಸುಶಾಂತ್ ನಿಗೂಢ ಸಾವು.. ಸಂಚಲನ ಮೂಡಿಸಿದೆ ಶಾಕಿಂಗ್ ವೀಡಿಯೋ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವಿನ ಬಗ್ಗೆ ಚರ್ಚೆಗಳು ನಿಂತಿಲ್ಲ. ಇಂತಹ ಹೊತ್ತಲ್ಲಿ ಪ್ರಮುಖ ಚರ್ಮರೋಗ ತಜ್ಞೆ ಡಾ. ಮೀನಾಕ್ಷಿ ಮಿಶ್ರಾ, ಶೇರ್ ಮಾಡಿದ ವೀಡಿಯೋ ಇದೀಗ ಸಂಚಲನ ಮೂಡಿಸಿದೆ.

ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ. ಹತ್ಯೆ ಎಂದು ವೀಡಿಯೋದಲ್ಲಿ ಹೇಳಲಾಗಿದೆ. ತಮ್ಮ ವಾದಕ್ಕೆ ಪೂರಕವಾಗಿ ಡಾ ಮೀನಾಕ್ಷಿ ಈ ವೀಡಿಯೋ ಶೇರ್ ಮಾಡಿದ್ದಾರೆ. ಮುಖ್ಯವಾಗಿ ಸುಶಾಂತ್ ಮುಖದ‌ ಮೇಲೆ ಮತ್ತು ಇತರೆಡೆ ಅಗಿರುವ ಗಾಯಗಳ ಬಗ್ಗೆ ವಿವರಿಸಿದ್ದಾರೆ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆಯೂ ಡಾ.ಮಿಶ್ರಾ ವಿವರಿಸಿದ್ದಾರೆ.

ಇದೇ ವೀಡಿಯೋವನ್ನು ಕೇಂದ್ರದ ಮಾಜಿ ಸಚಿವ ಸುಬ್ರಹ್ಮಣ್ಯನ್ ಸ್ವಾಮಿ ಸಹ ರೀ ಟ್ವೀಟ್ ಮಾಡಿರೋದು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.

LEAVE A REPLY

Please enter your comment!
Please enter your name here