ಸೀಮಿತ ಲಾಕ್‌ಡೌನ್‌ಗೆ ಬಿಎಸ್‌ವೈ ಒಲವು.. ಪ್ರಧಾನಿ ಮುಂದೆ ಹೇಳಿದ್ದೇನು..?

ಕೊರೋನಾ ನಿಯಂತ್ರಣ ಮತ್ತು ಲಾಕ್‌ಡೌನ್ ಭವಿಷ್ಯ, ಕುಸಿದ ಆರ್ಥಿಕತೆಗೆ ಚಿಕಿತ್ಸೆ ನೀಡುವುದನ್ನೇ ಗಮನದಲ್ಲಿರಿಸಿಕೊಂಡು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದ್ದಾರೆ. ಸದ್ಯದ ಸಂದರ್ಭದಲ್ಲಿ ಹೇಗೆ ಮುಂದುವರೆಯಬೇಕು.. ಎದುರಿಸುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಕೈಗೊಳ್ಳಬೇಕಾದ ವ್ಯೂಹಗಳ ಬಗ್ಗೆ ಚರ್ಚೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಕಾರ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಡಿದ್ದಾರೆ.

ಕೊರೋನಾ ವಿಜೃಂಭಿಸುವ ಸಂದರ್ಭದಲ್ಲಿ ಬಹುತೇಕ ಮುಖ್ಯಮಂತ್ರಿಗಳು ಲಾಕ್‌ಡೌನ್ ವಿಸ್ತರಣೆಗೆ ಒಲವು ತೋರಿಸಿದ್ದಾರೆ. ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಸುಮಾರು ೨೦ ನಿಮಿಷಗಳ ಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿ ಚರ್ಚೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳನ್ನು ವಿವರಿಸಿದರು. ಹೊಸ ಜೀವನ ಶೈಲಿ ಅಳವಡಿಸಿಕೊಳ್ಳುವ ಸಂಬOಧ ಪ್ರಜೆಗಳಲ್ಲಿ ಜಾಗೃತಿ ಮೂಡಿಸಿ, ಮನ ಒಲಿಸಬೇಕಿದೆ ಎಂಬ ಅಭಿಪ್ರಾಯ ಮಂಡಿಸಿದರು.

ಮುಖ್ಯಮಂತ್ರಿ ಮಂಡಿಸಿದ ವಿಷಯಗಳ ಮುಖ್ಯಾಂಶಗಳು

# ಕೊರೋನಾ ಸೋಂಕಿನ ಪ್ರಮಾಣ ಆಧರಿಸಿ ಜಿಲ್ಲಾವಾರು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನು ಗುರುತಿಸಬಾರದು.
# ಸೋಂಕು ಕಂಡು ಬಂದ ಪ್ರದೇಶಗಳನ್ನು ಮಾತ್ರ ನಿರ್ಬಂಧಿತ ವಲಯಗಳನ್ನಾಗಿ ಗುರುತಿಸಬೇಕು
# ಸೋಂಕಿತರ ಮನೆ ಸುತ್ತಲಿನ ೫೦ ರಿಂದ ೧೦೦ ಮೀಟರ್ ಪ್ರದೇಶವನ್ನು ಮಾತ್ರ ಕಂಟೈನ್‌ಮೆAಟ್ ವಲಯ ಎಂದು ಘೋಷಿಸಬೇಕು.
# ಕೊರೋನಾ ಇಲ್ಲದ ಸ್ಥಳಗಳಲ್ಲಿ ವಾಣಿಜ್ಯ ಚಟುವಟಿಕೆಗಳು, ಸಮೂಹ ಸಾರಿಗೆಗೆ ಅನುಮತಿ ನೀಡಬೇಕು.
# ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ನೀಡುವುದರಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತೆ ಆಗುತ್ತದೆ. ರಾಜ್ಯ ಸರ್ಕಾರಗಳು ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ.
# ಕನಿಷ್ಠ ಮೇ ಅಂತ್ಯದವರೆಗೆ ದೇಶಿಯ ಮತ್ತು ಅಂತಾರಾಷ್ಟಿçÃಯ ವಿಮಾನಯಾನ ಬೇಡ
# ಅಂತರ್ ರಾಜ್ಯ ಮತ್ತು ವಿದೇಶಗಳಿಂದ ಬಂದವರನ್ನು ಕಡ್ಡಾಯವಾಗಿ ೧೪ ದಿನ ಕ್ವಾರಂಟೇನ್ ಮಾಡಬೇಕು
# ತೀವ್ರ ರೋಗ ಲಕ್ಷಣ ಹೊಂದಿರುವವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಬೇಕು.
# ರೋಗ ಲಕ್ಷಣಗಳಿಲ್ಲದ ಅಥವಾ ತೀವ್ರವಲ್ಲದ ಪ್ರಕರಣಗಳಲ್ಲಿ ಮನೆಯಲ್ಲಿಯೇ ಕಟ್ಟುನಿಟ್ಟಿನ ಐಸೋಲೇಷನ್‌ನಲ್ಲಿ ಇಡಬೇಕು

LEAVE A REPLY

Please enter your comment!
Please enter your name here