ಸಿಇಟಿ ಪರೀಕ್ಷೆ ವೇಳಾಪಟ್ಟಿ-2020

ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯುವುದಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ ಈ ಬಾರಿ ಏಪ್ರಿಲ್‌ 22 ಮತ್ತು 23 ರಂದು ನಡೆಯಲಿದೆ.

22 ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ಗಣಿತ

23 ರಂದು ಬೆಳಿಗ್ಗೆ 10.30 ರಿಂದ 11.50 ರವರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರವರೆಗೆ ರಸಾಯನಶಾಸ್ತ್ರ (ಎಲ್ಲಾದಕ್ಕೂ ತಲಾ 60 ಅಂಕ) ನಡೆಯಲಿದೆ. 

ಹೊರನಾಡು ಮತ್ತು ಗಡಿನಾಡ ಕನ್ನಡಿಗ ಅಭ್ಯರ್ಥಿಗಳಿಗೆ 24 ರಂದು ಬೆಳಿಗ್ಗೆ 11.30 ರಿಂದ 12.30 ರವರೆಗೆ ಕನ್ನಡ ಭಾಷಾ ಪರೀಕ್ಷೆ (50 ಅಂಕ) ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

ಹಾಗೆಯೇ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್‌ ಕೋರ್ಸ್‌‌ (ಆಯರ್ವೇದ,ಯುನಾನಿ, ಹೋಮಿಯೋಪತಿ) ಮಾಡಲಿಚ್ಛಿಸುವವರು ನೀಟ್‌ ಪರೀಕ್ಷೆ,  ಆರ್ಕಿಟೆಕ್ಚರ್‌ ಕೋರ್ಸ್ ನ ಪ್ರವೇಶಕ್ಕಾಗಿ ʼನಾಟಾʼ ಪರೀಕ್ಷೆ ಬರೆಯಬೇಕು.

ಹೆಚ್ಚಿನ ಮಾಹಿತಿಗೆ ಪ್ರಾಧಿಕಾರದ ವೆಬ್ ಸೈಟ್‌ ಗೆ ಭೇಟಿ ನೀಡಿ : https://cetonline.karnataka.gov.in/kea/

LEAVE A REPLY

Please enter your comment!
Please enter your name here