ಸುಳ್ಯ: ಪ್ರವೀಣ್ ನೆಟ್ಟಾರ್ ಕನಸಿನ ಮನೆಗೆ ಭೂಮಿ ಪೂಜೆ; ಮಾತು ಉಳಿಸಿಕೊಂಡ ಸಂಸದ ಕಟೀಲ್

ಸುಳ್ಯ: ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಅವರ ಕುಟುಂಬಸ್ಥರಿಗೆ ಭರವಸೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಪ್ರವೀಣ್ ಕನಸಿನ ಮನೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ‌.

ಇಂದು ಬೆಳಗ್ಗೆ 9.30 ಕ್ಕೆ ದಿ.ಪ್ರವೀಣ್ ಕನಸಿನ ಮನೆಗೆ ಪ್ರವೀಣ್ ಸಮಾಧಿ ಬಳಿಯ ಜಾಗದಲ್ಲೇ 2.700 ಚ.ಅಡಿಯ ನೂತನ ಮನೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

ಜಿಲ್ಲೆಯ ಪ್ರತಿಷ್ಠಿತ ಮೊಗರೋಡಿ ಕನ್ಸ್ ಸ್ಪೆಕ್ಷನ್ ಕಂಪನಿಗೆ ಪ್ರವೀಣ್ ಮನೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಾಗಿದ್ದು, ಶೀಘ್ರವೇ ಮನೆ‌ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ‌.

ಭೂಮಿ ಪೂಜೆ ಕಾರ್ಯದ ವೇಳೆ ಉಡುಪಿ ಉಸ್ತುವಾರಿ, ಹಾಲಿ ಸುಳ್ಯ ಶಾಸಕ ಅಂಗಾರ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಮುರಳಿಕೃಷ್ಣ ಹಂಸತಡ್ಕ, ಪ್ರವೀಣ್ ತಂದೆ ತಾಯಿ, ಪತ್ನಿ ನೂತನ ಸೇರಿದಂತೆ ಕುಟುಂಬಸ್ಥರು, ಸ್ಥಳೀಯರೂ ಸೇರಿದಂತೆ ಹಲವರು ಉಪಸ್ಥಿತರಿದ್ದರು.