ರಾಜ್ಯದಲ್ಲಿ ಸ್ವ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಮೂಲ ಉದ್ದೇಶದೊಂದಿಗೆ ಕರ್ನಾಟಕ ಸರ್ಕಾರ ‘ಮುಖ್ಯಮಂತ್ರಿ ಸ್ವ ಉದ್ಯೋಗ ಯೋಜನೆ’ (CMEGP) ಪರಿಚಯಿಸಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರ ಸುಮಾರು 10 ಲಕ್ಷದವರೆಗೆ ಸಾಲ ನೀಡಲಿದ್ದು, ಶೇ. 25-35 ರವರೆಗೆ ಸಬ್ಸಿಡಿ ಸಿಗಲಿದೆ. ಗ್ರಾಮೀಣ ಭಾಗದ ಉದ್ಯಮಿಗಳಿಗೆ ಹೆಚ್ಚು ಅನುಕೂಲಕರವಾಗಲಿ ಎಂಬುದು ಸಿಎಂ ಸ್ವಉದ್ಯೋಗ ಯೋಜನೆಯ ಪ್ರಾಥಮಿಕ ಧ್ಯೇಯವಾಗಿದೆ. ಉದ್ಯಮ ಪ್ರಾರಂಭಿಸುವವರಿಗೆ ಸರ್ಕಾರ ಇದಕ್ಕೆ ಬೇಕಾಗುವ ಹಣಕಾಸು ಸಹಕಾರ, ತರಬೇತಿ ನೀಡುತ್ತದೆ.
ಕರ್ನಾಟಕ ಖಾದಿ ಮತ್ತು ಗ್ರಾಮ ಕೈಗಾರಿಕೆ ಮಂಡಳಿ (KVIB) ಹಾಗು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಹಯೋಗದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಿದ್ದು, ಫಲಾನುಭವಿಗಳು ಯೋಜನೆಯ ಒಟ್ಟು ವೆಚ್ಚದ ಶೇ. 5-10ರಷ್ಟು ಪಾವತಿಸಬೇಕಾಗುತ್ತದೆ. ಸರ್ಕಾರ ಸ್ವಉದ್ಯೋಗ ಯೋಜನೆಗಳ ಸಾಲದ ಮೇಲೆ ಶೇ. 25-35 ರವರೆಗೆ ಸಬ್ಸಿಡಿ ನೀಡಲಿದೆ.
ಈ ಬ್ಯಾಂಗಳಲ್ಲಿ ಸಾಲ ಯೋಜನೆ ಸೌಲಭ್ಯ
ಸಾರ್ವಜನಿಕ ವಲಯದ ಬ್ಯಾಂಕುಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (RRB)
ಅರ್ಹತೆಗಳೇನು..?
ಯೋಜನೆ ಕರ್ನಾಟಕದ ಮೂಲನಿನಾಸಿಗಳಿಗೆ ಮಾತ್ರ ಅನ್ವಯವಾಗಲಿದ್ದು, ಸಾಮಾನ್ಯ ವರ್ಗ ವಯಸ್ಸು ಮಿತಿ: 21-35 ವರ್ಷ ಮಿತಿಯಲ್ಲಿರಬೇಕು. ಈ ಯೋಜನೆಯ ಶೇ. 10ರಷ್ಟು ವೆಚ್ಚ ಪಾವತಿಸಬೇಕು. ಪ.ಜಾತಿ, ಪ.ಪಂಗಡ, ಒಬಿಸಿ, ಮಹಿಳೆ, ಅಲ್ಪಸಂಖ್ಯಾತ ವಯಸ್ಸು ಮಿತಿ: 21-45 ವರ್ಷ ಯೋಜನೆಯ ಶೇ. 5ರಷ್ಟು ವೆಚ್ಚ ಪಾವತಿಸಬೇಕು. ಫಲಾನುಭವಿಗಳಿಗೆ ಉದ್ಯಮಶೀಲತ್ವ ಅಭಿವೃದ್ಧಿ ತರಬೇತಿ (ಇಡಿಪಿ) ಕಡ್ಡಾಯವಾಗಿದ್ದು, ಒಂದು ಕುಟುಂಬ ಕೇವಲ ಒಂದು ಯುನಿಟ್ ಸ್ಥಾಪಿಸಬಹುದು. ಮೂರು ವರ್ಷಗಳ ಅವಧಿಗೆ ಗ್ರಾಮೀಣ ಭಾಗದ ಯುವಕರಿಗೆ ಮಾತ್ರ ಸಬ್ಸಿಡಿ ನೀಡಲಾಗುವುದು.
