ಸಾವು ಬದುಕು.. ಅಮ್ಮನ ಮಡಿಲಲ್ಲೇ ಎಲ್ಲಾ – ಮನಕಲಕುವ ಫೋಟೋ

ಎಷ್ಟೇ ಕಷ್ಟ ಬಂದರೂ ಮಗುವನ್ನು  ಎದೆಗವುಚಿ ರಕ್ಷಿಸುವ ತಾಯಿ  ಕಥನಗಳನ್ನು ಸಾಕಷ್ಟು ನೋಡಿರುತ್ತೀರಿ. ಇದು ಅಮ್ಮನ ಕಥೆ ಅಲ್ಲ, ಸಾವಿನ ದವಡೆಯಲ್ಲಿದ್ದ ಅಮ್ಮನನ್ನು ಕಡೆಯವರೆಗೂ ಬಿಟ್ಟುಕೊಡದ ಕಂದಮ್ಮನ  ಕಥೆ.. ಅಮ್ಮನ ಜೊತೆ  ಕಂದಮ್ಮ ಕೂಡ ಚಿರತೆಗೆ  ಆಹಾರವಾದ ನೈಜ ಕಥೆ.

ತಾಯಿ  ಕೋತಿಯನ್ನು ಚಿರತೆ ಕಚ್ಚಿ  ಹಿಡಿದಾಗ  ಕಂದಮ್ಮ, ಬೆದರಲಿಲ್ಲ. ಬೆದರಿದರೂ ಅಮ್ಮನ ಎದೆಯೇ ಸೇಫ್ ಎನಿಸಿರಬೇಕು. ತಾಯಿ  ಕೋತಿಯ ಎದೆಗೆ ಅವುಚಿಕೊಂಡೆ ಕಂದಮ್ಮ  ಇತ್ತು. ಈ ಫೋಟೋ ಈಗ ಜಗತ್ತಿನ ಹೃದಯ ಕಲಕಿದೆ.

ಜಾ0ಬಿಯಾದ ನ್ಯಾಷನಲ್ ಪಾರ್ಕ್ ನಲ್ಲಿ ನಡೆದ  ಹೃದಯವಿದ್ರಾವಕ ಸನ್ನಿವೇಶವನ್ನು ಶಫೀಕ್ ಮುಲ್ಲಾ ಎಂಬ ಫೋಟೋಗ್ರಾಫರ್ ಸೆರೆ ಹಿಡಿದಿದ್ದಾರೆ..

ಕೊನೆಯಲ್ಲಿ ತಾಯಿ  ಕೋತಿಯ ಜೊತೆ ಕಂದಮ್ಮ ಕೋತಿಯನ್ನೂ ಚಿರತೆ  ಸ್ವಾಹ  ಮಾಡಿತು  ಎಂಬುದನ್ನು ಇಲ್ಲಿ ಪ್ರತ್ಯೇಕವಾಗಿ  ಹೇಳಬೇಕಿಲ್ಲ.

LEAVE A REPLY

Please enter your comment!
Please enter your name here