ಸುಧಾಮೂರ್ತಿ ಮೆಚ್ಚಿದ ಸಿನಿಮಾ ಯಾವುದು ಗೊತ್ತಾ..?

ಇನ್ಫೊಸಿಸ್ ಫೌಂಡೇಷನ್ ಮುಖ್ಯಸ್ಥೆ, ಅಚ್ಚ ಕನ್ನಡತಿ ಸುಧಾಮೂರ್ತಿಯವರು ಕಲೋಪಾಸಕರು. ಕನ್ನಡ, ತೆಲುಗು, ಹಿಂದೆ ಹೀಗೆ ಹಲವು ಭಾಷೆಯ ಸಿನಿಮಾಗಳನ್ನು ಆಗಾಗ ನೋಡುತ್ತಾ ಇರುತ್ತಾರೆ. ಇತ್ತೀಚಿಗೆ ಸುಧಾಮೂರ್ತಿ ಅವರಿಗೆ ಇಷ್ಟವಾದ ಸಿನಿಮಾ ರಂಗಸ್ಥಳಂ ಅಂತೆ. ಮೆಗಾಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ತೇಜ್ ನಟನೆಯ ರಂಗಸ್ಥಳಂ ಅದ್ಭುತವಾಗಿತ್ತು ಅಂತಾ ಅವರು ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಚಿಕ್ಕವಯಸ್ಸಲ್ಲಿ ಹೆಚ್ಚಾಗಿ ವರನಟ ರಾಜ್ ಕುಮಾರ್, ಎನ್‍ಟಿಆರ್ ಸಿನಿಮಾಗಳನ್ನು ನೋಡುತ್ತಿದ್ದೆ. ನಮಗೆ ಭಗವಾನ್ ಕೃಷ್ಣ ಹೇಗಿರ್ತಾನೆ ಅನ್ನೋದು ಗೊತ್ತಿಲ್ಲ. ಆದರೆ, ಎನ್‍ಟಿಆರ್ ಸಿನಿಮಾಗಳನ್ನು ನೋಡಿ, ಆತನೇ ಕೃಷ್ಣ ಎಂದು ಭಾವಿಸುತ್ತಿದ್ದೆ ಎಂದು ಸುಧಾಮೂರ್ತಿ ಹೇಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here