ಸುಳ್ಳು ಸುದ್ದಿ ಹಬ್ಬಿಸಿದ ಆರೋಪ – ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ, ಬಿಜೆಪಿ ರಾಷ್ಟ್ರೀಯ ವಕ್ತಾರರ ವಿರುದ್ಧ ಮಾನನಷ್ಟ ಕೇಸ್‌

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂಬ ಆರೋಪದಡಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಯ ಐಟಿ ಸೆಲ್‌ನ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಮಾಳ್ವೀಯ ವಿರುದ್ಧ ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಅಧ್ಯಕ್ಷ ಶ್ರೀನಿವಾಸ್‌ ಬಿ ವಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರಾ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಏಪ್ರಿಲ್‌ ೨೧ರಂದು ಅಂದರೆ ಇವತ್ತು ಬೆಳಗ್ಗೆ ೧೦.೪೫ ನಿಮಿಷಕ್ಕೆ ಅಮಿತ್‌ ಮಾಳ್ವೀಯ ಮತ್ತು ಸಂಬಿತ್‌ ಪಾತ್ರಾ ಇಬ್ಬರೂ ತಮ್ಮ ಟ್ವಿಟ್ಟರ್‌ ಖಾತೆಯಿಂದ ಅಕ್ರಮ ಮದ್ಯ ಸಾಗಾಟದ ವೀಡಿಯೋವೊಂದನ್ನು ಟ್ವೀಟಿಸಿದ್ದರು. ಮದ್ಯ ಸಾಗಾಟಕ್ಕೆ ಬಳಸಲಾದ ವೆಹಿಕಲ್‌ ಯುವ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ್‌ಗೆ ಸೇರಿದ್ದು ಎಂದು ಇಬ್ಬರೂ ಟ್ವೀಟಿಸಿದ್ದರು.

ಈ ಪೋಸ್ಟ್‌ ಮೂಲಕ ನನ್ನ ಕಕ್ಷಿದಾರನ ಘನತೆ ಗೌರವಕ್ಕೆ ಧಕ್ಕೆ ಆಗಿದೆ ಎಂದು ಶ್ರೀನಿವಾಸ್‌ ಪರ ವಕೀಲ ಡಾ. ಸುರೇಂದರ್‌ ಸಿಂಗ್‌ ಹೂಡಾ ನೋಟಿಸ್‌ನಲ್ಲಿ ಹೇಳಿದ್ದಾರೆ.

ಆದರೆ ಸಂಬಿತ್‌ ಪಾತ್ರ ದೆಹಲಿಯ ವಸಂತ್‌ಕುಂಜ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಪ್ರತಿಯ ಜೊತೆಗೆ ಕಾರಿನಲ್ಲಿರುವುದು ಶ್ರೀನಿವಾಸ್‌ ಎನ್ನುವ ಮತ್ತಷ್ಟು ಟ್ವೀಟ್‌ಗಳನ್ನ ಮಾಡಿದ್ದಾರೆ.

 

 

 

LEAVE A REPLY

Please enter your comment!
Please enter your name here