ಈ ದಾಖಲೆಗಳು ಅಗತ್ಯ
ಯೋಜನಾ ವರದಿ (Project plan) ಪಾಸ್ಪೋರ್ಟ್ ಪೋಟೊ
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ದಾಖಲೆಗಳು ರೇಷನ್ ಕಾರ್ಡ್/ವೋಟರ್ ಐಡಿ
ಇಡಿಪಿ ಟ್ರೈನಿಂಗ್ ಸರ್ಟಿಫಿಕೇಟ್
ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ
ಗ್ರಾಮ ಪಂಚಾಯತಿ ಅನುಮತಿ ಪತ್ರ
ಜಾತಿ ಪ್ರಮಾಣ ಪತ್ರ
ಎಕ್ಸ್ ಸರ್ವಿಸ್ ಮೆನ್
ಅಂಗವಿಕಲ ಪ್ರಮಾಣಪತ್ರ
ಉಪಕರಣ ಖರೀದಿ ಪಟ್ಟಿ
ಆನ್‌ಲೈನ್ ಅರ್ಜಿ ಸಲ್ಲಿಕೆ ಹೇಗೆ ?
ಸಿಎಂ ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಯಡಿ ಸಾಲ ಪಡೆಯಲು ಅರ್ಜಿ ಸಲ್ಲಿಸಲು ಈ ವಿಧಾನ ಅನುಸರಿಸಿ.
ಹಂತ 1: ಮೊದಲು ಅಧಿಕೃತ ವೆಬ್‌ಸೈಟ್ cmegp.kar.nic.in ಗೆ ಭೇಟಿ ನೀಡಿ
ಹಂತ 2: ಮುಖಪುಟದಲ್ಲಿ, “ಆನ್‌ಲೈನ್‌ನಲ್ಲಿ ಅನ್ವಯಿಸು” ಲಿಂಕ್‌ನಲ್ಲಿ ಕ್ಲಿಕ್ ಮಾಡಿ ಮತ್ತು ನಂತರ CMEGP ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಕೆ ಪುಟದಲ್ಲಿ ಕ್ಲಿಕ್
ಹಂತ 3: ಇಲ್ಲಿ ಅಭ್ಯರ್ಥಿಗಳು ಏಜೆನ್ಸಿಯನ್ನು ಆಯ್ಕೆ ಮಾಡಬೇಕಾಗುತ್ತದೆ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು “ಮುಂದುವರಿಯಿರಿ” ಬಟನ್ ಅನ್ನು ಕ್ಲಿಕ್ ಮಾಡಿ.
ಹಂತ 4: ನಂತರ, ಸಿಎಂ ಸ್ವಯಂ ಉದ್ಯೋಗ ಯೋಜನೆಯ ಆನ್‌ಲೈನ್ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
ಹಂತ 5: ಈ CMEGP ಅರ್ಜಿ ನಮೂನೆಯಲ್ಲಿ, ಅಭ್ಯರ್ಥಿಗಳು ಅಗತ್ಯ ವಿವರಗಳಾದ, ವಿಳಾಸ, ಅರ್ಹತೆ, EDP ತರಬೇತಿ, ಉದ್ದೇಶಿತ ಘಟಕ, ಯೋಜನಾ ವೆಚ್ಚ, ಹಣಕಾಸು ವಿಧಾನಗಳು, ಬ್ಯಾಂಕ್ ವಿವರಗಳು, ಸಾಲದ ವಿವರಗಳು, ಅನುದಾನ ಮತ್ತು ಸಬ್ಸಿಡಿ ವಿವರಗಳನ್ನು ನಮೂದಿಸಬೇಕು ಮತ್ತು ” ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಉಳಿಸು” ಬಟನ್ ಕ್ಲಿಕ್ ಮಾಡಿ.
ಹಂತ 6: ಇದಲ್ಲದೆ, ಅಭ್ಯರ್ಥಿಗಳು ಮುಖ್ಯಮಂತ್ರಿ ಸ್ವಯಂ ಉದ್ಯೋಗ ಯೋಜನೆಯ ಪೂರ್ಣಗೊಂಡ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು.