ಸಾಲ ಕೊಡುತ್ತಿದ್ದ ತಲೈವಾ ರಜಿನಿಕಾಂತ್‌ – ಬಡ್ಡಿ ಎಷ್ಟು ಗೊತ್ತಾ..? ಐಟಿಗೆ ಕೊಟ್ಟ ಉತ್ತರ ಏನಿತ್ತು..?

ಇದು ಸ್ವತಃ ಸೂಪರ್‌ ಸ್ಟಾರ್‌, ತಲೈವಾ ರಜಿನಿಕಾಂತ್‌ ಘೋಷಿಸಿಕೊಂಡಿರುವ ಸತ್ಯ. ಹೌದು ರಜಿನಿಕಾಂತ್‌ ಬಡ್ಡಿಗೆ ಸಾಲ ಕೊಡ್ತಿದ್ದರಂತೆ. ಅದೂ ಬರೋಬ್ಬರೀ ಶೇಕಡಾ 18ರ ಬಡ್ಡಿ ದರದಲ್ಲಿ. ಆದಾಯ ತೆರಿಗೆ ಇಲಾಖೆಗೆ ಪಡೆಯಪ್ಪ ಸಲ್ಲಿಸಿರುವ ದಾಖಲೆಗಳಲ್ಲಿ ಈ ಮಾಹಿತಿ ಬಯಲಾಗಿದೆ.

2002-2003 ಮತ್ತು 2004-2005ರ ಹಣಕಾಸು ವರ್ಷದಲ್ಲಿ ರಜಿನಿಕಾಂತ್‌ ಆದಾಯ ತೆರಿಗೆ ವಂಚಿಸಿದ್ದಾರೆ ಎಂದು ದಾಖಲಿಸಿಕೊಂಡಿದ್ದ ಕೇಸನ್ನು ಇತ್ತೀಚೆಗಷ್ಟೇ ಐಟಿ ಇಲಾಖೆ ವಾಪಸ್‌ ಪಡೆದಿದೆ.

ವರದಿಗಳ ಪ್ರಕಾರ 2002-2003ರಲ್ಲಿ ರಜಿನಿಕಾಂತ್‌ ಕೊಟ್ಟಿದ್ದ ಸಾಲ 2.63 ಕೋಟಿ ರೂಪಾಯಿ. ಆ ಸಾಲಕ್ಕೆ ಬಡ್ಡಿ ರೂಪದಲ್ಲಿ ಬಂದ ಹಣ 1.45 ಲಕ್ಷ ರೂಪಾಯಿ. ಈ ಲಾಭಕ್ಕೆ ತೈಲವಾ ತೆರಿಗೆಯನ್ನೂ ಕಟ್ಟಿದ್ದರು.

ಕೆ ಗೋಪಾಲಕೃಷ್ಣ ರೆಡ್ಡಿ ಎಂಬವರಿಗೆ 1.95 ಕೋಟಿ ರೂ., ಅರ್ಜುನ್‌ಲಾಲ್‌ಗೆ 60 ಲಕ್ಷ ರೂಪಾಯಿ, ಸಸಿ ಬೂಷಣ್‌ಗೆ 5 ಲಕ್ಷ ಮತ್ತು ಸೋನು ಪ್ರತಾಬ್‌ಗೆ 3ಲಕ್ಷ ರೂಪಾಯಿ ಸಾಲ ಕೊಟ್ಟಿದ್ದರು. 2003-04ರಲ್ಲಿ ಮುರಳಿ ಪ್ರಸಾದ್‌ಗೆ 10 ಲಕ್ಷ ರೂಪಾಯಿ ಸಾಲ ನೀಡಿದ್ದರು.

ಆದರೆ ಸಾಲ 2004-05ರಲ್ಲಿ ಕೊಟ್ಟಿದ್ದ 1.71 ಕೋಟಿ ರೂಪಾಯಿ ಸಾಲ ವಾಪಸ್‌ ಬಂದಿಲ್ಲ ಎಂದು ಘೋಷಿಸಿಕೊಂಡಿದ್ದ ರಜಿನಿಕಾಂತ್‌ ಆ ವರ್ಷ 33.60ಲಕ್ಷ ರೂಪಾಯಿ ಸಾಲ ತೋರಿಸಿದ್ದರು.

2002ರಿಂದ 2005ರವರೆಗೆ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ ಎಂದು ಐಟಿಗೆ ಉತ್ತರಿಸಿದ್ದ ರಜಿನಿಕಾಂತ್‌ ತಮ್ಮ ಒಡೆತನದ ರಾಘವೇಂದ್ರ ಕಲ್ಯಾಣ ಮಂಟಪ ಮತ್ತು ಕೊಂಡಬಾಕಂನಲ್ಲಿರುವ ಅರುಣಾಚಲ ಗೆಸ್ಟ್‌ಹೌಸ್‌ನಿಂದ ಆದಾಯ ಗಳಿಸಿದ್ದಾಗಿ ಘೋಷಿಸಿಕೊಂಡಿದ್ದರು.

ಆದರೆ ತಾವು ಲೇವಾದೇವಿ ವ್ಯವಹಾರ ಮಾಡಿಲ್ಲ ಎಂದೂ ಆದಾಯ ತೆರಿಗೆ ಇಲಾಖೆಗೆ ರಜಿನಿಕಾಂತ್‌ ಸ್ಪಷ್ಟಪಡಿಸಿದ್ದರು.

LEAVE A REPLY

Please enter your comment!
Please enter your name here